ಬೆಂಗಳೂರಿಗರಿಗೆ ಬಂಪರ್ ಗಿಫ್ಟ್: ನೀರಿನ ಬಿಲ್ ಮೇಲಿನ ಬಡ್ಡಿ ಶೇ.100ರಷ್ಟು ಮನ್ನಾ; ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ಬೆಂಗಳೂರಿನಲ್ಲಿ ಈ ಹಿಂದೆ ಆಸ್ತಿ ತೆರಿಗೆ ಬಾಕಿದಾರರಿಗೆ ಗುಡ್ನ್ಯೂಸ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗ್ರಾಹಕರಿಗೆ ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ನೀರಿನ ಬಿಲ್ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿದೆ. ಈ ಸೌಲಭ್ಯವು ಮುಂದಿನ ಮೂರು ತಿಂಗಳು ಚಾಲ್ತಿಯಲ್ಲಿರಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ತಿಂಗಳು ಏಪ್ರಿಲ್ ನಿಂದ ಜೂನ್ 2026 ರವರೆಗೆ ಲಕ್ಷಾಂತರ ಬಿಡಬ್ಲ್ಯೂಎಸ್ಎಸ್ಬಿ (BWSSB) ಗ್ರಾಹಕರಿಗೆ ಸಂಪೂರ್ಣ ಬಡ್ಡಿ ಮನ್ನಾಗೆ ಅವಕಾಶ ನೀಡಿ ಬಿಲ್ ಕಟ್ಟಿಸಿಕೊಳ್ಳುವ ವ್ಯವಸ್ಥೆಯಾದ OTS (ಒನ್ ಟೈಮ್ ಸೆಟ್ಲ್ಮೆಂಟ್) ಯೋಜನೆಯನ್ನು ಘೋಷಿಸಿದ್ದಾರೆ. ಇದರಿಂದ ಈವರೆಗೆ ಯಾರೆಲ್ಲ ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಕಾವೇರಿ ನೀರಿನ ಗ್ರಾಹಕರಿಗೆ ಅನುಕೂಲ ಒದಗಿಸಲಿದೆ.

ಯುಗಾದಿ ಹಬ್ಬದ ಬೆನ್ನಲ್ಲೆ ಸರ್ಕಾರ ಈ ಮಹತ್ವದ ಘೋಷಣೆಯನ್ನು ಸರ್ಕಾ ಮಾಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಈ ಒಟಿಎಸ್ ಯೋಜನೆ ಜಾರಿಗೆ ಬರಲಿದೆ. ನೀರಿನ ಬಿಲ್ ಮೇಲೆ ಇರುವ ಎಲ್ಲ ಬಡ್ಡಿಯು ಮನ್ನಾ ಆಗಲಿದೆ. ಈ ಮೂಲಕ ಬಾಕಿ ಪಾವತಿಯಾಗುತ್ತದೆ. ಮಂಡಳಿಗೆ ಬರಬೇಕಿದ್ದ ಬಿಲ್ ಸಂಗ್ರಹಿಸಲು ಯೋಜಿತ ದಾರಿ ಲಭ್ಯವಾದಂತಾಗುತ್ತದೆ. ಇದರಿಂದ ಗ್ರಾಹಕರಿಗೂ ಹೆಚ್ಚಿನ ಲಾಭವಾಗಲಿದೆ.
2026 ಏಪ್ರಿಲ್ ನಿಂದ ಜೂನ್ ರವರೆಗೆ ಮೂರು ಒಟಿಎಸ್ ಅಡಿ ಬಾಕಿ ಬಿಲ್ ಪಾವತಿಗೆ ಅವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಬಾಕಿ ಬಿಲ್ ಎಲ್ಲ ಮೊತ್ತ ಪಾವತಿಸುವವರು ಈ ಶೇಕಡಾ 100ರಷ್ಟು ಬಡ್ಡಿ ಮನ್ನ ಸೌಲಭ್ಯ ಪಡೆಯುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಜಲಮಂಡಳಿಗೆ ಬರಬೇಕಿರುವ ಬಾಕಿ ಬಿಲ್ ಮೊತ್ತವೆಷ್ಟು?
