ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆಯ ದುರಸ್ತಿ ಹೇಗೆ ನಡೆದಿದೆ?

ಬಸವನಗುಡಿಯ ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆಯ ದುರಸ್ತಿಗಾಗಿ ಜನವರಿ 20ರಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ಮೇಲ್ಸೇತುವೆ ದುರಸ್ತಿ ಕಾರ್ಯ ತಿಂಗಳವರೆಗೆ ನಡೆಯಲಿದ್ದು, ವಾಹನ ಸಂಚಾರ ಬಂದ್‌ ಆಗಲಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 27: ಬಸವನಗುಡಿಯ ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆಯ ದುರಸ್ತಿ ಕಾರ್ಯ ಜನವರಿ 20ರಿಂದ ಕಾಮಗಾರಿ ಆರಂಭಗೊಂಡಿದ್ದು, ಇನ್ನೊಂದು ತಿಂಗಳವರೆಗೆ ನಡೆಯಲಿದೆ. ವಾಹನ ಸಂಚಾರ ಬಂದ್‌ ಆಗಿರುವುದರಿಂದ ಕಿರಿಕಿರಿಯಾದರೂ ನಾಗರಿಕರು ರಸ್ತೆ ದುರಸ್ತಿ ಬಗ್ಗೆ ಪ್ರತಿದಿನ ಕುತೂಹಲದಿಂದ ಕಣ್ಣು ಹಾಯಿಸಿ ಮುಂದೆ ಸಾಗುತ್ತಿದ್ದಾರೆ.

ಕಾಮಗಾರಿ ಮುಕ್ತಾಯಗೊಳ್ಳುವರೆಗೂ ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಜತೆಗೆ  ವಾಹನಗಳ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ.

'ಸುಮಾರು 750 ಮೀಟರ್‌ ಉದ್ದವಿರುವ ಈ ಮೇಲ್ಸೇತುವೆ ಮೂಲಕ ಜಯನಗರ, ಲಾಲ್‌ಬಾಗ್, ಮಿನರ್ವ ವೃತ್ತ ಸೇರಿದಂತೆ ಹಲವು ಪ್ರದೇಶಗಳ ಪ್ರಯಾಣಿಕರು ಸಂಚರಿಸುತ್ತಾರೆ. ಕಾಮಗಾರಿ ಆರಂಭವಾಗಿರುವುದರಿಂದ ಬದಲಿ ಮಾರ್ಗದ ಮೂಲಕ ಸಂಚರಿಸಬೇಕು' ಎಂದು ಬಸವನಗುಡಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಹೇಳಿದ್ದಾರೆ.

Basavanagudi National College flyover resurfacing underway

ಎಲ್ಲಿ ನಿಷೇಧ: 'ರಾಮಕೃಷ್ಣ ಆಶ್ರಮ ವೃತ್ತದಿಂದ ವಾಣಿವಿಲಾಸ್‌ ಮತ್ತು ಶಂಕರಮಠ ಜಂಕ್ಷನ್‌ನಿಂದ ಮೇಲ್ಸೇತುವೆ ಮೂಲಕ ಲಾಲ್‌ ಬಾಗ್‌ ಪಶ್ಚಿಮ ಗೇಟ್‌ ಕಡೆ ಹೋಗುತ್ತಿದ್ದ ವಾಹನಗಳ  ಸಂಚಾರವನ್ನು ಮೇಲ್ಸೇತುವೆ ಮೇಲೆ ನಿಷೇಧಿಸಲಾಗಿದೆ.' ಪಶ್ಚಿಮ ಗೇಟ್‌ ಕಡೆಯಿಂದ ನಾರ್ತ್ ರಸ್ತೆ ಕಡೆ ದ್ವಿಚಕ್ರ ವಾಹನಗಳು ಆಗಾಗ ನುಸುಳಿ ಬರುತ್ತಿವೆ.

ಸರ್ವೀಸ್ ರಸ್ತೆ ಬಳಸಿ: ಮೇಲ್ಸೇತುವೆಯ ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಿ  ನ್ಯಾಷನಲ್‌ ಕಾಲೇಜು ವೃತ್ತದ ಮಾರ್ಗವಾಗಿ ಮುಂದೆ ಹೋಗಬಹುದು.'ಶೇಷಮಹಲ್‌ ವೃತ್ತದಿಂದ ರಾಮಕೃಷ್ಣ ಆಶ್ರಮದ ಕಡೆಗೆ ಹೋಗುವ ವಾಹನಗಳು ಮೇಲ್ಸೇತುವೆ ಮೇಲೆ ಹೋಗುವಂತಿಲ್ಲ. ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಿ, ನ್ಯಾಷನಲ್‌ ಕಾಲೇಜು ವೃತ್ತದ ಮೂಲಕ ರಾಮಕೃಷ್ಣ ಆಶ್ರಮ ವೃತ್ತದ ಕಡೆಗೆ ಹೋಗಬಹುದು.

ಮೆಲ್ಸೇತುವೆ ದುರಸ್ತಿ: 'ನಗರದ ಒಂದೊಂದೇ ಮೇಲ್ಸೇತುವೆಯನ್ನು ದುರಸ್ತಿ ಮಾಡಲಾಗುತ್ತಿದೆ. ಈಗಾಗಲೇ ರಿಚ್ಮಂಡ್‌ ಸೇರಿ ಹಲವು ಮೇಲ್ಸೇತುವೆಗಳು ದುರಸ್ತಿ ಮಾಡಲಾಗಿದೆ. ಈಗ ನ್ಯಾಷನಲ್‌ ಕಾಲೇಜು ಬಳಿಯ ಮೇಲ್ಸೇತುವೆ ದುರಸ್ತಿಗೆ ಚಾಲನೆ ನೀಡಲಾಗಿದೆ ನಂತರ ಮೇಲ್ಸೇತುವೆಗಳ ದುರಸ್ತಿ ಕಾರ್ಯ ಆರಂಭವಾಗಲಿದೆ. ಇದಕ್ಕಾಗಿ ಹೊಸ ತಂತ್ರಜ್ಞಾನ ಬಳಸಲಾಗುತ್ತಿದೆ' ಎಂದು ಬಿಬಿಎಂಪಿ ಪ್ರಕಟಿಸಿದೆ.

English summary
Tiki Tar sheets are being used for resurfacing Flyovers across Bengaluru as they ensure more durability of road surface. Bavanagudi National College flyover resurfacing is underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X