Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು

Bengaluru property: ಬೆಂಗಳೂರು ಮಹಾನಗರದಲ್ಲಿ ಭೂಮಿ ಹಾಗೂ ಪ್ರಾಪರ್ಟಿಗೆ ಬಂಗಾರದ ಬೆಲೆ ಇದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಭೂಮಿ ಬೆಲೆಯು ಗಗನಮುಖಿಯಾಗುತ್ತಿದೆ. ಇದರೊಂದಿಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂದಿಗೂ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ ಪ್ರದೇಶಗಳಿವೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರಮುಖ ಪ್ರದೇಶಗಳ ವಿವರ ಇಲ್ಲಿದೆ. ಬೆಂಗಳೂರಿನಲ್ಲಿ ಕೈಗೆಟುಕುವ ಆಸ್ತಿ ಮತ್ತು ಪ್ರಾಪರ್ಟಿ ಸಿಗುವ ಪ್ರದೇಶಗಳ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ಬೆಂಗಳೂರು ಉತ್ತರ ಪ್ರದೇಶ ಮತ್ತು ಬೆಂಗಳೂರು ಪೂರ್ವ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿಗಳು ಸಿಗುತ್ತವೆ. ಇದರೊಂದಿಗೆ ಮೆಟ್ರೋ ಸೇವೆ ವಿಸ್ತರಣೆ ಮತ್ತು ಐಟಿ - ಬಿಟಿ ಕಂಪನಿಗಳು ಸಮೀಪದಲ್ಲೇ ಇರುವುದು ಪ್ಲಸ್ ಪಾಯಿಂಟ್ಸ್‌ ಆಗಿವೆ. ಪ್ರಮುಖ ಬಜೆಟ್ ಸ್ನೇಹಿ ಪ್ರಾಪರ್ಟಟಿಗಳು ಇರುವ ಪ್ರದೇಶಗಳಲ್ಲಿ ದೇವನಹಳ್ಳಿ, ಯಲಹಂಕ, ಸರ್ಜಾಪುರ ರಸ್ತೆ, ಕಾಡುಗೋಡಿ ಮತ್ತು ಹೆಣ್ಣೂರು ಸೇರಿವೆ. ಈ ಭಾಗಗಳಲ್ಲಿ ಮುಖ್ಯವಾಗಿ ಅಪಾರ್ಟ್‌ಮೆಂಟ್‌ಗಳ ಬೆಲೆಯು ಕೈಗೆಟುವಂತೆ ಇವೆ.

Bengaluru Property

ಬೆಂಗಳೂರು ಹಾಗೂ ಬೆಂಗಳೂರಿನ ಸಮೀಪದಲ್ಲಿ ಕಡಿಮೆ ಹಾಗೂ ಮಧ್ಯಮ ಬೆಲೆಯಲ್ಲಿ ಪ್ರಾಪರ್ಟಿ ಸಿಗುವ ಹತ್ತು ಪ್ರಮುಖ ಪ್ರದೇಶಗಳ ವಿವರ ಈ ಲೇಖನದಲ್ಲಿ ನೋಡೋಣ.

1. ದೇವನಹಳ್ಳಿ (ಉತ್ತರ): ಬೆಂಗಳೂರಿನಿಂದ ಕೇಲವೇ ಕಿ.ಮೀ ದೂರದಲ್ಲಿರುವ ದೇವನಹಳ್ಳಿ ಭಾಗದಲ್ಲಿ ಭೂಮಿ ಬೆಲೆ ಮಧ್ಯಮ ಸ್ಥಿತಿಯಲ್ಲಿದೆ. ಇಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮೀಪ್ಯ ಮತ್ತು ಪ್ರಮುಖ ಮೂಲಸೌಕರ್ಯ ಅಭಿವೃದ್ಧಿಯೂ ಪ್ಲಸ್ ಪಾಯಿಂಟ್ ಆಗಿದೆ. ದೀರ್ಘಾವಧಿಯ ಭೂಹೂಡಿಕೆ ಅಥವಾ ಪ್ರಾಪರ್ಟಿ ಮೇಲೆ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ.

2. ಯಲಹಂಕ (ಉತ್ತರ): ಬೆಂಗಳೂರು ಉತ್ತರ ಭಾಗದ ಯಲಹಂಕದಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿಗಳು ಸಿಗುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳು, ವಿಶಾಲವಾದ ಮನೆಗಳು ಮತ್ತು ವಿಲ್ಲಗಳು ಇಲ್ಲಿವೆ. ಉತ್ತಮವಾಗಿ ಅಭಿವೃದ್ಧಿ ಹೊಂದಿರುವ ಉಪನಗರ, ನಗರಕ್ಕೆ ಉತ್ತಮ ಸಂಪರ್ಕವನ್ನು ನೀಡುವುದು ಇದರ ಪ್ಲಸ್ ಪಾಯಿಂಟ್ ಆಗಿದೆ.

3. ಸರ್ಜಾಪುರ ರಸ್ತೆ (ಪೂರ್ವ/ಆಗ್ನೇಯ): ಬೆಂಗಳೂರಿನ ಸರ್ಜಾಪುರ ರಸ್ತೆ ಭಾಗದಲ್ಲಿ ಉಳಿದ ಪ್ರದೇಶಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಪ್ರಾಪರ್ಟಿ ಸಿಗುತ್ತಿವೆ. ಐಟಿ ಪಾರ್ಕ್‌ಗಳ ಬಳಿ (ಸಿಸ್ಕೊ, ಆಕ್ಸೆಂಚರ್) ವೇಗವಾಗಿ ಅಭಿವೃದ್ಧಿ ಆಗುತ್ತಿರುವುದು ಈ ಭಾಗದಲ್ಲಿ ಕ್ರಮೇಣ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ಹೀಗಾಗಿ, ಇಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಬಹುದು. ವಿಶೇಷವಾಗಿ ಸರ್ಜಾಪುರ ರಸ್ತೆಯ ಹೊರವಲಯದಲ್ಲಿ ಪ್ರಾಪರ್ಟಿ ಬೆಲೆ ಕಡಿಮೆ ಇದೆ.

