Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಜುಲೈ 12ರ ಅಂಕಿಅಂಶಗಳು

Karnataka Reservoirs Water Level: ರಾಜ್ಯದಲ್ಲಿ ಮುಂಗಾರು ಎಂಟ್ರಿ ಕೊಟ್ಟಿದ್ದರೂ ಸಹ ಆರಂಭದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆಯೇ ಇಲ್ಲದೆ ಬರೀ ಮೋಡಕವಿದ ವಾತಾವರಣವೇ ಇರುತ್ತಿತ್ತು. ಆದರೆ ಇದೀಗ ಕೆಲವು ಭಾಗಗಳಲ್ಲಿ ಧಾರಾಕಾರಣ ಮಳೆ ಮುಂದುವರೆದ ಪರಿಣಾಮ ಜಲಾಶಯಗಳ ಒಳಹರಿವಿನ ಪ್ರಮಾಣ ಏರಿಕೆ ಆಗಿದೆ. ಹಾಗಾದ್ರೆ ಇಂದು (ಜುಲೈ 12) ಪ್ರಮುಖ ಡ್ಯಾಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಮುಂಗಾರು ಮಳೆ ಆರ್ಭಟದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳಿಗೆ ಜೀವಕಳೆ ಬಂದಂತಾಗಿದೆ. ಜೊತೆಗೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕೂಡ ಹೆಚ್ಚಾಗುತ್ತಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ.

Karnataka Major Reservoirs Water Level on July 12 2026 Explore the Complete Statistics details

1. ಕೆಆರ್‌ಎಸ್ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 91.20 ಅಡಿ
* ಒಳಹರಿವು - 12,053 ಕ್ಯೂಸೆಕ್
* ಹೊರಹರಿವು - 807 ಕ್ಯೂಸೆಕ್

2. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2284 ಅಡಿ
* ಇಂದಿನ ನೀರಿನ ಮಟ್ಟ - 2,269.60 ಅಡಿ
* ಒಳಹರಿವು - 4,321 ಕ್ಯೂಸೆಕ್‌
* ಹೊರಹರಿವು - 500 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ - 1599.450 ಅಡಿ
* ಒಳಹರಿವು - 38,977 ಕ್ಯೂಸೆಕ್‌
* ಹೊರಹರಿವು - 464 ಕ್ಯೂಸೆಕ್‌

4. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1762.85 ಅಡಿ
* ಒಳಹರಿವು - 1,819 ಕ್ಯೂಸೆಕ್‌
* ಹೊರಹರಿವು - 5,575 ಕ್ಯೂಸೆಕ್‌

5. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 147.2 ಅಡಿ
* ಒಳಹರಿವು - 3,160 ಕ್ಯೂಸೆಕ್‌
* ಹೊರಹರಿವು - 220 ಕ್ಯೂಸೆಕ್‌

6. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 129 ಅಡಿ
* ಇಂದಿನ ನೀರಿನ ಮಟ್ಟ - 113.66 ಅಡಿ
* ಒಳಹರಿವು - 2,751 ಕ್ಯೂಸೆಕ್‌
* ಹೊರಹರಿವು - 180 ಕ್ಯೂಸೆಕ್‌

7. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 117 ಅಡಿ
* ಇಂದಿನ ನೀರಿನ ಮಟ್ಟ - 97.07 ಅಡಿ
* ಒಳಹರಿವು - 11,470 ಕ್ಯೂಸೆಕ್‌
* ಹೊರಹರಿವು - 300 ಕ್ಯೂಸೆಕ್‌

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದೆ. ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ಮಾತ್ರ ವರುಣಾರ್ಭಟ ಮುಂದುವರೆದ ಹಿನ್ನೆಲೆ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚುತ್ತಿದ್ದು, ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮನೆ ಮಾಡಿದಂತಾಗಿದೆ. ಇನ್ನೂ ಕೆಲವು ಡ್ಯಾಂಗಳಲ್ಲಿ ನೀರು ಸಂಪೂರ್ಣ ಖಾಲಿಯಾಗುವ ಹಂತದಲ್ಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮಳೆ ಆವರಿಸುವ ಸಾಧ್ಯತೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+