ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು
ಈ ವಾರ ಬ್ಯಾಂಕ್‌ನ ಯಾವುದೇ ಕೆಲಸಗಳಿಗಾಗಿ ಆಲೋಚನೆ ಮಾಡುತ್ತಿರುವವರು ಮುಂಚಿತವಾಗಿ ಗಮನಿಸುವುದು ಒಳ್ಳೆಯದು. ಯಾಕೆಂದರೆ ಏಪ್ರಿಲ್ 1 ರಿಂದ ಏಪ್ರಿಲ್ 5ರವರೆಗೆ ದೇಶದ ಹಲವಾರು ಭಾಗಗಳಲ್ಲಿ ಬ್ಯಾಂಕಿನ ಶಾಖೆಗಳು ಕೆಲವು ದಿನಗಳ ಕಾಲ ಮುಚ್ಚಿರಲಿವೆ.
ಹಬ್ಬಗಳು, ಆರ್ಥಿಕ ವರ್ಷದ ಮುಕ್ತಾಯ ಆದ್ದರಿಂದ ವಾರ್ಷಿಕ ಖಾತೆ ಮುಕ್ತಾಯ ಮತ್ತು ವಾರದ ರಜೆಗಳ ಕಾರಣ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳಿಗೆ ರಜೆಗಳ ಸರಣಿಯೆ ಇರುತ್ತದೆ. ಆದ್ದರಿಂದ ಬ್ಯಾಂಕಿನ ಶಾಖಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು.

ಬ್ಯಾಂಕ್ ರಜಾದಿನಗಳ ಮಾಹಿತಿ ಈ ರೀತಿ ಇದೆ
ಏಪ್ರಿಲ್ 1 (ಬುಧವಾರ): ವಾರ್ಷಿಕ ಲೆಕ್ಕ ಪತ್ರದ ಮುಕ್ತಾಯದ ಕಾರಣ ಅನೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುದಿಲ್ಲಾ.
ಏಪ್ರಿಲ್ 2 (ಗುರುವಾರ): ಕೇರಳದ ಪ್ರಮುಖ ನಗರಗಳಲ್ಲಿ (ಕೊಚ್ಚಿ, ತಿರುವನಂತಪುರಂ) ಸ್ಥಳಿಯ ರಜೆ ಇರುತ್ತದೆ.
ಏಪ್ರಿಲ್ 3 (ಶುಕ್ರವಾರ): 'ಗುಡ್ ಫ್ರೈಡೇ' ಹಿನ್ನಲೆಯಲ್ಲಿ ರಾಷ್ಟ್ರಿಯ ರಜೆ ಇರುವುದರಿಂದ ಬ್ಯಾಂಕ್ ಆ ದಿನ ಕಾರ್ಯನಿರ್ವವಹಿಸುವುದಿಲ್ಲಾ.
ಏಪ್ರಿಲ್ 5 (ಭಾನುವಾರ): ವಾರದ ರಜೆ ಇರುತ್ತದೆ.
ಸಾಮಾನ್ಯವಾಗಿ ತಿಂಗಳ ಮೊದಲು, ಮೂರನೆ ಮತ್ತು ಐದನೇ ಶನಿವಾರ ಬ್ಯಾಂಕುಗಳು ತೆರೆದಿರುತ್ತವೆ. ಆದರೆ ವಿಶೇಷ ರಜೆಗಳು ಇದ್ದರೆ ಬದಲಾವಣೆ ಸಾಧ್ಯತೆ ಇರುತ್ತದೆ.
ಆನ್ ಲೈನ್ ಸೇವೆಗಳು ಲಭ್ಯವಿರುತ್ತದೆ
ಬ್ಯಾಂಕ್ ಶಾಖೆಗಳೂ ಕಾರ್ಯನಿರ್ವಹಿಸದೆ ಇದ್ದರು ಗ್ರಾಹಕರು ಡಿಜಿಟಲ್ ಸೇವೆಗಳನ್ನು ಬಳಸಬಹುದು. ನೆಟ್ ಬ್ಯಾಂಕಿಂಗ್, ಯುಪಿಐ, ಮೊಬೈಲ್ ಆ್ಯಪ್‌ಗಳು ಮತ್ತು ಎಟಿಎಂ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ.
ಮುಂಚಿತವಾಗಿ ಯೋಜನೆ ಮಾಡುವುದು ಒಳ್ಳೆಯದು
ನಿರಂತರವಾಗಿ ರಜೆಗಳು ಇರುವ ಕಾರಣದಿಂದ ಗ್ರಾಹಕರು ತಮ್ಮ ಬ್ಯಾಂಕ್ ಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳುವುದು ಒಳ್ಳೆಯದು.
ನಗದು ಮತ್ತು ಎಟಿಎಂಗಳು ಲಭ್ಯ
ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ಬ್ಯಾಂಕಿಂಗ್ ಸೇವೆಗಳು ಡಿಜಿಟಲ್ ಮೂಲಕ ಹೆಚ್ಚಾಗಿ ಬಳಸುವುದರಿಂದ, ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಬೇಟಿ ನೀಡುವ ಅವಶ್ಯಕತೆ ತುಂಬಾ ಕಡಿಮೆ ಆಗುತ್ತಿದೆ. ಹಣ ವರ್ಗಾವಣೆ, ಬಿಲ್ ಗಳ ಪಾವತಿ ಮಾಡುವುದು, ನಮ್ಮ ಖಾತೆಗಳನ್ನು ಪರಿಶೀಲನೆ ಮಾಡುವುದು ಹಾಗೂ ಇತರ ಸೇವೆಗಳನ್ನು ನಾವು ಬ್ಯಾಂಕ್ ಆ್ಯಪ್‌ಗಳ ಮೂಲಕ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ.
ತುರ್ತು ಸೇವೆಗಳ ಮುನ್ನೆಚ್ಚರಿಕೆ
ಡಿಡಿ, ಚೆಕ್ ಕ್ಲಿಯರೆನ್ಸ್, ಅಥವಾ ಶಾಖೆಗಳಿಗೆ ಸಂಬಂಧಿಸಿದ ತುರ್ತು ಸೇವೆಗಳಿಗಾಗಿ ಈ ತರಹದ ರಜೆ ದಿನಗಳು ಇರುವುದರಿಂದ ಸ್ವಲ್ಪ ಅಡಚಣೆ ಉಂಟಾಗಬಹುದು. ಆದ್ದರಿಂದ ಇಂತಹ ಅಗತ್ಯ ಕೆಲಸಗಳನ್ನು ರಜೆಗಳು ಪ್ರಾರಂಭ ಆಗುವ ಮೊದಲೇ ನಾವು ಕೆಲಸವನ್ನು ಮುಗಿಸಿಕೊಳ್ಳುವುದು ಉತ್ತಮ. ಗ್ರಾಹಕರಿಗೆ ಅಗುವ ತೊಂದರೆಗಳನ್ನು ತಪ್ಪಿಸಲು ತಮ್ಮ ಬ್ಯಾಂಕುಗಳ ರಜೆಗಳನ್ನು ಪರಿಶೀಲಿಸುವುದು ಒಳ್ಳೆಯದು.












Click it and Unblock the Notifications