Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ
Viral Video: ವಿದೇಶಿ ಮಹಿಳೆಯೊಬ್ಬರ ಫೋಟೋಗ್ರಫಿ ಹುಚ್ಚುತನಕ್ಕೆ ಭಾರತೀಯ ಆನೆಯೊಂದು ಮೃತಪಟ್ಟಿದೆ ಎನ್ನುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿದೆ. ವಿದೇಶಿ ಕಲಾವಿದರೊಬ್ಬರು ಪ್ರಕಾಶಮಾನವಾದ ಗುಲಾಬಿ ಬಣ್ಣ ಬಳಿದ ಆನೆಯ ಫೋಟೋಶೂಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಕೆಲವೇ ದಿನಗಳಲ್ಲಿ ಈ ಆನೆ ಮೃತಪಟ್ಟಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಫೋಟೋಗ್ರಫಿ ಸಂದರ್ಭದಲ್ಲಿ ಆನೆಗೆ ಮಾಡಿದ್ದೇನು, ಆನೆ ಮೃತಪಟ್ಟಿದ್ಯಾಕೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದ ಆರೋಪವೇನು.
ಈಚೆಗೆ ರಾಜಸ್ಥಾನದ ಜೈಪುರದ ಆನೆಯೊಂದರ ಫೋಟೋಗ್ರಫಿಯನ್ನು ವಿದೇಶಿ ಮಹಿಳೆಯೊಬ್ಬರನ್ನು ನಡೆಸಿದ್ದರು. ಇದರ ಬೆನ್ನಲ್ಲೇ ಪ್ರಾಣಿಗಳ ಕಲ್ಯಾಣದ ಬಗ್ಗೆ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯು ಜೈಪುರದಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಡಿಸೆಂಬರ್ 2025 ರಲ್ಲಿ ಕಲಾ ಛಾಯಾಗ್ರಾಹಕರಾದ ಜೂಲಿಯಾ ಬುರುಲೆವಾ ಅವರು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಫೋಟೋ ಹಾಗೂ ವೀಡಿಯೊಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದ್ದವು. ಆನೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ರಷ್ಯಾದ ಛಾಯಾಗ್ರಾಹಕ ಜೂಲಿಯಾ ಬುರುಲೆವಾ ಮಾಡಿದ್ದೇನು
ಇನ್ನು ರಷ್ಯಾದ ಛಾಯಾಗ್ರಾಹಕ ಜೂಲಿಯಾ ಬುರುಲೆವಾ ಅವರು ಜೈಪುರದಲ್ಲಿನ ಆನೆಯೊಂದಕ್ಕೆ ಗಾಢ ಗುಲಾಬಿ (ಪಿಂಕ್) ಬಣ್ಣದ ಪೈಂಟ್‌ಅನ್ನು ಆನೆಗೆ ಬಳಿದಿದ್ದರು. ಈ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಇದಾದ ಕೆಲವೇ ದಿನಗಳಲ್ಲಿ ಫೋಟೋಗ್ರಾಫಿಗೆ ಬಳಕೆ ಮಾಡಿದ ಆನೆ ಮೃತಪಟ್ಟಿದೆ. ಕೆಲವು ನೆಟ್ಟಿಗರು ಈ ಚಿತ್ರೀಕರಣದ ಸೌಂದರ್ಯದ ಆಕರ್ಷಣೆ ಮತ್ತು ಸೃಜನಶೀಲತೆಯನ್ನು ಶ್ಲಾಘಿಸಿದ್ದಾರೆ. ಆದರೆ ಬಹುತೇಕರು ಆನೆಯ ಚಿಕಿತ್ಸೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಾಣಿಗಳನ್ನು ಫೋಟೋಗ್ರಫಿಗೆ ಬಳಸುವ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ ಏನು
ಈ ಫೋಟೋಗ್ರಫಿಯನ್ನು ಒಂದು ವರ್ಷದ ಮುಂಚೆ ಮಾಡಲಾಗಿದೆ ಎಂದು ಹೇಳಲಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಮಾಡೆಲ್ ಯಶಸ್ವಿಯಾಗಿ ಫೋಟೋಗಳನ್ನು ತೆಗೆದುಕೊಂಡಿದ್ದರು. ಇದು ಸುಮಾರು ಒಂದು ವರ್ಷದ ಹಿಂದೆ ನಡೆದಿತ್ತು ಎಂದು NDTV ತನ್ನ ತನಿಖಾ ವರದಿಯಲ್ಲಿ ಉಲ್ಲೇಖ ಮಾಡಿದೆ. ವೀಡಿಯೊದಲ್ಲಿರುವ ಆನೆಯು ಹಾಥಿ ಗಾಂವ್ (ಆನೆ ಗ್ರಾಮ) ಪ್ರದೇಶಕ್ಕೆ ಸೇರಿದ ಚಂಚಲ್ ಎಂಬ ಹೆಣ್ಣು ಆನೆ ಎಂದು ಹೇಳಲಾಗಿದೆ. ಹಾಥಿ ಗಾಂವ್ ಸಮಿತಿಯ ಅಧ್ಯಕ್ಷ ಬಲ್ಲು ಖಾನ್, ಆನೆಗೆ ಹೋಳಿ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಬಳಸುವ ಗುಲಾಲ್ - ಪುಡಿಯನ್ನು ಬಳಸಿ ಬಣ್ಣ ಬಳಿಯಲಾಗಿತ್ತು. ಅಲ್ಲದೆ ಕೇವಲ 30 ನಿಮಿಷಗಳಲ್ಲಿ ಆ ಬಣ್ಣವನ್ನು ತೊಳೆಯಲಾಗಿತ್ತು ಎಂದೂ ಹೇಳಿದ್ದಾರೆ.
