ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಮಂತ ಅಭ್ಯರ್ಥಿ ಪ್ರಿಯಕೃಷ್ಣ ಸೇರಿ 28 ಅಭ್ಯರ್ಥಿಗಳಿಗೆ ಬಿಪ್ಯಾಕ್ ಬಲ

By Mahesh
|
Google Oneindia Kannada News

ಬೆಂಗಳೂರು, ಮೇ 08: ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ(ಬಿ ಪ್ಯಾಕ್) ಪ್ರತಿ ಬಾರಿಯಂತೆ ಈಗಿನ ವಿಧಾನಸಭೆ ಚುನಾವಣೆ ಕಣದಲ್ಲಿರುವ ಬೆಂಗಳೂರಿನ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದೆ. ಈ ಚುನಾವಣೆಯಲ್ಲಿ 28 ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಬಿ.ಪ್ಯಾಕ್‌ ಪ್ರಕಟಿಸಿದೆ. ಈ ಪೈಕಿ ಈ ಬಾರಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ ಪ್ರಿಯಾಕೃಷ್ಣ ಅವರಿಗೂ ದುಡ್ಡು ಕೊಟ್ಟು, ಬಿಪ್ಯಾಕ್ ಬೆಂಬಲ ವ್ಯಕ್ತಪಡಿಸುತ್ತಿರುವುದು ಹುಬ್ಬೇರಿಸುವಂತೆ ಮಾಡಿದೆ.

1020 ಕೋಟಿ ರು ಆಸ್ತಿ ಹೊಂದಿರುವ ಪ್ರಿಯಾಕೃಷ್ಣ ಅವರಲ್ಲದೆ, ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಬಿಪ್ಯಾಕ್ ಬೆಂಬಲ ಸಿಕ್ಕಿದೆ.

ಜಯನಗರ ಕ್ಷೇತ್ರ ಹೊರತುಪಡಿಸಿ 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಜಯನಗರ ಕ್ಷೇತ್ರ ಹೊರತುಪಡಿಸಿ 431 ಅಭ್ಯರ್ಥಿಗಳು ಕಣದಲ್ಲಿದ್ದಾರೆ

'ಬೆಂಗಳೂರಿನ ಕ್ಷೇತ್ರಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಅಪರಾಧ ಹಿನ್ನೆಲೆ, ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಹಿನ್ನೆಲೆ, ಶಾಸಕರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಶೇಕಡ 50ಕ್ಕಿಂತ ಕಡಿಮೆ ಅಂಕ ಪಡೆದವರನ್ನು ಈ ಸಮೀಕ್ಷೆ ವ್ಯಾಪ್ತಿಗೆ ಒಳಪಡಿಸಿಲ್ಲ' ಎಂದು ಬಿ.ಪ್ಯಾಕ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೇವತಿ ಅಶೋಕ್‌ ಹೇಳಿದ್ದಾರೆ.

Priyakrishna and M Krishnappa

ಚುನಾವಣೆ 2018: ಕಣದಲ್ಲಿರುವ ಅಭ್ಯರ್ಥಿಗಳ ಸಮಗ್ರ ಪಟ್ಟಿಚುನಾವಣೆ 2018: ಕಣದಲ್ಲಿರುವ ಅಭ್ಯರ್ಥಿಗಳ ಸಮಗ್ರ ಪಟ್ಟಿ

'ಕ್ಷೇತ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸಬಲ್ಲ ಸಾಮರ್ಥ್ಯ, ವಿದ್ಯಾರ್ಹತೆ ಅಂಶಗಳನ್ನು ಆಯ್ಕೆ ಪ್ರಕ್ರಿಯೆಗೆ ಮಾನದಂಡವಾಗಿಸಿಕೊಂಡಿದ್ದೇವೆ. ನಾವು ಅನುಮೋದಿಸುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ 12, ಬಿಜೆಪಿ 8, ಎಎಪಿಯ 3 ಅಭ್ಯರ್ಥಿಗಳು ಸೇರಿದ್ದಾರೆ. ಪ್ರತಿ ಅಭ್ಯರ್ಥಿಗೆ 2 ಲಕ್ಷ ರು ನೀಡಲಾಗುವುದು' ಎಂದರು.

ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು, ಪ್ರಿಯಾಕೃಷ್ಣ ನಂ. 1ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು, ಪ್ರಿಯಾಕೃಷ್ಣ ನಂ. 1

ಜಯನಗರ ಹಾಗೂ ಆನೇಕಲ್‌ ಕ್ಷೇತ್ರ ಸೇರಿ 8 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಬಿಪ್ಯಾಕ್ ಬೆಂಬಲ ಸಿಗುತ್ತಿಲ್ಲ.

ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್? ಬೆಂಗಳೂರಿನ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರಲ್ಲಿ ಯಾರು ಬೆಸ್ಟ್?

