ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ರಸ್ತೆ; ಗಡ್ಕರಿ ಕೊಟ್ಟ ಹೊಸ ಅಪ್‌ ಡೇಟ್

|
Google Oneindia Kannada News

ಬೆಂಗಳೂರು, ಆಗಸ್ಟ್ 01: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ನವೀಕರಣದ ಮೊದಲ ಹಂತವಾದ ಮೈಸೂರು-ನಿಡಘಟ್ಟ ಮಧ್ಯದ ರಸ್ತೆ ಇದೇ ಅಕ್ಟೋಬರ್‌ಗೆ ಸಾರ್ವನಿಕರಿಗೆ ಮುಕ್ತಾಗಲಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ರಾಷ್ಟ್ರೀಯ ರಸ್ತೆಯ ಉದ್ದೇಶಿತ 10 ಲೈನ್ ಪೈಕಿ ಮೊದಲಹಂತದಲ್ಲಿ ಆರು ಲೈನ್‌ನ ರಸ್ತೆಯಲ್ಲಿ ವಾಹನ ಸವಾರರು ಅಕ್ಟೋಬರ್ ನಿಂದ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಸಂಸತ್ತಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ಸೋಮವಾರ ಗಡ್ಕರಿ ಉತ್ತರಿಸಿದರು.

ಬೆಂಗಳೂರು; ಅಲ್ಪ ಮಳೆಗೆ ಕರೆಯಂತಾದ ಬನ್ನೇರುಘಟ್ಟ ರಸ್ತೆ ಬೆಂಗಳೂರು; ಅಲ್ಪ ಮಳೆಗೆ ಕರೆಯಂತಾದ ಬನ್ನೇರುಘಟ್ಟ ರಸ್ತೆ

ಮೈಸೂರು-ಬೆಂಗಳೂರಿನ ರಸ್ತೆ ಯೋಜನೆ ಘೋಷಿಸಿ ಅಂದಾಜು ನಾಲ್ಕು ವರ್ಷ ಕಳೆದಿವೆ. ಕುತೂಹಲ ಕೆರಳಿಸಿದ್ದ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಮಯ ಹತ್ತಿರವಾಗಿದೆ. ಹೆದ್ದಾರಿ ನವೀಕರಣ ಯೋಜನೆಯನ್ನು ಅಂದಾಜು 2,919 ಕೋಟಿ ರೂಪಾಯಿಯಲ್ಲಿ ಮುಗಿಸಲು ತೀರ್ಮಾನಿಸಿದ್ದ ಈ ಪೈಕಿ ಈಗಾಗಲೇ 1,939 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಸಂಸತ್ತಿಗೆ ಕೇಂದ್ರ ಸಚಿವರು ವಿವರಿಸಿದರು.]

ಆಕ್ಟೋಬರ್ 20ಕ್ಕೆ ಮೊದಲ ಹಂತ ಸಂಚಾರ ಮುಕ್ತ

ಆಕ್ಟೋಬರ್ 20ಕ್ಕೆ ಮೊದಲ ಹಂತ ಸಂಚಾರ ಮುಕ್ತ

ನಿಡಘಟ್-ಮೈಸೂರು ಮಧ್ಯದ ನವೀಕರಣಗೊಂಡ 10ಲೇನ್ ಎಕ್ಸ್‌ಪ್ರೆಸ್ ವೇನಲ್ಲಿ ಆರು ಮುಖ್ಯರಸ್ತೆ ಅಕ್ಟೋಬರ್‌ 20ರೊಳಗೆ ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ. ರಸ್ತೆಯುದ್ದಕ್ಕು ಸಿಗುವ ಗ್ರಾಮಗಳ ಆರಂಭಿಕ ಮತ್ತು ಅಂತ್ಯದ ಪಾಯಿಂಟ್‌ಗಳ ನಿರ್ಮಾಣ ಸೇರಿದಂತೆ ಕೆಲವು ಅಂತಿಮ ಹಂತದ ಕೆಲಸಗಳು ಬಾಕಿ ಉಳಿದಿವೆ. ಅವು ಪೂರ್ಣಗೊಳ್ಳುತ್ತಿದ್ದಂತೆ ಪರಿಶೀಲಿಸುವ ಅಧಿಕಾರಿಗಳು ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದರು.

