ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100 ವಾರ್ಡ್ ಗಳ ಬದಲಿಗೆ ಒಂದು ವಾರ್ಡಲ್ಲಿ ಎಎಪಿ ಸ್ಪರ್ಧೆ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 11: ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವುದಿಲ್ಲ, ಬೆಂಬಲಿಸುವುದೂ ಇಲ್ಲ ಎನ್ನುತ್ತಿದ್ದರೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು 100 ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದರು. ಅದರೆ, ಒಂದೇ ಒಂದು ವಾರ್ಡ್ ನಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರೊಬ್ಬರು ಸ್ವ ಇಚ್ಛೆಯಿಂದ ಕಣಕ್ಕಿಳಿದಿದ್ದಾರೆ.

ಜೆಡಿಎಸ್ ಪಕ್ಷ ಕಳಿಸಿದ್ದ ಮೈತ್ರಿ ಯೋಜನೆಯನ್ನು ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಿರಾಕರಿಸುತ್ತಿದ್ದಂತೆ ಆಪ್ ಕಾರ್ಯಕರ್ತರು ಪಕ್ಷದ ಹೆಸರು, ಚಿಹ್ನೆ, ಪ್ರಭಾವ ಬಳಸದೇ ವೈಯಕ್ತಿಕ ಪ್ರಭಾವ ಬಳಸಿಕೊಂಡು ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದರು. [ಬಿಬಿಎಂಪಿ ಚುನಾವಣೆ : ಸಮಗ್ರ ಸುದ್ದಿಗಳಿಗೆ ಕ್ಲಿಕ್ಕಿಸಿ]

ಆದರೆ, ಬಿಬಿಎಂಪಿ ಚುನಾವಣೆಯಿಂದ 'ಆಪ್' ದೂರ ಉಳಿಯಲು ನಿರ್ಧರಿಸಿತು. ಕೊನೆಗೆ ಆಪ್ ಕಾರ್ಯಕರ್ತ ಅರವಿಂದ್ ಎಂಬುವರು ಗೋವಿಂದರಾಜನಗರ ವಾರ್ಡ್‌(ಸಂಖ್ಯೆ 101) ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.[ಬಿಬಿಎಂಪಿ ಚುನಾವಣೆ ಕಣದಿಂದ ಹಿಂದೆ ಸರಿದ ಎಎಪಿ]

AAP Party Member Arvind Govindaraja Nagar ward

ಬಿಬಿಎಂಪಿ ಚುನಾವಣಾ ಕಣದಿಂದ ಆಮ್ ಆದ್ಮಿ ಪಕ್ಷ ಸ್ಪರ್ಧೆಯಿಂದ ಹಿಂದೆ ಸರಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರು ಕೇಜ್ರಿವಾಲ್‌ಗೆ ಪತ್ರ ಬರೆದು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. [ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ? ಪರೀಕ್ಷಿಸಿ]

ಆಪ್ ಹಾಗೂ ಜೆಡಿಎಸ್ ಎರಡೂ ಪಕ್ಷದ ಹೋರಾಟ ಭ್ರಷ್ಟಾಚಾರದ ವಿರುದ್ಧವಾಗಿದೆ. ಆದ್ದರಿಂದ ತಮಗೆ ಬೆಂಬಲಿಸುವಂತೆ ಗೌಡರು ಮನವಿ ಮಾಡಿದ್ದರು. ಆದರೆ ಆಪ್ ಕೇಂದ್ರ ಸಮಿತಿಯಿಂದ ಜೆಡಿಎಸ್ ಮನವಿ ತಿರಸ್ಕಾರಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಯಲಚೇನಹಳ್ಳಿ, ಬೇಗೂರು, ವಿಜಯನಗರ ಮುಂತಾದ ಕಡೆ ಆಮ್ ಆದ್ಮಿ ಪಕ್ಷದ ಉತ್ಸಾಹಿಗಳು ಕಣಕ್ಕಿಳಿಯುವ ಸೂಚನೆ ಸಿಕ್ಕಿತ್ತು. ಅದರೆ, ಈ ಬಗ್ಗೆ ಪಕ್ಷದಲ್ಲಿ ಯಾವುದೇ ಒಮ್ಮತ ಮೂಡದ ಕಾರಣ ಪಕ್ಷದ ಚಿನ್ಹೆ, ಪ್ರಭಾವ ಬಳಸದೆ ಪಕ್ಷೇತರರಾಗಿ ಅರವಿಂದ್ ಅವರು ಕಣಕ್ಕಿಳಿದಿದ್ದಾರೆ. [40 ವಾರ್ಡ್ ಗಳ ಪೂರ್ವ ತಯಾರಿ ವರದಿ]

ಅರವಿಂದ್ ಅವರಿಗೆ ಎಎಪಿ ಕಡೆಯಿಂದ ಬೆಂಬಲವಿರುವುದಿಲ್ಲ, ಅವರನ್ನು ಬೆಂಬಲಿಸುವುದು ಬಿಡುವುದು ವೈಯಕ್ತಿಕ ವಿಚಾರ. ನಗರದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ. ಕೇಂದ್ರ ಸಮಿತಿಯಿಂದ ಈ ಬಗ್ಗೆ ಮಾಹಿತಿ ರವಾನೆ ಆಗಿದೆ ಎಂದು ಆಪ್ ರಾಜ್ಯ ಸಂಚಾಲಕ ಸಿದ್ಧಾರ್ಥ ಶರ್ಮ ಹೇಳಿದ್ದಾರೆ. ಇನ್ನೊಂದೆಡೆ ಲೋಕಸತ್ತಾ ಪಕ್ಷದಿಂದ 17 ಮಂದಿ ನಾಮಪತ್ರ ಸಲ್ಲಿಸಿದ್ದು, ಪ್ರಚಾರ ನಡೆಸಿದ್ದಾರೆ.

English summary
AAP Party Member Arvind is now Candidate for BBMP Election from Govindaraja Nagar ward. Arvind is contesting the election as an independent candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X