ಬೆಂಗಳೂರು ಜಲಮಂಡಳಿ ಮೂಲಗಳ ಪ್ರಕಾರ, ನಗರದಲ್ಲಿ ಸುಮಾರು 11 ಲಕ್ಷ ಕಾವೇರಿ ನೀರಿನ ಸಂಪರ್ಕಗಳ ಇವೆ. ಅದರಲ್ಲಿ ಸುಮಾರು 5.11 ಲಕ್ಷ ಗ್ರಾಹಕರು ನೀರಿನ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ಅರ್ಧದಷ್ಟು ಸಂಗ್ರಹ ನಿಂತು ಹೋಗಿದೆ. ಕಳೆದ ತಿಂಗಳು ಫೆಬ್ರವರಿ ಹೊತ್ತಿಗೆ ಒಟ್ಟು ಬಾಕಿ 851.33 ಕೋಟಿ ರೂಪಾಯಿ ಕೋಟಿಗಳಷ್ಟಿದೆ. ಇದರಲ್ಲಿ 539.43 ಕೋಟಿ ರೂಪಾಯಿ ಹಣ ಅಸಲು ಮೊತ್ತವಾಗಿದೆ. ಅದರ ಬಡ್ಡಿ ಒಟ್ಟು 311.90 ಕೋಟಿ ರೂಪಾಯಿ ಆಗುತ್ತದೆ.
ಬೆಂಗಳೂರು ಜಲಮಂಡಳಿ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಜೊತೆಗೆ ಮಂಡಳಿಯ ಆರ್ಥಿಕ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಈ ಒಟಿಎಸ್ ಯೋಜನೆ ಜಾರಿಗೆ ತರಲಾಗುತ್ತದೆ. ಇದು ಕೇವಲ ಗೃಹ ಬಳಕೆಗೆ ಮಾತ್ರವಲ್ಲದೇ ಯಾರೆಲ್ಲ ವಾಣಿಜ್ಯ ಮತ್ತು ಕೈಗಾರಿಕಾ ದೃಷ್ಟಿಯಿಂದ ಕಾವೇರಿ ಸಂಪರ್ಕ ಪಡೆದಿದ್ದಾರೋ ಅವರಿಗೆಲ್ಲವು ಅನುಕೂಲ ಆಗಲಿದೆ. ಸರಿಯಾದ ಖಾತೆ ಸಮನ್ವಯದ ಮೂಲಕ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿ ಬಿಲ್ ಸಂಗ್ರಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಬಿಲ್ ಪಾವತಿಸುವುದು ಹೇಗೆ, ಎಲ್ಲಿ?
ಬೆಂಗಳೂರು ಜಲಮಂಡಳಿಯು ಬಾಕಿ ಬಿಲ್ ಪಾವತಿದಾರರು RR ಸಂಖ್ಯೆ, ಅಸಲು ಮೊತ್ತ, ಮನ್ನಾ ಮಾಡಿದ ಬಡ್ಡಿ ಮತ್ತು ಅಂತಿಮ ಪಾವತಿಸಬೇಕಾದ ಮೊತ್ತ ಸೇರಿದಂತೆ ಎಲ್ಲ ಅಗತ್ಯ ಮಾಹಿತಿ ನೀಡುತ್ತದೆ. ಅದರ ಆಧಾರದಲ್ಲಿ ಗ್ರಾಹಕರು BWSSB ಕಿಯೋಸ್ಕ್ಗಳು, ಅಧಿಕೃತ ಆನ್ಲೈನ್ ಪೋರ್ಟಲ್ ಮತ್ತು ಇತರ ಡಿಜಿಟಲ್ ಪಾವತಿಯ ಹಾಲಿ ವಿಧಾನಗಳ ಮೂಲಕ ನೀರಿನ ಬಿಲ್ ಕಟ್ಟಿ ಬಡ್ಡಿ ಮನ್ನಾ ಸೌಲಭ್ಯ ಪಡೆಯಬಹುದು.
5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಅನುಕೂಲ
ಈ ಒಟಿಎಸ್ ವ್ಯವಸ್ಥೆಯಿಂದಾಗಿ ಬಾಕಿ ಬಿಲ್ ಉಳಿಸಿಕೊಂಡ ಜಲಮಂಡಳಿಯ ಸುಮಾರು 5 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಪ್ರಯೋಜನ ಸಿಗುತ್ತದೆ. ಆರ್ಥಿಕವಾಗಿ ಸಹಾಯ ಮಾಡಲಿದೆ. ಈ ನಿರ್ಧಾರದಿಂದಾಗಿ ಜಲಮಂಡಳಿಗೆ ಬರಬೇಕಿದ್ದ ಸುಮಾರು 311 ಕೋಟಿ ರೂಪಾಯಿ ಬಡ್ಡಿ ಮನ್ನಾಗಲಿದೆ. ಸರ್ಕಾರ ಅಸಲು ಬಿಲ್ ಮಾತ್ರ ಪಡೆಯಲಿದೆ. ಆದ್ದರಿಂದ ಈ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆ ಸರ್ಕಾರ ಆಶಿಸಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ














Click it and Unblock the Notifications