ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ರೈಲು ಸಂಚಾರದಲ್ಲಿ ಶುಕ್ರವಾರದಿಂದ ಬದಲಾವಣೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11 : ನಮ್ಮ ಮೆಟ್ರೋ ರೈಲುಗಳ ಸಂಚಾರದ ಸಮಯದಲ್ಲಿ ಶುಕ್ರವಾರದಿಂದ ಬದಲಾವಣೆ ಆಗಲಿದೆ. ರಾತ್ರಿ 9ರ ತನಕ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸಲಿದೆ.

5 ತಿಂಗಳ ಬಳಿಕ ಸೆಪ್ಟೆಂಬರ್ 7ರಂದು ನಮ್ಮ ಮೆಟ್ರೋ ಸಂಚಾರ ಆರಂಭವಾಗಿತ್ತು. ಶುಕ್ರವಾರದಿಂದ ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭ

ಸೆ.7ರಂದು ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು. ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30 ರಿಂದ 7.30ರ ತನಕ ಮಾತ್ರ ರೈಲು ಓಡುತ್ತಿತ್ತು.

5 ತಿಂಗಳ ಬಳಿಕ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ 5 ತಿಂಗಳ ಬಳಿಕ ಸಂಚಾರ ಆರಂಭಿಸಿದ ನಮ್ಮ ಮೆಟ್ರೋ

BMRCL

ಸೆ. 9ರಂದು ನಾಗಸಂದ್ರ-ಯಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು. ಬೆಳಗ್ಗೆ ಮತ್ತು ಸಂಜೆ 3 ಗಂಟೆಗಳ ಕಾಲ ಮಾತ್ರ ರೈಲು ಸಂಚಾರವಿತ್ತು.

7 ದಿನ ಮೆಟ್ರೋ ಕಾರ್ಡ್‌ ಬಳಸಿಲ್ಲ ಎಂದರೆ ಹಣ ಕಡಿತ 7 ದಿನ ಮೆಟ್ರೋ ಕಾರ್ಡ್‌ ಬಳಸಿಲ್ಲ ಎಂದರೆ ಹಣ ಕಡಿತ

ಶುಕ್ರವಾರದಿಂದ ಮೆಟ್ರೋ ರೈಲು ಸಂಚಾರ ಸಹಜ ಸ್ಥಿತಿಗೆ ಬರಲಿದೆ. ಬೆಳಗ್ಗೆ 7 ರಿಂದ ರಾತ್ರಿ 9ರ ತನಕ ಪೀಕ್ ಅವರ್‌ನಲ್ಲಿ 5 ನಿಮಿಷ, ಉಳಿದ ಸಮಯದಲ್ಲಿ 10 ನಿಮಿಷಕ್ಕೊಂದು ರೈಲು ಓಡಲಿದೆ.

ಪ್ರಸ್ತುತ ಸ್ಮಾರ್ಟ್‌ ಕಾರ್ಡ್ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಬಹುದಾಗಿದೆ. ಟೋಕನ್ ಕೊಡುವ ವ್ಯವಸ್ಥೆ ಇಲ್ಲವಾಗಿದೆ. ಪ್ರತಿ ರೈಲಿನಲ್ಲಿ 400 ಜನರು ಮಾತ್ರ ಸಂಚರಿಸಬಹುದು.

English summary
BMRCL said that Namma Metro rail will run till 9 pm from Friday. Metro services resume in Bengaluru city after a gap of 5 months on September 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X