Viral Video: ವಯೋಸಹಜ ಸಮಸ್ಯೆಯಿಂದ ಆನೆ ಮೃತಪಟ್ಟಿದೆ
ಇನ್ನು ಆನೆಗೆ ಬಣ್ಣ ಬಳಿದಿರುವುದರಿಂದ ಅದು ಮೃತಪಟ್ಟಿಲ್ಲ. ಆನೆ ವಯೋ ಸಹಜ ಸಮಸ್ಯೆಯಿಂದ ಮೃತಪಟ್ಟಿದೆ ಅಧಿಕಾರಿಗಳು ಮತ್ತು ಸ್ಥಳೀಯ ನಿರ್ವಾಹಕರು ಸಮರ್ಥಿಸಿಕೊಂಡಿದ್ದಾರೆ. ಸುಮಾರು 70 ವರ್ಷ ವಯಸ್ಸಿನ ಚಂಚಲ್ ಕಳೆದ ತಿಂಗಳು ಸಾವನ್ನಪ್ಪಿದೆ ಎಂದು ಅವರು ದೃಢಪಡಿಸಿದ್ದಾರೆ. ಆದಾಗ್ಯೂ, ಆನೆಯ ಸಾವಿಗೆ ಫೋಟೋಶೂಟ್ ವಿವಾದಕ್ಕೆ ಸಂಬಂಧವಿದೆ ಯಾವುದೇ ಪುರಾವೆಗಳಿಲ್ಲ. ಚಂಚಲ್ ಎಂಬ ಪ್ರಾಣಿ ಸುಮಾರು 70 ವರ್ಷ ವಯಸ್ಸಾಗಿತ್ತು - ಆನೆಗೆ ಇದು ಇಳಿ ವಯಸ್ಸು - ಮತ್ತು ಅದರ ಸಾವು ನೈಸರ್ಗಿಕ ಕಾರಣಗಳಿಂದ ಸಂಭವಿಸಿದೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ನಿರ್ವಾಹಕರು ಹೇಳಿದ್ದಾರೆ.
ತನಿಖೆಗೆ ಆದೇಶ
ಆನೆ ಮೃತಪಟ್ಟಿರುವುದು ಹಾಗೂ ಆನೆಯ ಫೋಟೋಶೂಟ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ವಿಷಯದ ತನಿಖೆ ಮಾಡುವುದಾಗಿ ಹೇಳಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಕೇಳಿ ಬಂದ ನಂತರ ರಾಜಸ್ಥಾನದ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ಉಲ್ಲಂಘನೆ ಮಾಡಲಾಗಿದೆಯೇ ಎನ್ನುವುದನ್ನು ಪರಿಶೀಲನೆ ಮಾಡಲಾಗುವುದು ಈ ನಿಟ್ಟಿನಲ್ಲಿ ತನಿಖೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಯಾವುದೇ ನಿರ್ಲಕ್ಷ್ಯ ಅಥವಾ ವನ್ಯಜೀವಿ ಸಂರಕ್ಷಣಾ ಮಾನದಂಡಗಳ ಉಲ್ಲಂಘನೆ ಕಂಡುಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications