KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ವಿಸ್ತರಣೆ
ಬೆಂಗಳೂರು: ಪರೀಕ್ಷೆ ಇನ್ನಿತರ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತೊಂದರೆ ಆಗದಂತೆ ರಾಜ್ಯ ಸಾರಿಗೆ ವಾಹನಗಳು ಉಚಿತ ಪ್ರಯಾಣ ನೀಡುತ್ತಿವೆ. ಇದೀಗ ಅಗತ್ಯತೆ ಆಧಾರದಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) 1 ರಿಂದ 9ನೇ ತರಗತಿ ಮಕ್ಕಳಿಗೆ ಖುಷಿ ಸುದ್ದಿ ನೀಡಿದೆ.
2025-26ನೇ ಸಾಲಿನ 01 ರಿಂದ 09ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ತರಗತಿಗಳು ಏಪ್ರಿಲ್ 10ರವರೆಗೂ ನಡೆಯಲಿವೆ. ದಿನಪತ್ರಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವ ಬಸ್ ಪಾಸ್ ಅವಧಿಯು ಮಾಚ್ 31ರಂದು ಮುಕ್ತಾಯಗೊಳ್ಳಲಿದೆ. ಶೈಕ್ಷಣಿಕ ತರಗತಿಗಳು ಇನ್ನೂ ಹತ್ತು ದಿನ ಇರುವ ಪ್ರಯುಕ್ತ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಕೋರಲಾಗಿತ್ತು. ಆ ಮನವಿಯನ್ನು ಸಾರಿಗೆ ಸಂಸ್ತೆ ಪರಿಶೀಲಿಸಲಾಗಿದೆ.

ಈ ಸಂಬಂಧ ಉಲ್ಲೇಖ-2 ರ ಸೂಕ್ತಾಧಿಕಾರಿಗಳ ಆದೇಶದಂತೆ ಮಾರ್ಚ್ 31ರಂದು ಮುಕ್ತಾಯಗೊಂಡ 01 ರಿಂದ 09ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತಾ ಅವಧಿಯನ್ನು ಮುಂದಿನ ಏಪ್ರಿಲ್ 10ರವರೆಗೆ ವಿಸ್ತರಣೆ ಮಾಡಿ ಹೆಚ್ಚುವರಿ ದಿನಗಳ ಕಾಲ ವಿದ್ಯಾರ್ಥಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸದರಿ ವಿದ್ಯಾರ್ಥಿಗಳು ಈ ಹೆಚ್ಚುವರಿ ದಿನಗಳ ಬವರೆಗೆ ಹಾಲಿ ಬಸ್ ತೋರಿಸಿಯೇ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವಿಚಾರವನ್ನು ರಾಜ್ಯದ ಚಾಲಕ ಕಂ ನಿರ್ವಾಹಕರಿಗೆ ತಿಳಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ KSRTCಗೆ ಕೇರಳ ಲೀಡರ್ ಶಿಪ್ ಪ್ರಶಸ್ತಿ 2026
ಕೆಎಸ್‌ಆರ್ ಟಿಸಿ ನಿಗಮದಲ್ಲಿ ಹಮ್ಮಿಕೊಂಡಿರುವ ಉತ್ತಮ ತರಬೇತಿ ಕಾರ್ಯಕ್ರಮಗಳಿಗೆ 'ಸಂಘಟನಾ ಅಭಿವೃದ್ಧಿಯಲ್ಲಿ ಅತ್ಯುತ್ತಮ ತರಬೇತಿ' ವರ್ಗದಡಿ ನಿಗಮವು ತನ್ನ ವ್ಯಾಪ್ತಿಯಲ್ಲಿನ 05 ತರಬೇತಿ ಕೇಂದ್ರಗಳಲ್ಲಿ ವಿವಿಧ ಮಾದರಿಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಿತ್ತು. ಅದಕ್ಕಾಗಿ ''ವಿಶ್ವ ಎಚ್‌ಆರ್‌ಡಿ ಕಾಂಗ್ರೆಸ್ ಪ್ರಶಸ್ತಿ ಮತ್ತು ತರಬೇತಿ ಮತ್ತು ಸಂಸ್ಥೆ ಅಭಿವೃದ್ಧಿ ವರ್ಗದಲ್ಲಿ ಅತ್ಯುತ್ತಮ ಕೇರಳ ಲೀಡರ್ ಶಿಪ್ ಪ್ರಶಸ್ತಿ-2026'' ನೀಡಿ ಗೌರವಿಸಲಾಗಿದೆ.