4. ಹೆಣ್ಣೂರು ರಸ್ತೆ (ಉತ್ತರ): ಬೆಂಗಳೂರು ನಗರದಲ್ಲಿ ಹೆಣ್ಣೂರು ರಸ್ತೆಯು ಪ್ರಮುಖ ವಸತಿ ಪ್ರದೇಶವಾಗಿ ಅಭಿವೃದ್ಧಿ ಆಗುತ್ತಿದೆ. ಈ ಭಾಗದಲ್ಲಿ ಮಧ್ಯಮ ಬೆಲೆಯ ವಸತಿ ಆಸ್ತಿಗಳು ಹಾಗೂ ಪ್ರಾಪರ್ಟಿ ಲಭ್ಯವಿದೆ.

5. ಕಾಡುಗೋಡಿ (ಪೂರ್ವ): ಬೆಂಗಳೂರು ಪೂರ್ವ ಪ್ರದೇಶ ವೈಟ್‌ಫೀಲ್ಡ್ ಐಟಿ ಕೇಂದ್ರದ ಸಮೀಪದಲ್ಲಿ ಇರುವ ಈ ಪ್ರದೇಶದಲ್ಲಿ ಪ್ರಾಪರ್ಟಿ ಬೆಲೆ ಮಧ್ಯಮ ಬೆಲೆಯಲ್ಲಿದೆ. ಈ ಪ್ರದೇಶವು ಮೆಟ್ರೋ ನಿಲ್ದಾಣಕ್ಕೂ ಉತ್ತಮ ಸಂಪರ್ಕವನ್ನು ಕಲ್ಪಿಸುತ್ತಿದೆ.

6. ಕನಕಪುರ ರಸ್ತೆ (ದಕ್ಷಿಣ): ಬೆಂಗಳೂರಿನಿಂದ ದಕ್ಷಿಣಕ್ಕೆ ಇರುವ ಕನಕಪುರ ರಸ್ತೆಯಲ್ಲಿ ಪ್ರಾಪರ್ಟಿ ಬೆಲೆಯು ಮಧ್ಯಮ ಸ್ಥಿತಿಯಲ್ಲಿವೆ. ಶಾಂತಿಯುತ, ಹಸಿರು ಪರಿಸರ ಮತ್ತು ಕೈಗೆಟುಕುವ ಉತ್ತಮ ಗುಣಮಟ್ಟದ ವಸತಿ ಆಯ್ಕೆ ಇಲ್ಲಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಚರ್ಚೆಯಿಂದ ಈ ಪ್ರದೇಶದಲ್ಲಿ ಭೂಮಿ ಬೆಲೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

7. ಹೊರಮಾವು (ಈಶಾನ್ಯ): ಹೊರ ವರ್ತುಲ ರಸ್ತೆ ಮತ್ತು ವೈಟ್‌ಫೀಲ್ಡ್ ಬಳಿ ಇರುವ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಆಗುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ವಸತಿ ಪ್ರದೇಶವು ಈ ಭಾಗದಲ್ಲಿ ಲಭ್ಯವಿದೆ.

8. ಎಲೆಕ್ಟ್ರಾನಿಕ್ ಸಿಟಿ ಹಂತ 2 (ದಕ್ಷಿಣ): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹಂತ 2ದಲ್ಲಿ ಪ್ರಾಪರ್ಟಿ ಬೆಲೆ ಉತ್ತಮವಾಗಿದೆ. ಐಟಿ ವೃತ್ತಿಪರರು ಈ ಭಾಗದಲ್ಲಿ ಹೆಚ್ಚಾಗಿದ್ದು, ಈ ಭಾಗದಲ್ಲಿ ಭೂಮಿ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದೆ.

9. ಅತ್ತಿಬೆಲೆ (ದಕ್ಷಿಣ): ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಹಾಗೂ ತಮಿಳುನಾಡು ಗಡಿ ಪ್ರದೇಶ ವ್ಯಾಪ್ತಿಯ ಅತ್ತಿಬೆಲೆ ಭಾಗದಲ್ಲೂ ಭೂಮಿ ಬೆಲೆ ಕಡಿಮೆ ಇದೆ. ಐಟಿ ವಲಯಗಳಿಗೆ ಸಮೀಪ ಹಾಗೂ ಟೋಲ್‌ವೇಯಿಂದ ಉತ್ತಮ ಸಂಪರ್ಕ ಇರುವುದು ಇದರ ಪ್ಲಸ್ ಪಾಯಿಂಟ್ ಆಗಿದೆ.

10. ಹೆಸರಘಟ್ಟ (ವಾಯುವ್ಯ): ಬೆಂಗಳೂರಿನ ವಾಯುವ್ಯ ಪ್ರದೇಶ ಹೆಸರಘಟ್ಟದಲ್ಲೂ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುತ್ತಿವೆ. ಬೆಂಗಳೂರಿನ ಹೊರ ವಲಯದ ಈ ಭಾಗದಲ್ಲಿ ಭೂಮಿ ಬೆಲೆಯು ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+