ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯಿಂದಾಗಿ ಇಂಧನ ಪೂರೈಕೆ ಕೊರತೆ ಆಗಿದೆ. ಅದರ ಪರಿಣಾಮವಾಗಿ ಡೀಸೆಲ್, ಪೆಟ್ರೋಲ್ ದರ ಏರಿಕೆ ಆಗಿದೆ. ಅದರ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಇವಿ ಬಳಕೆ ಏರಿಕೆ ಆಗುತ್ತಿದೆ. ದುಬಾರಿ ಇಂಧನ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳತ್ತ ಸವಾರರು ಮುಖ ಮಾಡಿದ್ದಾರೆ. 2026ರಲ್ಲಿ ದೇಶದಲ್ಲಿ ಖರೀದಿಸಬಹುದಾಗಿ ಅತ್ಯುತ್ತಮ ಕೆಲವು ಇವಿ ಸ್ಕೂಟರ್‍‌ಗಳ ಮಾಹಿತಿ ಇಲ್ಲಿದೆ.

* ಟಿವಿಎಸ್ ಐಕ್ಯೂಬ್

ದೇಶದ ಅತ್ಯುತ್ತಮ ಮಾರಾಟವಾಗುವ ವಿದ್ಯುತ್ ಸ್ಕೂಟರ್ ಕಂಪನಿಗಳಲ್ಲಿ ಪ್ರಮುಖವಾಗಿರುವ ಟಿವಿಎಸ್ ಐಕ್ಯೂಬ್, ಟಿವಿಎಸ್ ಮೋಟಾರ್ ಕಂಪನಿಯ ತನ್ನದೇ ಆದ ಗ್ರಾಹಕ ಜಾಲ ಹೊಂದಿದೆ. ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಗಳಿಸಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ಲ ಸ್ಕೂಟರ್ 'ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ' ಎಂದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

Top Electric Scooters

ಎಕ್ಸ್-ಶೋರೂಂ ದರ 94,434 ರೂ.ಇದ್ದು, ಈ ಬೆಲೆಗೆ ಗ್ರಾಹಕರಿಗೆ ಉತ್ತಮ ಸವಾರಿಯ ಅನುಭವ ನೀಡುತ್ತಿದೆ. ಇದರಲ್ಲೇ ಟಾಪ್-ಸ್ಪೆಕ್ ಎಸ್‌ಟಿ ರೂಪಾಂತರ ಮಾದರಿ ಸ್ಕೂಟರ್ 1.58 ಲಕ್ಷ ರೂ.ವರೆಗೆ ದರ ನಿಗದಿ ಆಗಿದೆ. ವಿವಿಧ ಬಣ್ಣಗಳಲ್ಲಿರುವ ಈ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 94 ಕಿಮೀ ನಿಂದ 212 ಕಿಮೀ.ವರೆಗೆ ಕ್ರಮಿಸುವ ಸಾಮರ್ಥ್ಯ ಹೊಂದಿವೆ ಎಂದು ಕಂಪನಿ ಹೇಳಿಕೊಂಡಿದೆ.

* ಬಜಾಜ್ ಚೇತಕ್ ಇವಿ

ಬಜಾಜ್ ಕಂಪನಿಯು ದೇಶದಲ್ಲಿ ತನ್ನದೇ ಆದ ಮಾರಾಟ, ಬ್ರ್ಯಾಂಡ್ ಹೊಂದಿದೆ ಅಗ್ರ ಕಂಪನಿಗಳಲ್ಲಿ ಒಂದಾಗಿದೆ. ಬಜಾಜ್ ಚೇತಕ್ ಇವಿ ಪ್ರೀಮಿಯಂ ಆಲ್-ಮೆಟಲ್ ಬಾಡಿಯೊಂದಿಗೆ ಮಾರುಕಟ್ಟೆಗೆ ಈಗಾಗಲೇ ಲಗ್ಗಿ ಇಟ್ಟಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಉತ್ತಮ ಬಾಳಿಕೆ ಬರುವ ವಾಹನ ಇದಾಗಿದೆ. ಸುಧಾರಿತ ಎಲೆಕ್ಟ್ರಕಲ್ ಸ್ಕೂಟರ್‌ಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಬಜಾಜ್ ಚೇತಕ್‌ನಲ್ಲಿ ಸಿ 2501, ಸಿ3001 ಮತ್ತು ಸಿ35 ಎಂಬ ಮೂರು ಸರಣಿಗಳಲ್ಲಿ ಮಾರಾಟವಾಗುತ್ತಿದೆ. ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಕೂಟರ್ ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 113-153 ಕಿಮೀ ಓಡಲಿದೆ. ಇದರ ಎಕ್ಸ್‌ ಶೋ ರೂಂ ಬೆಲೆಯು 87,100 ರಿಂದ 1.22 ಲಕ್ಷ ರೂ.ವರೆಗೆ ಇದೆ.