ಬಿಪ್ಯಾಕ್ ಬೆಂಬಲಿತ ಅಭ್ಯರ್ಥಿಗಳು:

ಕ್ಷೇತ್ರ ಅಭ್ಯರ್ಥಿ ಪಕ್ಷ
ಬೊಮ್ಮನಹಳ್ಳಿ ಸುಷ್ಮಾ ರಾಜಗೋಪಾಲ ರೆಡ್ಡಿ ಕಾಂಗ್ರೆಸ್
ಮಹದೇವಪುರ

ಅರವಿಂದ ಲಿಂಬಾವಳಿ

ಪಿ ರಮೇಶಚಂದರ್

ಬಿಜೆಪಿ

ಸ್ವರಾಜ್ ಇಂಡಿಯಾ

ಬಿಟಿಎಂ ಲೇಔಟ್ ರಾಮಲಿಂಗಾರೆಡ್ಡಿ ಕಾಂಗ್ರೆಸ್
ಯಲಹಂಕ ಎಸ್. ಆರ್ ವಿಶ್ವನಾಥ್ ಬಿಜೆಪಿ
ಕೆ.ಆರ್ ಪುರ ಕೆ.ಆರ್ ಪುರ ಎಎಪಿ
ಬ್ಯಾಟರಾಯನಪುರ

ಕೃಷ್ಣಬೈರೇಗೌಡ

ನರೇಂದ್ರ ಕುಮಾರ್

ಕಾಂಗ್ರೆಸ್

ಸ್ವತಂತ್ರ

ಯಶವಂತಪುರ ಎಸ್. ಟಿ ಸೋಮಶೇಖರ್ ಕಾಂಗ್ರೆಸ್
ಮಹಾಲಕ್ಷ್ಮಿ ಲೇಔಟ್

ಕೆ ಗೋಪಾಲಯ್ಯ

ಎನ್ಎಲ್ ನರೇಂದ್ರ ಬಾಬು

ಎಚ್.ಎಸ್ ಮಂಜುನಾಥ್

ಜೆಡಿಎಸ್

ಬಿಜೆಪಿ

ಕಾಂಗ್ರೆಸ್

ಮಲ್ಲೇಶ್ವರ ಡಾ. ಸಿ.ಎನ್ ಅಶ್ವಥನಾರಾಯಣ ಬಿಜೆಪಿ
ಹೆಬ್ಬಾಳ ವೈ .ಎ ನಾರಾಯಣ ಸ್ವಾಮಿ ಬಿಜೆಪಿ
ಸರ್ವಜ್ಞನಗರ

ಕೆ.ಜೆ ಜಾರ್ಜ್

ಪೃಥ್ವಿರೆಡ್ಡಿ

ಕಾಂಗ್ರೆಸ್

ಎಎಪಿ

ಸಿವಿ ರಾಮನ್ ನಗರ ಆರ್ ಸಂಪತ್ ರಾಜ್ ಕಾಂಗ್ರೆಸ್
ಶಾಂತಿನಗರ

ಎನ್.ಎ ಹ್ಯಾರೀಸ್

ರೇಣುಕಾ ವಿಶ್ವನಾಥನ್

ಪೀಟರ್ ಸ್ಯಾಮ್ಸನ್ ಬಾಬು

ಕಾಂಗ್ರೆಸ್

ಎಎಪಿ

ಸ್ವತಂತ್ರ

ಗಾಂಧಿನಗರ

ದಿನೇಶ್ ಗುಂಡೂರಾವ್

ಎ.ಆರ್ ಸಪ್ತಗಿರಿಗೌಡ

ಕಾಂಗ್ರೆಸ್

ಬಿಜೆಪಿ

ರಾಜಾಜಿನಗರ

ಜಿ ಪದ್ಮಾವತಿ

ಸುರೇಶ್ ಕುಮಾರ್

ಕಾಂಗ್ರೆಸ್

ಬಿಜೆಪಿ

ಗೋವಿಂದರಾಜನಗರ ಪ್ರಿಯಕೃಷ್ಣ ಕಾಂಗ್ರೆಸ್
ವಿಜಯನಗರ ಎಂ ಕೃಷ್ಣಪ್ಪ ಕಾಂಗ್ರೆಸ್
ಬಸವನಗುಡಿ

ಎಲ್ ಎ ಸುಬ್ರಹ್ಮಣ್ಯ

ಡಾ. ಎ.ಎಸ್ ಭಾನುಪ್ರಕಾಶ್

ಬಿಜೆಪಿ

ಪಿಪಿಐ

English summary
Bangalore Political Action Committee (B.PAC) has endorsed 28 MLA aspirants out of a total of 438 candidates in the fray in the city. Eight are from the BJP, 12 from the Congress, three from AAP, one from JD(S), 22 independents
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X