• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಬಿಡೆಂಟ್ ಹಗರಣ: ಅಲಿಖಾನ್ ಜಾಮೀನಿಗೆ ಸಿಸಿಬಿ ಆಕ್ಷೇಪ

|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಆಂಬಿಡೆಂಟ್ ಕಂಪನಿ 950 ಕೋಟಿ ಚಿಟ್ ಫಂಡ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಅಲಿಖಾನ್‌ಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

20 ಕೋಟಿ ಕೊಡ್ತೀನಿ ನನ್ನನ್ನು ಏನೂ ಕೇಳ್ಬೇಡಿ ಎಂದ ಅಲಿಖಾನ್ 20 ಕೋಟಿ ಕೊಡ್ತೀನಿ ನನ್ನನ್ನು ಏನೂ ಕೇಳ್ಬೇಡಿ ಎಂದ ಅಲಿಖಾನ್

ಸಿಸಿಬಿ ಅಧಿಕಾರಿಗಳ ಮನವಿ ಮೇರೆಗೆ 8 ದಿನಗಳ ಕಾಲ ವಿಚಾರಣೆಗೆಂದು ಅಲಿಖಾನ್‌ನನ್ನು ಸಿಸಿಬಿ ಪೊಲೀಸರ ವಶಕ್ಕೆ ನೀಡಲಾಗಿತ್ತು. ಅಲಿಖಾನ್‌ಗೆ ಜಾಮೀನು ನೀಡದಂತೆ ಸಿಸಿಬಿ ಪೊಲೀಸರು 1 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ.

ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು ಆಂಬಿಡೆಂಟ್ ಕೇಸ್ : ಅಲಿಖಾನ್ ಜಾಮೀನು ಅರ್ಜಿ ವಜಾ, ಕೋರ್ಟ್‌ಗೆ ಶರಣು

ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಅಲಿಖಾನ್‌ನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತಿ. ಪೊಲೀಸ್ ಕಸ್ಟಡಿಯಲ್ಲಿದ್ದ ಅವಧಿಯಲ್ಲೂ ಅಲಿಖಾನ್ ತನಿಕೆಗ ಸಮರ್ಪಕವಾಗ ಸಹಕರಿಸಿಲ್ಲ. ಅಲ್ಲದೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಂತೆ ನಡೆದುಕೊಳ್ಳದೆ ನ್ಯಾಯಾಲಯಕ್ಕೂ ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

ಆಂಬಿಡೆಂಟ್ ಪ್ರಕರಣದಲ್ಲಿ ಆಗಿರುವ ತನಿಖೆ ಮತ್ತು ಹೂಡಿಕೆದಾರರ ಹಣ ಎಲ್ಲೆಲ್ಲಿ ಹೋಗಿದೆ ಎನ್ನುವ ಕುರಿತಂತೆ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಶುಕ್ರವಾರ ಸಂಜೆ ಸತತ ಮೂರು ಗಂಟೆಗಳ ಕಾಲ ತನಿಖಾಧಿಕಾರಿಗಳ ಜೊತೆ ಚರ್ಚೆ ನಡೆಸಿ ದಾಖಲೆ ಸಂಗ್ರಹಿಸಿದ್ದಾರೆ.

English summary
CCB police filed objection statment for Ali khan bail application, who is main accused in the Ambident fraud case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X