ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರನ್ನು ಬಿಜೆಪಿಯಿಂದ ರಕ್ಷಣೆ ಮಾಡಿದ್ದೇವೆ: ರಾಮಲಿಂಗಾರೆಡ್ಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 07: ಬೆಂಗಳೂರನ್ನು ಬಿಜೆಪಿಯಿಂದ ರಕ್ಷಣೆ ಮಾಡಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅಧಿಕಾರಲ್ಲಿದ್ದಾಗ 8, 500 ಕೋಟಿ ರೂ. ಸಾಲ ಮಾಡಿ ಹೋಗಿದ್ದರು. ಆರು ಕಟ್ಟಡ ಅಡಮಾನ ಇಟ್ಟು ಹೋಗಿದ್ದರು, ಅದನ್ನು ಬಿಡಿಸಿಕೊಂಡಿದ್ದೇವೆ. ಎರಡು ತಿಂಗಳು ಸತತವಾಗಿ ಮಳೆ ಬಿದ್ದಿದ್ದರಿಂದ ನಗರದಲ್ಲಿ ಗುಂಡಿ ಬಿದ್ದಿದ್ದವು ಅದನ್ನು ಸರಿಪಡಿಸಿದ್ದೇವೆ ಎಂದರು.

ಬಿಜೆಪಿ ಅವಧಿಯಲ್ಲಿ ಆದ ಹಗರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ, ದಿನೇಶ್ ಗುಂಡೂರಾವ್ ದಾಖಲೆ ಸಂಗ್ರಹಿಸುತ್ತಿದ್ದಾರೆ. ಬಿಜೆಪಿ ಅವರಿಂದ ಬೆಂಗಳೂರು ರಕ್ಷಿಸಬೇಕಿದೆ.ನಾವು ಕೂಡ 28 ಕ್ಷೇತ್ರಗಳಲ್ಲಿ ಜನರ ಗಮನಕ್ಕೆ ತರುತ್ತೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ .7,759 ಕಾಂಗ್ರೆಸ್ ಅವಧಿಯಲ್ಲಿ ಕೊಲೆ ನಡೆದಿದೆ.8,889 ಬಿಜೆಪಿ ಅವಧಿಯಲ್ಲಿ ಕೊಲೆ ನಡೆದಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.

Congress rescued Bengaluru from BJP anarchy: Ramalingareddy

ದರೋಡೆ ಪ್ರಕರಣಗಳು ನಮ್ಮ‌ ಅವಧಿಯಲ್ಲಿ ಕಡಿಮೆ ಆಗಿದೆ.. ಪೋಕ್ಸೋ ಕಾಯಿದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳು. 14 ಸಾವಿರ ಗಲಾಟೆ ಪ್ರಕರಣಗಳು ನಮ್ಮ‌ಅವದಿಯಲ್ಲಿ ಕಡಿಮೆ ಆಗಿದೆ.. ಈ ಅಂಕಿಅಂಶಗಳನ್ನು ವಿಧಾನ ಸಭೆ ಮತ್ತು ಪರಿಷತ್ ನಲ್ಲಿ ಕೊಟ್ಟಿದ್ದೇನೆ ಉತ್ತರ ಪ್ರದೇಶ ಸಿಎಂ ವಿರುದ್ಧ 12 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳು ಇದೆ ಎಂದರು.

ಕಾಂಗ್ರೆಸ್ ನವರು ಯಾವುದೇ ಪ್ರಕರಣಗಳಲ್ಲಿ ಕುಮ್ಮಕ್ಕು ನೀಡಿಲ್ಲ ನಿಜವಾದ ಕೊಲೆಗಡುಕರು ಬಿಜೆಪಿ ಯವರು,ಕಟುಕರು,ಜಿಹಾದಿಗಳು ನರಹಂತಕರು, ಪಾಪಿಗಳು,ಕಿರಾತಕರು,ಆತ್ಮವನ್ನು ಭೂತಕ್ಕೆ ಮಾರಿಕೊಂಡವರು,ರಕ್ತ ಪಿಪಾಸುಗಳು ಎಂದು ಕರೆಯಬೇಕಾಗುತ್ತದ ಎಂದು ಹೇಳಿದರು.

English summary
Home Minister Ramalinga reddy congress party that rescued Bengaluru city from the BJP anarchy during its ruling in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X