Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಕರ್ನಾಟಕದಲ್ಲಿ ಸಾರಿಗೆ ಮೂಲಸೌಕರ್ಯ, ಸಾರಿಗೆ ವ್ಯವಸ್ಥೆ ಸುಧಾರಿಸುತ್ತಿದೆ. ಇದರೊಂದಿಗೆ ವಿಮಾನಯಾನ ಮೂಲಸೌಕರ್ಯ, ಹೊಸ ಏರ್‌ಪೊರ್ಟ್ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿವೆ. ಇದರೊಂದಿಗೆ ಬಹು ದಿನಗಳಿಂದ ಇಡಲಾಗಿದ್ದ ಹುಬ್ಬಳ್ಳಿ-ಹೈದಾರಾಬಾದ್ ಮತ್ತು ಹುಬ್ಬಳ್ಳಿ-ಬೆಂಗಳೂರಿಗೆ ವಿಮಾನ ಸೇವಾರಂಭದ ಬೇಡಿಕೆ ಈಡೇರಿದೆ. ಇದೇ ತಿಂಗಳು ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೇರಿ ಉತ್ತರ ಕರ್ನಾಟಕದ ಮಂದಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸಚಿವರು ಎಕ್ಸ್ ಪೋಸ್ಟ್ ಮಾಡಿದ್ದಾರೆ. 'ಹುಬ್ಬಳ್ಳಿ-ಧಾರವಾಡದ ಜನತೆಗೆ ಸಂತೋಷದ ಸುದ್ದಿ. http://fly91.in ಏರ್ ಲೈನ್ಸ್ ಅಧಿಕಾರಿಗಳೊಂದಿಗೆ ಹುಬ್ಬಳ್ಳಿಯಿಂದ ಹೈದರಾಬಾದ್ ಹಾಗೂ ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸುವಂತೆ ಕೆಲವು ದಿನಗಳ ಹಿಂದೆ ವಿನಂತಿಸಿದ್ದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಏಪ್ರಿಲ್ ಎರಡನೇ ವಾರದಿಂದ ಈ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ' ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮುಂದೆ ತಾವು ಬೇಡಿಕೆ ಇಟ್ಟಿದ್ದನ್ನು ವಿವರಿಸಿದರು.

ವಿಮಾನ ಸೇವೆ ಆರಂಭ, ವೇಳಾಪಟ್ಟಿ ಹೀಗಿದೆ
ಮುಂದಿನ ಹದಿನೈದು ದಿನಗಳಲ್ಲಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಅಕ್ಕಪ್ಪಕ್ಕ ಜಿಲ್ಲೆಗಳ ಜನರು ಹುಬ್ಬಳ್ಳಿ ಏರ್‍ಪೋರ್ಟ್‌ನಿಂದ ರಾಜಧಾನಿ ಬೆಂಗಳೂರು, ನೆರೆಯ ಆಂಧ್ರಪ್ರದೇಶದ ಹೈದರಾಬಾದ್‌ಗೆ ತೆರಳಬಹುದಾಗಿದೆ. ಏಪ್ರಿಲ್ ಎರಡನೇ ವಾರದಲ್ಲಿ ಆರಂಭವಾಗುವ ವಿಮಾನ ಸೇವೆಯ ವೇಳಾಪಟ್ಟಿ, ಸಮಯ ಮಾಹಿತಿ ಪ್ರಕಟಿಸಲಾಗಿದೆ.
ಹೈದರಾಬದ್-ಹುಬ್ಬಳ್ಳಿ ಫ್ಲೈ-91 ವಿಮಾನ (IC3401) ಮಧ್ಯಾಹ್ನ 3 ಗಂಟೆಗೆ ಹೊರಟು 4.30ಕ್ಕೆ ತಲುಪಲಿದೆ.
ಹುಬ್ಬಳ್ಳಿ-ಬೆಂಗಳೂರು ಫ್ಲೈ-91 ವಿಮಾನವು (IC3411 ) ಸಂಜೆ4.55 ಗಂಟೆಗೆ ಸಂಚಾರ ಆರಂಭಿಸಿ 6.15ಕ್ಕೆ ಗಮ್ಯಸ್ಥಳ ತಲುಪಲಿದೆ.
ಬೆಂಗಳೂರು-ಹುಬ್ಬಳ್ಳಿ ವಿಮಾನವು (IC3412) ಸಂಜೆ 6:45 ಬೆಂಗಳೂರಿನಿಂದ ಹೊರಟು ರಾತ್ರಿ 8:15ಕ್ಕೆ ಬಂದು ಸೇರುತ್ತದೆ.
ಹುಬ್ಬಳ್ಳಿ-ಹೈದರಾಬಾದ್ ವಿಮಾನವು (IC3402) ರಾತ್ರಿ 8:35 ಗಂಟೆಗೆ ಹೊರಟು 9.55 ಗಂಟೆಗೆ ತಲುಪುತ್ತದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಈ ಸಂಸ್ಥೆಗೆ ಕಾರ್ಯ ನಿರ್ವಹಿಸಲು ಸ್ಥಳ ನೀಡಲಾಗಿದೆ. ಸಂಸ್ಥೆಯು ಅವಶ್ಯಕ ಕಾರ್ಯಗಳನ್ನು ಪ್ರಾರಂಭಿಸಿದೆ ಎಂದಿರುವ ಕೇಂದ್ರ ಸಚಿವರು ಹುಬ್ಬಳ್ಳಿಯಿಂದ ವಿಮಾನ ಸೇವೆ ಪ್ರಾರಂಭಿಸಿರುವ fly91 ಆಡಳಿತ ಮಂಡಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.
ಹುಬ್ಬಳ್ಳಿಯಿಂದ ಈಗಾಗಲೇ ದೇಶಿಯ ವಿಮಾನವು ಬೇರೆ ಬೇರೆ ಭಾಗಗಳಿಗೆ ಸಂಚಾರ ಮಾಡುತ್ತಿವಿ. ಬಹುದಿನಗಳಿಂದ ಹುಬ್ಬಳ್ಳಿ-ಹೈದರಾಬಾದ್, ಹುಬ್ಬಳ್ಳಿ-ಬೆಂಗಳೂರಿಗೆ ವಿಮಾನಯಾನ ಅರಂಭಿಸುವಂತೆ ಬೇಡಿಕೆ ಇತ್ತು. ಅದರಂತೆ ಸೇವೆ ಆರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ.












Click it and Unblock the Notifications