ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ದಿನ ಮೆಟ್ರೋ ಕಾರ್ಡ್‌ ಬಳಸಿಲ್ಲ ಎಂದರೆ ಹಣ ಕಡಿತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06: ಸೋಮವಾರದಿಂದ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗುತ್ತಿದೆ. ಸ್ಮಾರ್ಟ್‌ ಕಾರ್ಡ್ ಹೊಂದಿರುವವರು ಮಾತ್ರ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.

ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಲು ಬಿಎಂಆರ್‌ಸಿಎಲ್ ಅಪ್ಲಿಕೇಶನ್ ಹೊರತರಲಿದ್ದು, ಸೆ. 7ರಂದು ಅದನ್ನು ಬಿಡುಗಡೆ ಮಾಡಲಾಗುತ್ತದೆ. ಮೆಟ್ರೋ ನಿಲ್ದಾಣದಲ್ಲಿ ಕಾರ್ಡ್‌ಗಳ ರಿಚಾರ್ಜ್ ಮಾಡುವ ವ್ಯವಸ್ಥೆ ಇನ್ನು ಇರುವುದಿಲ್ಲ.

ಚಿತ್ರಗಳು: ನಮ್ಮ ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಸಿದ್ಧತೆ ಚಿತ್ರಗಳು: ನಮ್ಮ ಮೆಟ್ರೋ ಸಂಚಾರಕ್ಕೆ ಅಂತಿಮ ಹಂತದ ಸಿದ್ಧತೆ

ಕಾರ್ಡ್ ರಿಚಾರ್ಜ್ ಮಾಡುವ ಮುನ್ನ ಒಮ್ಮೆ ಗಮನಿಸಿ. ಏಳು ದಿನಗಳ ಕಾಲ ನೀವು ಕಾರ್ಡ್ ಬಳಕೆ ಮಾಡಿಲ್ಲ ಎಂದರೆ 8ನೇ ದಿನ ಅದರಲ್ಲಿರುವ ಪೂರ್ಣ ಹಣ ಕಡಿತಗೊಳ್ಳಲಿದೆ. ಬಿಎಂಆರ್‌ಸಿಎಲ್ ಈ ಕುರಿತು ನಿಯಮಗಳನ್ನು ಬದಲಾವಣೆ ಮಾಡಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡುವಂತಿಲ್ಲ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡುವಂತಿಲ್ಲ

Use Namma Metro Card Within Seven Days

ಇಷ್ಟು ದಿನ ಕಾರ್ಡ್ ರಿಚಾರ್ಜ್ ಮಾಡಿದ 60 ದಿನಗಳ ಕಾಲ ಅದನ್ನು ಬಳಕೆ ಮಾಡಬಹುದಿತ್ತು. ಈಗ 7 ದಿನ ಕಾರ್ಡ್ ಬಳಕೆ ಮಾಡಿಲ್ಲ ಎಂದರೆ ಅದರಲ್ಲಿರುವ ಹಣ ಕಡಿತವಾಗಲಿದೆ. ಆದ್ದರಿಂದ, ಅಗತ್ಯವಿದ್ದರೆ ಮಾತ್ರ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಿ.

ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ

ನಮ್ಮ ಮೆಟ್ರೋ ನಿಲ್ದಾಣ ತಲುಪುವ ಒಂದು ಗಂಟೆ ಮೊದಲು ಅಪ್ಲಿಕೇಶನ್ ಮೂಲಕ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಸೆಪ್ಟೆಂಬರ್ 7ರಿಂದ ಕಾರ್ಡ್‌ ಇದ್ದವರಿಗೆ ಮಾತ್ರ ಮೆಟ್ರೋದಲ್ಲಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ.

English summary
BMRCL has revised its rule on the use of card. Make sure that the Namma Metro card is used at least for one journey within seven days as the money on the card will lapse on the eighth day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X