ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BBMP Budget 2023: ರಸ್ತೆ, ಪಾದಾಚಾರಿ, ಕಸ ವಿಲೇವಾರಿ ಬಗ್ಗೆ ಪಾಲಿಕೆ ಜನರಿಂದ ಹೆಚ್ಚು ಸಲಹೆ

|
Google Oneindia Kannada News

ಬೆಂಗಳೂರು, ಜನವರಿ 23: ಬಿಬಿಎಂಪಿಯ ಕಾರ್ಯಚಟುವಟಿಕೆಗಳಲ್ಲಿ ನಾಗರಿಕ ಸಹಭಾಗಿತ್ವ ಹೆಚ್ಚಿಸುವ ಸಂಬಂಧ ಬೆಂಗಳೂರಿನಲ್ಲಿ ನಡೆಸಿದ್ದ 'ನನ್ನ ನಗರ-ನನ್ನ ಬಜೆಟ್' ಅಭಿಯಾನದಡಿ ಸಾರ್ವಜನಿಕರಿಂದ ಸುಮಾರು 62,000ಕ್ಕೂ ಹೆಚ್ಚು ಸಲಹೆಗಳು ಸಲ್ಲಿಕೆಯಾಗಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2023-24 ನೇ ಸಾಲಿನ ಬಜೆಟ್ ಮಂಡಿಸಲಿದೆ. ನಗರದ ಅಭಿವೃದ್ಧಿ ಮತ್ತು ಬಿಬಿಎಂಪಿ ಚಟುವಟಿಕೆಗಳಲ್ಲಿ ಜನರು ಸಹಭಾಗಿತ್ವಕ್ಕಾಗಿ 31 ದಿನ ಅಭಿಯಾನ ನಡೆಸಲಾಯಿತು. ಈ ವೇಳೆ 08 ವಲಯಗಳ ಒಟ್ಟು 243 ವಾರ್ಡ್‌ಗಳ ವ್ಯಾಪ್ತಿಯ ಸಂಘ, ಸಂಸ್ಥೆಗಳು, ಸಮಿತಿಗಳು ಸೇರಿದಂತೆ ಸಾರ್ವಜನಿಕರು ಒಟ್ಟು 16,261 ಸಲಹೆಗಳನ್ನು ನೀಡಿದ್ದಾರೆ.

BBMP Recruitment 2023: ಖಾಲಿ 3673 ಹುದ್ದೆಗಳಿಗೆ ಅರ್ಜಿ ಆಹ್ವಾನ, ಜ.30ರೊಳಗೆ ಅರ್ಜಿ ಸಲ್ಲಿಸಿBBMP Recruitment 2023: ಖಾಲಿ 3673 ಹುದ್ದೆಗಳಿಗೆ ಅರ್ಜಿ ಆಹ್ವಾನ, ಜ.30ರೊಳಗೆ ಅರ್ಜಿ ಸಲ್ಲಿಸಿ

ಅಭಿಯಾನದಡಿ ಸಾರ್ವಜನಿಕರಿಂದ ಸಂಗ್ರಹಿಸಿರುವ ಅಭಿಪ್ರಾಯ /ಸಲಹೆಗಳ ವಿಸ್ತೃತ ಮಾಹಿತಿಯುಳ್ಳ ಕಿರುಹೊತ್ತಿಗೆ ಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೋಮವಾರ ಬಿಡುಗಡೆಗೊಳಿಸಿದರು.

BBMP Budget 2023: 16,621 Public Suggestions Submitted To BBMP By My City-My Budget Campaign

ಈ ವೇಳೆ ಮಾತನಾಡಿದ ಅವರು, ವಾರ್ಷಿಕವಾಗಿ 'ನನ್ನ ನಗರ ನನ್ನ ಬಜೆಟ್' (My City My Budget) ಅಭಿಯಾನದಡಿ ಸಂಘ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳು, ಬೆಂಗಳೂರು ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯಿಂದ ಸಂಗ್ರಹವಾದ ಅಭಿಪ್ರಾಯ, ಬೇಡಿಕಗಳನ್ನು ಹಲವುಗಳನ್ನು ಬಿಬಿಎಂಪಿ ಆಯವ್ಯಯದಲ್ಲಿ ಅಳವಡಿಸಲಾಗುವುದು ಎಂದರು.

ಒಟ್ಟು 16,261 ಸಲಹೆಗಳ ಪೈಕಿ ಪಾದಚಾರಿ ಮಾರ್ಗ, ರಸ್ತೆ ಹಾಗೂ ಒಳಚರಂಡಿ ನಿರ್ವಹಣೆ, ರಸ್ತೆ ದುರಸ್ತಿ, ಪಾದಚಾರಿ ಮಾರ್ಗ ನಿರ್ಮಾಣ/ಸರಿಪಡಿಸುವುದು, ಬೀದಿ ದೀಪಗಳನ್ನು ಅಳವಡಿಸುವುದು, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರೆ ಸಲಹೆಗಳು ಹೆಚ್ಚು ಸಂಗ್ರಹವಾಗಿವೆ ಎಂದು ತಿಳಿಸಿದರು.

