ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇ-ಮೇಲ್‌ ಮೂಲಕ ಮತದಾನ ಮಾಡಲು ಅವಕಾಶ ಕೋರಿ ಕೋರ್ಟ್‌ಗೆ ಅರ್ಜಿ

By Manjunatha
|
Google Oneindia Kannada News

ಬೆಂಗಳೂರು, ಮೇ 02: ಇ-ಮೇಲ್ ಮೂಲಕ ಮತದಾನ ಮಾಡಲು ಅವಕಾಶ ಕೊಡಬೇಕು ಎಂದು ವಕೀಲರೊಬ್ಬರು ಹೈಕೊರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಜಯನಗರದ ಮಿಟ್ಟಿ ನರಸಿಂಹ ಮೂರ್ತಿ ಎಂಬ ವಕೀಲರು ಈ ಅರ್ಜಿ ಸಲ್ಲಿಸಿದ್ದು, ತಮ್ಮ ಮತಗಟ್ಟೆಗಳಿಂದ ದೂರವಿದ್ದು, ಹೊರ ಊರಿನಲ್ಲಿ ಅಥವಾ ವಿದೇಶಗಳಲ್ಲಿ ಇರುವ ಮತದಾರರಿಗೆ ಇ-ಮೇಲ್ ಮುಖಾಂತರ ಮತ ಚಲಾಯಿಸಲು ಅನುಮತಿ ನೀಡುವಂತೆ ಕೋರಿ ಈ ಮನವಿ ಸಲ್ಲಿಸಿದ್ದಾರೆ.

ಮತದಾರರನ್ನು ಸ್ಥಳದಲ್ಲೇ ನೋಂದಣಿ ಮಾಡಲು ನೂತನ ಆ್ಯಪ್ ಮತದಾರರನ್ನು ಸ್ಥಳದಲ್ಲೇ ನೋಂದಣಿ ಮಾಡಲು ನೂತನ ಆ್ಯಪ್

'ಬಹಳಷ್ಟು ಸಂಖ್ಯೆಯಲ್ಲಿ ಮತದಾರರು ಉದ್ಯೋಗ, ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಾರಣಕ್ಕಾಗಿ ತಮ್ಮ ಮತಕ್ಷೇತ್ರಗಳಿಂದ ಹೊರಗೆ ಇರುತ್ತಾರೆ. ಹೀಗಾಗಿ ಅವರು ತಮ್ಮ ಮತ ಚಲಾಯಿಸುವ ಇರಾದೆ ಹೊಂದಿದ್ದರೂ ಸಾಧ್ಯವಾಗುವುದಿಲ್ಲ‌ ಅಂತಹವರಿಗೆ ಇ-ಮೇಲ್ ಮತದಾನ ಸಹಾಯವಾಗುತ್ತದೆ ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.

PIL submitted to high court seeking permision for e-mail voting

ಇ-ಮೇಲ್‌ನಲ್ಲಿ ಮತ ಹಾಕುವ ಮತದಾರರಿಗೆ ಬ್ಯಾಂಕ್‌ಗಳು ನೀಡುವಂತಹ ಒ.ಟಿ.ಪಿ (ಒನ್ ಟೈಮ್ ಪಾಸ್ ವರ್ಡ್) ನೀಡಬೇಕು. ಅದನ್ನು ಬಳಸಿ ಸುರಕ್ಷಿತವಾಗಿ ಮತ ಹಾಕುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ಮತ ಚಲಾವಣೆ ಪ್ರಮಾಣವೂ ಏರಿಕೆಯಾಗುತ್ತದೆ. ಆರ್ಥಿಕ ಉಳಿತಾಯವೂ ಆಗುತ್ತದೆ ಎಂಬುದು ನರಸಿಂಹ ಮೂರ್ತಿ ವಾದ.

ಸಹಿ ಹಾಕುವುದನ್ನೆ ಮರೆತರು ರಾಮಲಿಂಗಾ ರೆಡ್ಡಿ, ರದ್ದಾಗುತ್ತಾ ನಾಮಪತ್ರ? ಸಹಿ ಹಾಕುವುದನ್ನೆ ಮರೆತರು ರಾಮಲಿಂಗಾ ರೆಡ್ಡಿ, ರದ್ದಾಗುತ್ತಾ ನಾಮಪತ್ರ?

ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ರಜಾಕಾಲದ ಪೀಠ ಪ್ರತಿವಾದಿ ವಕೀಲರಿಗೆ ಅರ್ಜಿ ಪ್ರತಿ ನೀಡುವಂತೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

English summary
A lawyer of Jayanagar submitted a PIL in high court for seeking permission for e-mail voting. He argued that many of voters moved other place from their constituency they wont vote so e-mail voting will help them casting their vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X