ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ವರ್ಷಾಚರಣೆ ಮಾಡುವವರಿಗೆ ಮೆಟ್ರೋದಿಂದ ಸಿಹಿ ಸುದ್ದಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27 : ಹೊಸ ವರ್ಷಾಚರಣೆ ಮಾಡುವವರಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ ನೀಡಿದೆ. ಮದ್ಯಪಾನ ಮಾಡಿದವರನ್ನು ರೈಲು ಹತ್ತಿಸಿಕೊಳ್ಳುವುದಾಗಿ ಸ್ಟಷ್ಟಪಡಿಸಿದೆ. ಡಿಸೆಂಬರ್ 31ರಂದು ರಾತ್ರಿ 2 ಗಂಟೆಯ ತನಕ ಮೆಟ್ರೋ ಸಂಚಾರ ನಡೆಸಲಿದೆ.

ಮದ್ಯಪಾನ ಮಾಡಿದವರನ್ನು ನಮ್ಮ ಮೆಟ್ರೋ ರೈಲು ಹತ್ತಲು ಬಿಡುವುದಿಲ್ಲ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಬಿಎಂಆರ್‌ಸಿಎಲ್ ಈ ಕುರಿತು ಸ್ಪಷ್ಟನೆ ನೀಡಿದೆ. ಮೆಟ್ರೋ ನಿಲ್ದಾಣಗಳಲ್ಲಿ ಮದ್ಯಪಾನ ಮಾಡಿದವರ ತಪಾಸಣೆ ಮಾಡುವುದಿಲ್ಲ ಎಂದು ಹೇಳಿದೆ.

ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೆರೆಡು 6 ಬೋಗಿ ಮೆಟ್ರೋ ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೆರೆಡು 6 ಬೋಗಿ ಮೆಟ್ರೋ

ಮದ್ಯಪಾನ ಮಾಡಿದವರು ಮೆಟ್ರೋದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಇತರ ಪ್ರಯಾಣಿಕರಿಗೆ ತೊಂದರೆ ಮಾಡಿದರೆ ಅವರನ್ನು ಕೆಳಗೆ ಇಳಿಸಲಾಗುತ್ತದೆ ಎಂದು ನಮ್ಮ ಮೆಟ್ರೋ ಎಚ್ಚರಿಕೆ ನೀಡಿದೆ.

ಹೊಸ ವರ್ಷಾಚರಣೆಯ ಎಣ್ಣೆ ಪ್ರಿಯರಿಗೆ ಮೆಟ್ರೋ ಶಾಕ್..!ಹೊಸ ವರ್ಷಾಚರಣೆಯ ಎಣ್ಣೆ ಪ್ರಿಯರಿಗೆ ಮೆಟ್ರೋ ಶಾಕ್..!

namma metro

ಡಿಸೆಂಬರ್ 31ರಂದು ನಮ್ಮ ಮೆಟ್ರೋ ರೈಲುಗಳು ರಾತ್ರಿ 2 ಗಂಟೆಯ ತನಕ ಸಂಚಾರ ನಡೆಸಲಿವೆ. ಎಂ. ಜಿ. ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷಾಚರಣೆ ಮಾಡುವವರು ಅಲ್ಲಿಂದ ನಮ್ಮ ಮೆಟ್ರೋ ಮೂಲಕ ಮನೆಯನ್ನು ತಲುಪಬಹುದಾಗಿದೆ.

 ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಚೀನಾದಿಂದ ಬರಲಿದೆ ಯಂತ್ರ ನಮ್ಮ ಮೆಟ್ರೋ ಸುರಂಗ ಮಾರ್ಗಕ್ಕೆ ಚೀನಾದಿಂದ ಬರಲಿದೆ ಯಂತ್ರ

ಮದ್ಯಪಾನ ಮಾಡಿದವರಿಂದ ಮಹಿಳೆಯರಿಗೆ ಕಿರಿಕಿರಿಯಾಗುತ್ತದೆ ಎಂದಾದರೆ ಮಹಿಳೆಯರಿಗಾಗಿ ಇರುವ ಪ್ರತ್ಯೇಕ ಬೋಗಿಯಲ್ಲಿ ಅವರು ಪ್ರಯಾಣ ಮಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲಾ ಕೋಚ್‌ಗಳಲ್ಲೂ ಸಿಸಿಟಿವಿಗಳಿದ್ದು, ಮಹಿಳೆಯರಿಗೆ ಕಿರುಕುಳ ಕೊಟ್ಟರೆ ತಿಳಿಯಲಿದೆ.

ಹಿಂದೂ ಜನನಾಗೃತಿ ಸಮಿತಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್‌ಗೆ ದೂರು ನೀಡಿದೆ. ಎಂ. ಜಿ. ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷಾಚರಣೆ ನಡೆಸಲು ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಿದೆ.

English summary
Namma Metro likely to operational till 2 am on new year eve like last year. BMRCL has no plans to restrict tipsy passengers from boarding trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X