Get Updates
Get notified of breaking news, exclusive insights, and must-see stories!

Ajay Devgn: ಅಜಯ್ ದೇವಗನ್ ಹುಟ್ಟುಹಬ್ಬಕ್ಕೆ 1.4 ಕೋಟಿಯ ಐಷಾರಾಮಿ ಮರ್ಸಿಡಿಸ್ ಖರೀದಿ

ಬಾಲಿವುಡ್ ಸ್ಟೈಲಿಶ್ ನಟ ಅಜಯ್ ದೇವಗನ್ ತಮ್ಮ 57ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದು, 'ಮಾಸ್ ಮಹಾರಾಜ' ಎಂದೆ ಕರೆಯಲ್ಪಡುವ ಅಜಯ್ ದೇವಗನ್ ಅಂದ್ರೆನೆ ಹಾಗೆ ಎಲ್ಲವೂ ರಾಯಲ್, ಏಪ್ರಿಲ್ 2ರಂದು ಅಜಯ್ ದೇವಗನ್ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಈ ಸಂದರ್ಭದಲ್ಲಿ ತಮ್ಮ ಗ್ಯಾರೇಜ್‌ಗೆ ಮತ್ತೊಂದು ಐಷಾರಾಮಿ ಕಾರನ್ನು ಸೇರಿಸಿದ್ದಾರೆ. ವರದಿಗಳ ಪ್ರಕಾರ ಅವರು ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್(Mercedes-Benz V-Class) ಕಾರನ್ನು ಖರೀದಿಸಿದ್ದು ಇದರ ಬೆಲೆ ಸುಮಾರು 1.4 ಕೋಟಿ ಎಂದು ತಿಳಿದುಬಂದಿದೆ.

ಆದರೆ 'ಮಾಸ್ ಮಹಾರಾಜ' ಅಜಯ್ ದೇವಗನ್ ಅವರ ಕಾರ್ ಕ್ರೇಜ್ ಇಲ್ಲಿಗೆ ಮುಗಿಯುವುದಿಲ್ಲ. ಅವರ ಬಳಿ ಇರುವ ಕಾರುಗಳ ಪಟ್ಟಿಯನ್ನು ನೋಡಿದರೆ ಯಾರಿಗಾದರೂ ಕಣ್ಣು ಅರಳಿಸಿ ನೋಡುವುದಂತು ಗ್ಯಾರಂಟಿ.

Ajay Devgn

ಈಗಾಗಲೇ ಐಷಾರಾಮಿ ಕಾರುಗಳು ಅವರ ಗ್ಯಾರೇಜ್ ಸಂಗ್ರಹದಲ್ಲಿವೆ ಅದರ ಪ್ರಮುಖ ವಿವರ ಇಲ್ಲಿದೆ:

ದೇವಗನ್ ಅವರ ಕಾರು ಸಂಗ್ರಹದ ಒಟ್ಟು ಮೌಲ್ಯ ಸುಮಾರು 15 ರಿಂದ 20 ಕೋಟಿ ರೂ. ಎನ್ನಲಾಗಿದೆ. ಅಜಯ್ ದೇವಗನ್ ಅವರ ಗ್ಯಾರೇಜ್ ಈಗಾಗಲೇ ಹಲವಾರು ಹೈಎಂಡ್ ಕಾರುಗಳಿಂದ ತುಂಬಿದೆ. ಅವರ ಕಾರ್ ಸಂಗ್ರಹದಲ್ಲಿ ರೋಲ್ಸ್ ರಾಯ್ಸ್ ಕಲ್ಲಿನನ್ ಪ್ರಮುಖವಾಗಿದ್ದು, ಇದರ ಮೌಲ್ಯ ಸುಮಾರು 7 ಕೋಟಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ, 3 ಕೋಟಿ ಮೌಲ್ಯದ ಮರ್ಸಿಡಿಸ್-ಮೇಬ್ಯಾಕ್ GLS600 ಕೂಡ ಅವರ ಬಳಿಯಿದೆ.

