Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ
Oracle: ದೇಶದಲ್ಲಿ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಯಾರು ಯಾವಾಗಬೇಕಾದರೂ ಉದ್ಯೋಗ ಕಳೆದುಕೊಳ್ಳಬಹುದು ಎನ್ನುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಅನಿಶ್ಚಿತತೆ ಹೆಚ್ಚಾಗುತ್ತಿರುವುದರಿಂದ ಹಾಗೂ ಎಐ ಪೈಪೋಟಿಯಿಂದಾಗಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಿದೆ. ಒರಾಕ್ ಸಂಸ್ಥೆಯು ದೇಶದಾದ್ಯಂತ 12,000 ಜನರನ್ನು ಉದ್ಯೋಗದಿಂದ ತೆಗೆದಿದ್ದು, ಇದು ಜಾಗತಿಕವಾಗಿ ಬರೋಬ್ಬರಿ 30,000 ಜನರ ಮೇಲೆ ಪರಿಣಾಮ ಬೀರಿದೆ.
ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಯಾದ ಒರಾಕಲ್ ಕಾರ್ಪೊರೇಷನ್ (Oracle Corporation), ತನ್ನ ವೆಚ್ಚ ಕಡಿತದ ಪ್ರಯತ್ನಗಳ ಭಾಗವಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ. ಮಂಗಳವಾರ ಮುಂಜಾನೆ ಹಲವು ಉದ್ಯೋಗಿಗಳಿಗೆ ವಜಾಗೊಳಿಸುವ ಕುರಿತು ಅಧಿಕೃತ ಅಧಿಸೂಚನೆಗಳು ಬಂದಿವೆ ಎಂದು Business Insider ವರದಿ ಮಾಡಿದೆ.

ಕಂಪನಿಯು ಕಳುಹಿಸಿರುವ ಅಧಿಸೂಚನೆಯಲ್ಲಿ, "ಪ್ರಸ್ತುತ ವ್ಯವಹಾರದ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ, ಸಾಂಸ್ಥಿಕ ಬದಲಾವಣೆಯ ಭಾಗವಾಗಿ ನಿಮ್ಮ ಹುದ್ದೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಆದ್ದರಿಂದ, ಇಂದೇ ನಿಮ್ಮ ಸೇವೆಯ ಕೊನೆಯ ದಿನ," ಎಂದು ತಿಳಿಸಲಾಗಿದೆ. ಈ ಕ್ರಮವು ವಿಶ್ವದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದ್ದು, ಒಟ್ಟು ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಕಂಪನಿಯು ಇನ್ನು ಸ್ಪಷ್ಟ ಮಾಹಿತಿ ನೀಡಿಲ್ಲ. ಪ್ರಾಥಮಿಕ ವರದಿಯ ಪ್ರಕಾರ, 15,000 ಜನ ಉದ್ಯೋಗ ಕಳೆದುಕೊಂಡಿದ್ದಾರೆ.
Oracle Cuts Jobs ಎಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ?
ವಜಾಗೊಂಡ ಉದ್ಯೋಗಿಗಳ ಸಂಖ್ಯೆ ಸಾವಿರಾರು ಇರಬಹುದು ಎಂದು CNBC ವರದಿ ಮಾಡಿದೆ. ವಿಷಯದ ಬಗ್ಗೆ ಮಾಹಿತಿ ಇರುವ ಆಪ್ತ ಮೂಲಗಳನ್ನು ಉಲ್ಲೇಖಿಸಿ ಈ ವರದಿ ನೀಡಲಾಗಿದೆ. ಕಂಪನಿಯ ಇತ್ತೀಚಿನ ದಾಖಲೆಗಳ ಪ್ರಕಾರ, ಮೇ 2025ರ ವೇಳೆಗೆ ಒರಾಕಲ್‌ನಲ್ಲಿ ಸುಮಾರು 1.62 ಲಕ್ಷ ಮಂದಿ ಉದ್ಯೋಗಿಗಳಿದ್ದರು.
Oracle Cuts Jobs ಪರಿಹಾರದ ವಿವರಗಳು
ಉದ್ಯೋಗ ಕಳೆದುಕೊಂಡ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ, ಅಗತ್ಯ ದಾಖಲೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಕಂಪನಿಯ ನಿಯಮಾವಳಿಗಳಂತೆ ಪರಿಹಾರ ಪ್ಯಾಕೇಜ್ (Severance Package) ನೀಡಲಾಗುವುದು ಎಂದು ತಿಳಿಸಲಾಗಿದೆ. ವಜಾಗೊಳಿಸಿದ ದಿನಾಂಕ ಮತ್ತು ಇತರ ಪ್ರಮುಖ ವಿವರಗಳನ್ನು DocuSign ಮೂಲಕ ಉದ್ಯೋಗಿಗಳ ಅಧಿಕೃತ ಇಮೇಲ್‌ಗೆ ಕಳುಹಿಸಲಾಗುವುದು ಎಂದು ಕಂಪನಿ ಹೇಳಿದೆ.
ಇದಲ್ಲದೆ, ಕಂಪನಿಯ ವ್ಯವಸ್ಥೆಗಳ (Systems) ಪ್ರವೇಶವನ್ನು ಶೀಘ್ರದಲ್ಲೇ ರದ್ದುಪಡಿಸಲಾಗುವುದರಿಂದ, ಮುಂದಿನ ಸಂವಹನಕ್ಕಾಗಿ ತಮ್ಮ ವೈಯಕ್ತಿಕ ಇಮೇಲ್ ವಿಳಾಸವನ್ನು ನೀಡುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ.












Click it and Unblock the Notifications