ಕೇರಳದ ಕೊಚ್ಚಿನ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಡಗು ತಂತ್ರಜ್ಞಾನ ಕಾಲೇಜು ನಿರ್ದೇಶಕ ಕ್ಯಾಪ್ಟನ್ ಎಸ್ .ಟಿ ಶ್ರೀಧರನ್ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್‌ಆರ್‍ಟಿಸಿಯ ಮಂಡಳಿ ಕಾರ್ಯದರ್ಶಿ/ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ. ಎಸ್, ಹಾಸನ ಪ್ರಾದೇಶಿಕ ತರಬೇತಿ ಕೇಂದ್ರ ಪ್ರಾಂಶುಪಾಲರಾದ ಎ. ಎಸ್. ಗೀತಾಂಜಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಕೆಎಸ್‌ಆರ್ ಟಿಸಿ ನೀಡಿದ ವಿವಿಧ ಮಾದರಿ ತರಬೇತಿಗಳು ಯಾವುವು?
ಇಂಧನ ಕ್ಷಮತೆ, ಪುನಃಶ್ಚೇತನ, ಅಪಘಾತ ರಹಿತ ಚಾಲನಾ ತರಬೇತಿ, ರಸ್ತೆ ಸುರಕ್ಷತೆ, ಸಿಮ್ಯುಲೇಟರ್, ಪಿ.ಎಂ.ಅಜಯ್ ಯೋಜನೆ ಅಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಭಾರಿ ವಾಹನದ ತರಬೇತಿಯೊಂದಿಗೆ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಉಚಿತ ಚಾಲನಾ ಪರವಾನಗಿ ವಿತರಣೆ, ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಲಘು/ಭಾರಿ ವಾಹನ ಚಾಲನಾ ತರಬೇತಿ ಉಚಿತ ಚಾಲನಾ ಪರವಾನಗಿ ವಿತರಣೆ. ಖಾಸಗಿ ಅಭ್ಯರ್ಥಿಗಳಿಗೆ ಚಾಲನಾ ತರಬೇತಿ, ಹೊಸದಾಗಿ ಆಯ್ಕೆಗೊಂಡ ಚಾಲಕ-ಕಂ-ನಿರ್ವಾಹಕರಿಗೆ, ಕರಾಸಾ ಪೇದೆಗಳಿಗೆ, ಕಿರಿಯ ಸಹಾಯಕರುಗಳಿಗೆ ವೃತ್ತಿ ಪರಿಚಯ ಹಾಗು ಕರ್ತವ್ಯ ಮತ್ತು ಜವಾಬ್ದಾರಿ ತರಬೇತಿ. ಮೇಲ್ವಿಚಾರಕ ಸಿಬ್ಬಂದಿಗಳಿಗೆ ವಿಶೇಷ ತರಬೇತಿ, ಚಾಲಕ ಬೋಧಕರನ್ನು ಘಟಕಗಳಿಗೆ ನಿಯೋಜಿಸಿ ಚಾಲನಾ ಸಿಬ್ಬಂದಿಗಳಿಗೆ ತರಬೇತಿ, ಆಡಳಿತ ಸಿಬ್ಬಂದಿಗಳಿಗೆ ಪುನಃಶ್ಚೇತನ ತರಬೇತಿ ಮತ್ತು ಇತರೆ ತರಬೇತಿ). ಹೀಗೆ 12000 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕಳೆದ 6 ತಿಂಗಳ ಅವಧಿಯಲ್ಲಿ ನಿಗಮದ ಅಭಿವೃದ್ಧಿಯಲ್ಲಿನ ಪರಿಣಾಮಕಾರಿ ತರಬೇತಿ ಸೂಚ್ಯಂಕ ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
-
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ













Click it and Unblock the Notifications