ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 31ರವರೆಗೂ ಎಲ್‌ಎಲ್‌, ಡಿಎಲ್ ಪ್ರಕ್ರಿಯೆ ಸ್ಥಗಿತ

|
Google Oneindia Kannada News

ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ಕೊರೊನಾ ವೈರಸ್‌ ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಮಾರ್ಚ್ 31ರವರೆಗೂ ಮಾಲ್, ಚಿತ್ರಮಂದಿರ, ಪಬ್, ರೆಸ್ಟೋರೆಂಟ್, ಕ್ಲಬ್, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಿದೆ.

ಇದೀಗ, ಬೆಂಗಳೂರಿನ ಆರ್ ಟಿ ಒ ಕಚೇರಿಗೂ ಕೊರೊನಾ ಭೀತಿ ತಟ್ಟಿದೆ. ಬೆಂಗಳೂರುನ ನಗರ ವ್ಯಾಪ್ತಿಯಲ್ಲಿ ಬರುವ ಆರ್ ಟಿ ಒ ಕಚೇರಿಗಳಲ್ಲಿ ಡಿಎಲ್ ಮತ್ತು ಎಲ್ ಎಲ್ ಪರೀಕ್ಷೆ ಪ್ರಕ್ರಿಯೆ ಶುಕ್ರವಾರದಿಂದ (ಮಾರ್ಚ್ 20) ಸ್ಥಗಿತಗೊಂಡಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆ

ಆರ್ ಟಿ ಒ ಕಚೇರಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವುದರಿಂದ ಕೊರೊನಾ ಹರಡಬಹುದು ಎಂಬ ಮುಂಜಾಗ್ರತೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RTO Stopped Work Till March 31st Fear Of Covid19

ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಯಶವಂತಪುರ, ಜಯನಗರ, ರಾಜರಾಜೇಶ್ವರಿ ನಗರ, ಯಲಹಂಕ, ಬನ್ನೇರುಘಟ್ಟ, ನೆಲಮಂಗಲದಲ್ಲಿ ಆರ್ ಟಿ ಒ ಕಚೇರಿಗಳಿದ್ದು ಎಲ್ಲ ಕಚೇರಿಯಲ್ಲು ಡಿಎಲ್ ಮತ್ತು ಎಲ್ಎಲ್ ಪರೀಕ್ಷೆ ಮಾರ್ಚ್ 31ರವರೆಗೂ ನಡೆಯಲ್ಲ ಎಂದು ತಿಳಿಸಲಾಗಿದೆ.

ನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣನಿಲ್ಲದ ಜಗತ್ತಿನ ತಲ್ಲಣ: 10 ಸಾವಿರ ದಾಟಿದ ಕೊರೊನಾ ಸಾವಿನ ಪ್ರಮಾಣ

ದಿನನಿತ್ಯ 5 ಸಾವಿರಕ್ಕೂ ಹೆಚ್ಚು ಜನರು ಆರ್ ಟಿ ಒ ಕಚೇರಿಗಳಿಗೆ ಭೇಟಿ ಕೊಡುತ್ತಾರೆ. ಹೆಚ್ಚು ಜನರು ಸೇರುವುದರಿಂದ ಸೋಂಕು ಹರುಡಬಹುದು. ಹೀಗಾಗಿ ಮುಂದಿನ ಆದೇಶದವರೆಗೂ ಆರ್ ಟಿ ಒ ಕಚೇರಿಗಳಿಗೆ ಸಿಂಧುತ್ವವಿರುವ ಕಲಿಕಾ ಅನುಜ್ಞಾ ಪತ್ರ ಹೊಂದಿರುವವರನ್ನು ಹೊರತುಪಡಿಸಿ ಉಳದಿವರನ್ನು ಕಚೇರಿಗೆ ಬರದಂತೆ ನಿಯಂತ್ರಿಸಬೇಕು ಎಂದು ಹೊಸದಾಗಿ ಯಾವುದೇ ಪರವಾನಗಿ ಮಾಡಿಕೊಡದಂತೆ ಸೂಚಿಸಲಾಗಿದೆ.

English summary
Bengaluru RTO stopped work from march 20th to till march 31st said bengaluru DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X