ಬೆಂಗಳೂರಿನಲ್ಲಿ ಶುಕ್ರವಾರದಿಂದ ಒಪಿಡಿ ಸೇವೆ ಆರಂಭ

ಬೆಂಗಳೂರು, ನವೆಂಬರ್ 16: "ಬೆಂಗಳೂರಿನಲ್ಲಿ ನಡೆಯುತ್ತಿದ್ದ ಖಾಸಗಿ ವೈದ್ಯರ ಪ್ರತಿಭಟನೆಯನ್ನು ನಿಲ್ಲಿಸಿದ್ದೇವೆ. ಶುಕ್ರವಾರ ಅಂದರೆ ನವೆಂಬರ್ 17ರಂದು ಬೆಳಗ್ಗೆಯಿಂದ ಒಪಿಡಿ ಸೇವೆ ಆರಂಭವಾಗಲಿದೆ" ಎಂದು ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಜಯಣ್ಣ ಬೆಂಗಳೂರಿನಲ್ಲಿ ಹೇಳಿದ್ದಾರೆ.

In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಕ್ಕೆ ಮನವಿಗೆ ಸ್ಪಂದಿಸಿ ಹಾಗೂ ಜನರಿಗಾಗುತ್ತಿರುವ ತೊಂದರೆಯನ್ನು ಗಮನಿಸಿ, ತಕ್ಷಣದಿಂದಲೇ ಬೆಂಗಳೂರಿನಲ್ಲಿ ನಡೆಸುತ್ತಿರುವ ವೈದ್ಯರ ಮುಷ್ಕರ ಸ್ಥಗಿತಗೊಳಿಸಿದ್ದೇವೆ. ಜತೆಗೆ ಶುಕ್ರವಾರ ಬೆಳಗ್ಗೆಯಿಂದ ಒಪಿಡಿ ಕಾರ್ಯಾರಂಭ ಮಾಡಲಿದೆ ಎಂದರು.

Doctors strike call off in Bengaluru, OPD service start from Friday

ಆದರೆ, ಬೆಳಗಾವಿಯಲ್ಲಿ ಮುಷ್ಕರ ಮುಂದುವರಿಯಲಿದೆ. ವೈದ್ಯಕೀಯ ಸಚಿವ ರಮೇಶ್ ಕುಮಾರ್ ಅವರ ಧೋರಣೆಯಿಂದ ಇಂದಿನ ಸ್ಥಿತಿ ತಲುಪಿತು. ಇಲ್ಲದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಒಪಿಡಿ ಸೇವೆ ಆರಂಭಿಸಿದರೂ ಮುಶಃಕರವನ್ನು ಕೈ ಬಿಡುವುದಿಲ್ಲ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಫನಾ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದರು.

ವೈದ್ಯರ ಸಂಘಟನೆಗಳ ಕಾನೂನು ಸಲಹೆಗಾರರು ಸರಕಾರದ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಕೂಡ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+