Top Electric Scooters

* ಅಥರ್ ರಿಜ್ಟಾ

ಅಥರ್ ರಿಜ್ಟಾ ತನ್ನ ಪ್ರಾಯೋಗಿಕ ವಿನ್ಯಾಸ ಮತ್ತು ವೈಶಿಷ್ಟ್ಯದಿಂದಲೆ ಹೆಚ್ಚು ಸದ್ದು ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್. ಫ್ಯಾಮಿಲಿ ಮ್ಯಾನ್‌ಗಳಿಗೆ ಹೆಚ್ಚು ಇಷ್ಟವಾಗುವ ವಾಹನ ಎಂದರೂ ತಪ್ಪಾಗಲಾರದು. ಈ ಸ್ಕೂಟರ್ ಆಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ವಾಹನವು ಒಮ್ಮೆ ಚಾರ್ಜ್ ಮಾಡಿದರೆ ನೀವು 123 ಕಿಮೀ ಮತ್ತು 159 ಕಿಮೀವರೆಗೆ ಸಂಚಾರ ಮಾಡಬಹುದು. ವಿವಿದ ವೇರಿಯಂಟ್‌ಗಳಲ್ಲಿ ಸ್ಕೂಟರ್ ಲಭ್ಯವಿದ್ದು, ಎಕ್ಸ್‌ಶೋರೂಂ ದರ 1.04 ಲಕ್ಷದಿಂದ 1.30 ಲಕ್ಷ ರೂ.ವರೆಗಿದೆ.

* ಅಥರ್ 450 ಸ್ಕೂಟರ್

ಸ್ಪೋರ್ಟಿ ಲುಕ್ ಹೊಂದಿದ್ದು, ಉತ್ತಮ ಕಾರ್ಯಕ್ಷಮತೆಯ ಸ್ಕೂಟರ್ ಅಂತಲೂ ಕರೆಸಿಕೊಂಡಿರುವ ಅಥರ್ 450 ಎಲೆಕ್ಟ್ರಿಕ್ ಸ್ಕೂಟರ್ ಪ್ರಬಲ ಸ್ಪರ್ಧಿಯಾಗಿದೆ. ಹೆಚ್ಚು ಭಾರವಿರದೇ ಹಗುರವಾದ ವಿನ್ಯಾಸ ಹೊಂದಿದೆ. ನಗರ ಸವಾರರಿಗೆ ಹೆಚ್ಚು ಸೂಕ್ತವಾದ ಸ್ಕೂಟರ್ ಇದಾಗಿದೆ. ಗಂಟೆಗೆ 90 ಕಿಮೀ ಗರಿಷ್ಠ ವೇಗಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಂದು ಬಾರಿಯ ಚಾರ್ಜಿಂಗ್‌ನಿಂದ ನೀವು 161 ಕಿಮೀ ವರೆಗೆ ಕ್ರಮಿಸಬಹುದಾಗಿದೆ. ವಿಶಿಷ್ಟ ವಿನ್ಯಾಗಳಲ್ಲಿ ಲಭ್ಯವಿದ್ದು, ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಕ್ರಾಲ್ ಕಂಟ್ರೋಲ್ ವೈಶಿಷ್ಟ್ಯ ಹೊಂದಿದೆ. ಇದರ ಆರಂಭಿಕ ಎಕ್ಸ್‌ಶೋ ರೂಂ ಬೆಲೆ 1.19 ಲಕ್ಷ ರೂ.ನಿಂದ 1.46 ಲಕ್ಷ ರೂ.ವರೆಗೆ ಇದೆ ಎಂದು ಕಂಪನಿ ತಿಳಿಸಿದೆ.

