Aadhaar: ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ? ಮೊಬೈಲ್ ಮೂಲಕ ಹೀಗೆ ಪತ್ತೆಹಚ್ಚಿ

ದೇಶದ ಪ್ರಜೆಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿರುವ ವಿಶಿಷ್ಟ ಗುರುತಿನ ಚೀಟಿಗಳ ನಕಲು ಮಾಡಿ ನಮ್ಮ ದಾಖಲೆಗಳನ್ನು ಅಪರಾಧ ಚಟುವಟಿಕೆ ಇನ್ನಿತರ ಕಾರ್ಯಗಳಿಗೆ ಬಳಸಿ ವಂಚಿಸುವವರಿದ್ದಾರೆ. ಪ್ರಮುಖ ದಾಖಲೆಯಾದ ಆಧಾರ್ ಕಾರ್ಡ್‌ನ್ನು ಬ್ಯಾಂಕಿಂಗ್ ವಹಿವಾಟು, ಸಿಮ್ ಖರೀದಿ, ಸರ್ಕಾರಿ ಯೋಜನೆಗಳಿಂದ ಹಿಡಿದು ಹೋಟೆಲ್ ರೂಮ್ ಬುಕ್ ಮಾಡುವವರೆಗೂ ಬಳಸಲಾಗುತ್ತದೆ. ಇದರ ವ್ಯಾಪಕ ಬಳಕೆಯಿಂದಾಗಿಯೇ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ.

ಅದೆಷ್ಟೋ ಬಾರಿ ಆಧಾರ್ ಕಾರ್ಡ್‌ಗಳ ಪ್ರತಿಗಳನ್ನು ಪರಿಶೀಲಿಸದೆಯೇ ಹಸ್ತಾಂತರಿಸುತ್ತೇವೆ, ಸ್ವೀಕರಿಸುತ್ತೇವೆ. ನಕಲಿ ಕಾರ್ಡ್‌ಗಳನ್ನು ಬಳಸಿ ವಂಚನೆಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಸದ್ಯ ನೀವು ನೋಡುವ ಆಧಾರ್ ಕಾರ್ಡ್ ನಿಜವಾದದ್ದೇ ಅಥವಾ ನಕಲಿಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಪ್ರಾಧಿಕಾರ (UIDAI) ನಕಲಿ ಕಾರ್ಡ್ ಪತ್ತೆಗೆ ಹೊಸ ವೈಶಿಷ್ಟ್ಯ (ಆಧಾರ್ QR ಕೋಡ್ ಸ್ಕ್ಯಾನರ್) ಪರಿಚಯಿಸಿದೆ. ಕೈಯಲ್ಲಿರುವ ಮೊಬೈಲ್‌ನಿಂದಲೇ ನೀವು ಆಧಾರ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಿ ಇದು ಅಲಿಯೋ, ನಕಲಿಯೋ ಎಂದು ಗೊತ್ತುಪಡಿಸಿಕೊಳ್ಳಬಹುದು.

Aadhaar

ಸ್ಕ್ಯಾನ್ ಮಾಡುತ್ತಿದ್ದಂತೆ ಕೆಲವೇ ಸೆಕೆಂಡುಗಳಲ್ಲಿ ಆಧಾರ್ ಕಾರ್ಡ್ ಬಗ್ಗೆ ನಿಖರ ಮಾಹಿತಿ ಸಿಕ್ಕಿ ಬಿಡುತ್ತದೆ. ಅಂತಹ ವ್ಯವಸ್ಥೆಯನ್ನು ಪ್ರಾಧಿಕಾರ ಒದಗಿಸಿದೆ. ಈ ವಿಧಾನವು ಸುಲಭವಾದದ್ದಾಗಿದೆ. ನೀವು ಆಧಾರ್ ವಂಚನೆಯನ್ನು ತಪ್ಪಿಸಲು ಬಯಸಿದರೆ, ಈ ಹೊಸ ವೈಶಿಷ್ಟ್ಯವು ಅತ್ಯಂತ ಉಪಯುಕ್ತವಾಗಿದೆ. ಅದರ ಬಳಕೆ, ನಕಲಿ ಆಧಾರ್‍‌ ಕಾರ್ಡ್ ಪತ್ತೆ ಬಗ್ಗೆ ಮಾಹಿತಿ ಮುಂದಿದೆ.

ಆಧಾರ್ ಕ್ಯೂಆರ್ ಕೋಡ್ ಸ್ಕ್ಯಾನರ್ ವೈಶಿಷ್ಟ್ಯಗಳೇನು?

ಆಧಾರ್ ಅಪ್ಲಿಕೇಶನ್‌ನಲ್ಲಿ 'ಆಧಾರ್ ಕಾರ್ಡ್ ಕ್ಯೂಆರ್ ಕೋಡ್ ಸ್ಕ್ಯಾನರ್' ಎಂಬ ಡಿಜಿಟಲ್ ವೈಶಿಷ್ಟ್ಯ ಸೇರಿಸಲಾಗಿದೆ. ಕಾರ್ಡ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಸಾಕು ನಿಮಗೆ ತ್ವರಿತವಾಗಿ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿನ ಹೆಸರು, ಜನ್ಮ ದಿನಾಂಕ ಮತ್ತು ಫೋಟೋದಂತಹ ಪ್ರಮುಖ ಮಾಹಿತಿಯನ್ನು ಸುರಕ್ಷಿತವಾಗಿ ಮೊಬೈಲ್‌ನಲ್ಲಿ ಗೋಚಿಸುತ್ತದೆ.