ನಗರದ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ವಲಯಗಳ ವ್ಯಾಪ್ತಿಯ ವಾರ್ಡ್‌ಗಳಿಂದ ಅತ್ಯಧಿಕ ಸಲಹೆಗಳು ಬಂದಿವೆ. ಜೊತೆಗೆ ಬೊಮ್ಮನಹಳ್ಳಿ, ದಾಸರಹಳ್ಳಿ, ಮಹಾದೇವಪುರ, ರಾಜರಾಜೇಶ್ವರಿ ನಗರ ಮತ್ತು ಯಲಹಂಕ ವಲಯಗಳಿಂದ ಒಂದಷ್ಟು ಸಲಹೆಗಳು ಸ್ವೀಕರಿಸಲಾಗಿದೆ.

BBMP Budget 2023: 16,621 Public Suggestions Submitted To BBMP By My City-My Budget Campaign

ಸಲಹೆಗಳ ಪ್ರಮುಖ ಅಂಶಗಳ ಹೀಗಿವೆ

- ಸಾರ್ವಜನಿಕ ಪಾದಚಾರಿ ಮಾರ್ಗ, ರಸ್ತೆ ಮತ್ತು ಒಳಚರಂಡಿ ನಿರ್ವಹಣೆಗೆ ಆದ್ಯತೆ ನೀಡಿದ್ದಾರೆ.

- ರಸ್ತೆ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ನಾಗರಿಕರು ಅಸ್ತಿತ್ವದಲ್ಲಿರುವ 1490 ಕಿ.ಮೀ. ರಸ್ತೆಯನ್ನು ದುರಸ್ತಿ ಮಾಡಲು, 470ಕಿ.ಮೀ. ಯಷ್ಟು ಹೊಸ ಪಾದಾಚಾರಿ ಮಾರ್ಗ ನಿರ್ಮಾಣಕ್ಕೆ ಹಾಗೂ 950 ಕಿ.ಮೀ. ಹಾಲಿ ಪಾದಾಚಾರಿ ಮಾರ್ಗ ದುರಸ್ತಿಗೆ ಸಲಹೆ ನೀಡಿದ್ದಾರೆ.

- ಅಂದಾಜು 240ಕೀ. ಮೀ. ರಸ್ತೆಗಳಿಗೆ ಬೀದಿ ದೀಪಗಳನ್ನು ಹೆಚ್ಚಿಸುವಂತೆ ಕೇಳಿದ್ದಾರೆ.

- ಘನತ್ಯಾಜ್ಯ ನಿರ್ವಹಣೆ ಮೂಲಸೌಕರ್ಯಕಕ್ಕೆ ಆದ್ಯತೆ ನೀಡಲು ಮಹದೆೇವಪುರ, ಯಲಹಂಕ ಹಾಗೂ ದಾಸರಹಳ್ಳಿ ವಲಯ ನಾಗರಿಕರು ಸೂಚಿಸಿದ್ದಾರೆ.

- ಹಣಕಾಸಿನ ಬಂಡವಾಳವನ್ನು ರಸ್ತೆ ಹಾಗೂ ವಾಹನ ಚಲನಶೀಲತೆ ಉತ್ತಮಗೊಳಿಸುವಲ್ಲಿ ಹಾಕಬೇಕು.

- ನಗರದ ಹೆಚ್ಚಿನ ನಾಗರಿಕರು ಮೂಲಸೌಕರ್ಯ ಮತ್ತು ಪರಿಸರ ಕಾಳಜಿ, ಹವಾಮಾನ ಸ್ಥಿತಿಸ್ಥಾಪಕತ್ವಕ್ಕೆ ನೀಡಿದ್ದಾರೆ.

- 2023 - 24ನೇ ಬಿಬಿಎಂಪಿಯು ಬಜೆಟ್‌ನಲ್ಲಿ ನಾಗರಿಕರ ಸಹಭಾಗಿತ್ವ ಎತ್ತಿ ಹಿಡಿಯಬೇಕಾದರೆ ನಮ್ಮ ಸಲಹೆಗಳನ್ನು ಪರಿಗಣಿಸಬೇಕು. ಆಯವ್ಯಯದಲ್ಲಿ ಅನುದಾನ ಮೀಸಲಿಡಬೇಕು.

- ವಾರ್ಡ್‌ಮಟ್ಟದಲ್ಲಿ ಕಾಮಗಾರಿಗಳ ಅನುಷ್ಠಾನ ಪರಿಣಾಮಕಾರಿಯಾಗಲು ಕಾರ್ಯ ವಿಧಾನ ಮಾನದಂಡ ಹೊರಡಿಸಬೇಕು.

- ಬಿಬಿಎಂಪಿಯು ಮುಂಗಡ ಆಯವ್ಯಯ ಪತ್ರ ಸರಳೀಕರಿಸಿ, ಅರ್ಥವಾಗುವಂತೆ ಪ್ರಕಟಿಸಬೇಕು.

English summary
BBMP Budget 2023: 16,621 public suggestions submitted to Bruhat Bengaluru Mahaganagar Palike (BBMP) by 'My City -My Budget Campaign' Know suggestions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X