Top Electric Scooters

* ಹೀರೋ ವಿಡಾ

ವಿ2 ಮತ್ತು ವಿಎಕ್ಸ್ 2 ಸರಣಿಯಲ್ಲಿ ಲಭ್ಯವಿರುವ ಈ ಹೀರೋ ಮೋಟೋಕಾರ್ಪ್‌ನ ವಿಡಾ ಎಲೆಕ್ಟ್ರಿಕ್ ಸ್ಕೂಟರ್'‌ಗಳು ಗ್ರಾಹಕಸ್ನೇಹಿ ಮತ್ತು ಕೈಗೆಟುಕುವ ಬೆಲೆ ಲಭ್ಯವಿದೆ. ಸವಾರರಿಗೆ ಅಗತ್ಯವಾದ ವೈಶಿಷ್ಟ್ಯದೊಂದಿಗೆ ವಿನ್ಯಾಸಗೊಂಡಿದೆ. ಪ್ರಮುಖವಾಗಿ ಈ ಸ್ಕೂಟರ್ ಪೋರ್ಟಬಲ್ ಚಾರ್ಜಿಂಗ್ ಹೊಂದಿದೆ. ವಿಎಕ್ಸ್‌2 GO ಬೆಲೆ 73,850 ರೂ.ನಿಂದ ಆರಂಭವಾಗುತ್ತದೆ. ವಿ2 ಪ್ರೋ ದರ 1.40 ಲಕ್ಷ ರೂ.ವರೆಗೆ ಇದೆ. ಪ್ರತಿ ಚಾರ್ಜ್‌ನಿಂದ 92 ಕಿಮೀ ನಿಂದ 165 ಕಿಮೀ ವರೆಗೆ ಸಂಚರಿಸುವ ಸಾಮರ್ಥ್ಯ ಸ್ಕೂಟರ್‌ಗಿದೆ.

* ಓಲಾ ಎಸ್‌1ಎಕ್ಸ್

ಭಾರತದಲ್ಲಿ ಓಲಾ ಎಸ್‌1ಎಕ್ಸ್ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಇದು ಬಜೆಟ್ ಫೆಂಡ್ಲಿ ಗ್ರಾಹಕರಿಗೆ ಅತ್ಯುತ್ತಮ ವಾಹನವಾಗಿದೆ. ಒಂದಕ್ಕಿಂತ ಹೆಚ್ಚಿನ ಬಹು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ. ಅಂದರೆ 2 ಕಿಲೋ ವ್ಯಾಟ್ (kWh), 3 ಮತ್ತು 4 ಕಿಲೋ ವ್ಯಾಟ್ ಮಾದರಿಯಲ್ಲಿ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 108 ಕಿಮೀ ನಿಂದ 242 ಕಿಮೀ ವರೆಗೆ ಸಂಚಾರ ಮಾಡಬಹುದಾಗಿದೆ. ಇದರ ಬೆಲೆ ನೋಡುವುದಾರೆ ಆರಂಭಿಕ 49,999 ರೂ.ನಿಂದ 1.02 ಲಕ್ಷ ರೂ. (ಎಕ್ಸ್-ಶೋರೂಂ) ವರೆಗೆ ಇದೆ.

* ಆಂಪಿಯರ್ ಮ್ಯಾಗ್ನಸ್

ಆಂಪಿಯರ್ ಮ್ಯಾಗ್ನಸ್ ಎಲೆಕ್ಟ್ರಿಕ್ ಸೂಟರ್ ಹಣಕ್ಕೆ ತಕ್ಕ ಸೇವೆ ನೀಡುವ ವಾಹನವಾಗಿದೆ. ಹೆಚ್ಚು ಜನಪ್ರಿಯತೆ ಗಳಿಸಿರುವ ಈ ಸ್ಕೂಟರ್ ಒಂದು ಬಾರಿ ಚಾರ್ಜಿಂಗಿಂದ 100 ಕಿಮೀಗೂ ಅಧಿಕ ಮೈಲೇಜ್ ನೀಡುವ 3 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಗಂಟೆಗೆ 65 ಕಿಮೀ ಗರಿಷ್ಠ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ನಿತ್ಯ ನಗರ ಸಾರಿಗೆ ಉತ್ತಮ ಆಯ್ಕೆ ಎನ್ನಬಹುದು. ಇದರ ಎಕ್ಸ್‌ ಶೋರೂಂ ಬೆಲೆ 94,999 ರೂಪಾಯಿಯಿಂದ ಆರಂಭವಾಗುತ್ತದೆ.

(ವಿಶೇಷ ಸೂಚನೆ: ಈ ಸುದ್ದಿ ನಿಮಗೆ ಮಾಹಿತಿಗಾಗಿ ಮಾತ್ರ. ನಿಮ್ಮ ಅಗತ್ಯತೆ, ಬಜೆಟ್ ಅನುಸಾರ ನೀವು ಖರೀದಿ ಮಾಡಬಹುದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+