ಆಧಾರ್‌ ದೃಢೀಕರಣ ಪರಿಶೀಲನೆ ಹೇಗೆ?

1. ಮೊದಲು ನೀವು ನಿಮ್ಮ ಮೊಬೈಲ್‌ನಲ್ಲಿ UIDAI ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್ ಓಪನ್ ಮಾಡಿದರೆ ಅಲ್ಲಿ ಕಾಣುವ 'QR ಕೋಡ್ ಸ್ಕ್ಯಾನರ್' ವಿಭಾಗಕ್ಕೆ ಹೋಗಿ ನೀವು ಆಧಾರ್ ಸ್ಕ್ಯಾನ್ ಮಾಡಬಹುದು.

2. ಸ್ಕ್ಯಾನ್ ಆಯ್ಕೆಯನ್ನು ಕ್ಲಿಕ್ ಮಾಡಿದ ಬಳಿಕ, ನಿಮ್ಮ ಫೋನ್‌ನ ಕ್ಯಾಮೆರಾ ತೆರೆಯುತ್ತದೆ. ಈಗ, ಆಧಾರ್ ಕಾರ್ಡ್‌ನಲ್ಲಿರುವ ಕ್ಯೂಆರ್ ಕೋಡ್ ಅನ್ನು ಕ್ಯಾಮೆರಾದ ಮುಂದೆ ಹಿಡಿದು ಸ್ಕ್ಯಾನ್ ಮಾಡಬೇಕು.

3. ಕ್ಯೂಆರ್‍‌ ಕೋಡ್ ಸ್ಕ್ಯಾನ್ ಮಾಡಿದ ಬಳಿಕ ಅಪ್ಲಿಕೇಶನ್ ಒಳಗೆ ಎನ್‌ಕ್ರಿಪ್ಟ್ ಮಾಡಿದ ಡೇಟಾವನ್ನು ಡಿಕೋಡ್ ಮಾಡುತ್ತದೆ. ಕಾರ್ಡ್‌ದಾರರ ಹೆಸರು, ಫೋಟೋ ಮತ್ತು ಜನ್ಮ ದಿನಾಂಕ ಹಾಗೂ ಇನ್ನಿತರ ಮಾಹಿತಿಯು ಪ್ರದರ್ಶನವಾಗುತ್ತದೆ.

4. ಕ್ಯೂಆರ್ ಕೋಡ್ ಸರಿಯಾಗಿದ್ದು, ಸೂಕ್ತ ಮಾಹಿತಿ ಗೋಚರಿಸಿದರೆ ಆ ಕಾರ್ಡ್ ನಿಜವಾದದ್ದು. ಒಂದು ವೇಳೆ ಆ ಕಾರ್ಡ್ ಸ್ಕ್ಯಾನ್ ಆಗದಿದ್ದರೆ, ತಪ್ಪಾದ ಮಾಹಿತಿ ಪರ ಮೇಲೆ ಕಂಡು ಬಂದರೆ ಅದು ನಕಲಿ ಆಗುವ ಸಾಧ್ಯತೆ ಇರುತ್ತದೆ. ಅದನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಕೆಲವೊಮ್ಮೆ ಇಂಟರ್ ನೆಟ್ ಇಲ್ಲದೆಯು ಕೆಲಸ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಕ್ಯೂಆರ್ ಕೋಡ್ ವ್ಯವಸ್ಥೆಯು ಡಿಬಿಟಿ ಮೂಲಕ ಹಣ ವರ್ಗಾವಣೆ, ಇನ್ನಿತರ ಸುಮಾರಿ 360 ಸಾರ್ವಜನಿಕ ಸೇವೆಗಳನ್ನು ತಲುಪಿಸುವಾಗಿ ಖಚಿತ ಮಾಹಿತಿ ತಿಳಿಯಲು ಸಹಾಯ ಮಾಡುತ್ತದೆ. ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪುವಾಗ ನಕಲಿ ಆಧಾರ್ ನೀಡಿದರೆ ಅನರ್ಹರಿಗೂ ಸೌಲಭ್ಯಗಳು ಸಿಗುವ ಸಾಧ್ಯತೆ ಇರುತ್ತದೆ. ಇನ್ನೂ ನಕಲಿ ಆಧಾರ್ ಗುರುತಿನ ಚೀಟಿ ನೀಡಿ ಹೋಟೆಲ್, ಇನ್ನಿತರ ಸ್ಥಳಗಳಲ್ಲಿ ಅಪರಾಧದಂತಹ ಕೃತ್ಯ ಎಸಗಬಹುದು. ಬಳಿಕ ಆವ್ಯಕ್ತಿ ಪರಾರಿಯಾದರೆ ನಕಲಿ ಮಾಹಿತಿಯಿಂದ ಹುಡುಕಲು ಕಷ್ಟವಾಗಬಹುದು. ಹೀಗೆ ಅನೇಕ ಸಂಗತಿಗಳಿಗೆ ಈ ಕ್ಯೂಆರ್ ಕೋಡ್ ಸ್ಕ್ಯಾನರ್ ವ್ಯವಸ್ಥೆ ಅನುಕೂಲಕರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+