ದುಬಾರಿ SUV ಮತ್ತು ಸ್ಪೋರ್ಟ್ಸ್ ಕಾರುಗಳು

ಅವರ ಬಳಿ 2.7 ಕೋಟಿ ಮೌಲ್ಯದ ರೇಂಜ್ ರೋವರ್ ವೋಗ್ ಮತ್ತು BMW X7 ಗ್ಯಾರೇಜ್ ನಲ್ಲಿ ನಿಂತುಕೂಂಡಿವೆ. ಇಟಾಲಿಯನ್ ಸ್ಪೋರ್ಟ್ಸ್ ಸೆಡಾನ್ ಮಾಸೆರಾಟಿ ಕ್ವಾಟ್ರೋಪೋರ್ಟ್ ಖರೀದಿಸಿದ ಮೊದಲ ಭಾರತೀಯ ಅಜಯ್ ದೇವಗನ್ ಎಂದು ಹೇಳಲಾಗುತ್ತದೆ ಇದರ ಬೆಲೆ ಸುಮಾರು 2.8 ಕೋಟಿ ಅಂದಾಜಿಸಲಾಗಿದೆ.

ಸ್ಟೈಲ್ ಕೂಡ ಮುಖ್ಯ

ಅಜಯ್ ದೇವಗನ್ ಕೇವಲ SUV ಪ್ರೇಮಿ ಮಾತ್ರವಲ್ಲ, ಅವರಿಗೆ ಸ್ಪೋರ್ಟ್ಸ್ ಕಾರುಗಳೆಂದರೆ ಅಚ್ಚುಮೆಚ್ಚು. ಅವರ ಬಳಿ ಸ್ಟೈಲಿಶ್ ಕನ್ವರ್ಟಿಬಲ್ BMW Z4 ಕೂಡ ಇದೆ. ನಗರದಲ್ಲಿ ಸುಲಭವಾಗಿ ಓಡಾಡಲು ಅವರು ಮಿನಿ ಕೂಪರ್ ಬಳಸುತ್ತಾರೆ. ಕುಟುಂಬದ ಜೊತೆಗಿನ ಪ್ರಯಾಣಕ್ಕೆ ಏಳು ಆಸನಗಳ ಐಷಾರಾಮಿ ಆಡಿ Q7 ಸದಾ ಸಿದ್ಧವಾಗಿರುತ್ತದೆ.

ಪತ್ನಿಗೆ ವಿಶೇಷ ಉಡುಗೊರೆ

ಇನ್ನು ಅಜಯ್ ದೇವಗನ್ ತಮ್ಮ ಪತ್ನಿ ಕಾಜೋಲ್ ಮೇಲಿರುವ ಪ್ರೀತಿಗಾಗಿ ಅವರಿಗೆ ಮರ್ಸಿಡಿಸ್ GL 350 CDI ಕಾರನ್ನು ಉಡುಗೊರೆಯಾಗಿ ನೀಡಿರುವುದು ಗಮನಾರ್ಹ. ಒಟ್ಟಾರೆಯಾಗಿ ಅಜಯ್ ದೇವಗನ್ ಅವರ ಗ್ಯಾರೇಜ್ ನಲ್ಲಿ ಸುಮಾರು 10 ರಿಂದ 12 ಬೆರುಗುಗೊಳಿಸುವ ಐಷಾರಾಮಿ ಕಾರುಗಳು ನಿಂತುಕೊಂಡಿವೆ. ಮಾಧ್ಯಮ ವರದಿಗಳ ಪ್ರಕಾರ ಈ ಎಲ್ಲಾ ವಾಹನಗಳ ಒಟ್ಟು ಮೌಲ್ಯ 15 ರಿಂದ 20 ಕೋಟಿಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.

ಅಜಯ್ ದೇವಗನ್ ಅವರ ಮುಂದಿನ ಚಿತ್ರಗಳು

2026ರಲ್ಲಿ ಅಜಯ್ ದೇವಗನ್ ಯಾವುದೇ ಸಿನಿಮಾ ಬಿಡುಗಡೆ ಮಾಡಿಲ್ಲ. ಆದರೆ, ಅವರ ಮುಂಬರುವ ಚಿತ್ರಗಳಲ್ಲಿ 'ಧಮಾಲ್ 4', 'ದೃಶ್ಯಂ 3', 'ರೇಂಜರ್' ಮತ್ತು 'ಗೋಲ್ಮಾಲ್ 5' ಸೇರಿವೆ. ಈ ಚಿತ್ರಗಳ ಚಿತ್ರೀಕರಣ ಪ್ರಸ್ತುತ ನಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+