ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಕಲೇಟ್ ಹೋಲುವ ಡ್ರಗ್ಸ್ ಮಾತ್ರೆ ಮಾರುತ್ತಿದ್ದವನ ಬಂಧನ

|
Google Oneindia Kannada News

ಬೆಂಗಳೂರು, ಜನವರಿ 31: ಪೆಪ್ಪರ್‌ಮೆಂಟ್ ಅನ್ನು ಹೋಲುವ ಮಾದಕ ವಸ್ತು ತುಂಬಿದ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವ್ಯಾಪಾರಿ ವಿಸಾ ಪಡೆದು ಬೆಂಗಳೂರಿಗೆ ಬಂದಿದ್ದ ತಾನ್‍ಜೇನಿಯಾ ದೇಶದ ಪ್ರಜೆ ಇಜಿಕೆ ಸೆಲಿಸ್ಟೈನ್ ಮಾದಕ ವಸ್ತು ಮಾರುವ ಕಾರ್ಯದಲ್ಲಿ ನಿರತನಾಗಿದ್ದ. ಅಗರದ ಹೊರಮಾವಿನ ಬೆತಲ್‍ಲೇಔಟ್‌ನಲ್ಲಿ ಬಾಡಿಗೆ ಮನೆ ಪಡೆದಿದ್ದ ಈತ ಎಕ್ಸ್‌ಟೆಸಿ ಎಂಬ ಮಾದಕ ವಸ್ತುವನ್ನು ಗ್ರಾಹಕರಿಗೆ ನೀಡುತ್ತಿದ್ದ.

ಈತನಿಂದ 20 ಲಕ್ಷ ಮೌಲ್ಯದ 500 ಎಕ್‍ಸ್ಟೆಸಿ ಮಾತ್ರೆಗಳು, ಹೊಂಡಾ ಸಿವಿಕ್ ಕಾರು, 2 ಮೊಬೈಲ್, ತೂಕದ ಯಂತ್ರ, 5 ಸಾವಿರ ಹಣವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೀಸಾ ನಿಯಮ ಉಲ್ಲಂಘಟನೆ ಪ್ರಕರಣವನ್ನೂ ಪೊಲೀಸರು ಈತನ ಮೇಲೆ ದಾಖಲಿಸಿದ್ದಾರೆ.

CCB Police Arrested Foreign Man Who Selling Drugs In Bengaluru

ಇತ್ತೀಚಿನ ದಿನಗಳಲ್ಲಿ ಹಲವು ಮಾದಕ ವಸ್ತು ಮಾರಾಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಾರ್ಕ್‌ ವೆಬ್ ಮೂಲಕ ವಿದೇಶಗಳ ಮಾದಕ ವಸ್ತು ಸಾಗಣೆಕಾರರ ಸಂಪರ್ಕ ಬೆಳೆಸಿ ಮಾದಕ ವಸ್ತುಗಳನ್ನು ತರಿಸುತ್ತಿರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ.

English summary
CCB police arrested a Tanzania citizen who selling drugs in Bengaluru. 20 lakh worth drugs seized from him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X