ಪ್ರಯಾಣದ ಸಮಯದಲ್ಲಿ ಭಾರಿ ಇಳಿಕೆ

ಪ್ರಯಾಣದ ಸಮಯದಲ್ಲಿ ಭಾರಿ ಇಳಿಕೆ

ಈ ಎಕ್ಸಪ್ರೆಸ್‌ವೇ ಸಿದ್ಧವಾದ ಬಳಿಕ ಮೈಸೂರು- ಬೆಂಗಳೂರು ಮಧ್ಯದ ಸುಮಾರು 140 ಕಿ.ಮೀ. ದೂರದ ಪ್ರಯಾಣ ವ್ಯಾಪ್ತಿಯನ್ನು ಕೇವಲ 90ನಿಮಿಷದಲ್ಲಿ ಕ್ರಮಿಸಬಹುದಾಗಿದೆ. ಸದ್ಯ ಇವೆರಡು ನಗರದ ನಡುವಿನ ಸಂಚಾರ ಸಮಯ ಮೂರು ಗಂಟೆ ಹಿಡಿಯುತ್ತಿದೆ. ಕಾಮಗಾರಿ ಬಳಿಕ ಅದು ಅರ್ಧದಷ್ಟು ಕಡಿಮೆ ಆಗಲಿದೆ ಎಂದು ಸಚಿವ ಗಡ್ಕರಿ ತಿಳಿಸಿದರು.

ಗ್ರಾಮಸ್ಥರ ಬೇಡಿಕೆ ಹಿನ್ನೆಲೆ ಎಕ್ಸಪ್ರೆಸ್‌ವೇ ವಿಳಂಬ

ಗ್ರಾಮಸ್ಥರ ಬೇಡಿಕೆ ಹಿನ್ನೆಲೆ ಎಕ್ಸಪ್ರೆಸ್‌ವೇ ವಿಳಂಬ

ಇದೇ ವೇಳೆ ಮಾತನಾಡಿದ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಔಪಚಾರಿಕವಾಗಿ ತೆರೆಯಲು ಕೆಲ ಗ್ರಾಮಸ್ಥುರು ಹೊಸ ಬೇಡಿಕೆ ಇಟ್ಟಿದ್ದರಿಂದ ಸಂಚಾರ ಮುಕ್ತ ಮಾಡುವುದು ತುಸು ವಿಳಂಬವಾಗಲಿದೆ. ಈ ಎಕ್ಸಪ್ರೆಸ್ ವೇ ಅಕ್ಕಪಕ್ಕದ ಗಣಗೂರು ಟೋಲ್ ಪ್ಲಾಜಾ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಬಿಡದಿ ಮತ್ತು ರಾಮನಗರದಲ್ಲಿ ತಂಗುದಾಣಗಳ ಭಾಗದಲ್ಲಿ ಗ್ರಾಮಗಳಿಗೆ ಹೋಗುವ ಮತ್ತು ಬರುವ (ಪ್ರವೇಶ ಮತ್ತು ನಿರ್ಗಮನ) ಸ್ಥಳ ಬದಲಿಸುವ ಕೆಲಸವಾಗುತ್ತಿದೆ ಎಂಬುದನ್ನು ಸಂಸತ್ತಿನ ಗಮನಕ್ಕೆ ತಂದರು.

ಅಕ್ಟೋಬರ್ ಬಳಿಕ ಸಂಚಾರ ಸಮಸ್ಯೆಗೆ ಬ್ರೇಕ್

ಅಕ್ಟೋಬರ್ ಬಳಿಕ ಸಂಚಾರ ಸಮಸ್ಯೆಗೆ ಬ್ರೇಕ್

ಈ ಬೆಂಗಳೂರು-ಮೈಸೂರು ನಡುವಿನ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಪೂರ್ಣಗೊಂಡರೆ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಎರಡು ನಗರಗಳು ಚಿಕ್ಕಮಗಳೂರು, ಕೊಡಗು, ಮಂಗಳೂರು ಮತ್ತು ಕೇರಳದ ಕೆಲವು ಭಾಗಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಸುಮಾರು 140ಕಿ.ಮೀ. ಉದ್ದದ ಹೆದ್ದಾರಿಯಲ್ಲಿ ವಾರಾಂತ್ಯ ಬಂದರೆ, ರಜಾದಿನ ಹಾಗೂ ಹಬ್ಬದ ಸಂದರ್ಭದಲ್ಲಿ ಭಾರೀ ವಾಹನ ದಟ್ಟಣೆ ಕಂಡು ಬರುತ್ತಿತ್ತು. ಅಕ್ಟೋಬರ್ ನಂತರ ಈ ಸಂಚಾರ ಸಮಸ್ಯೆಗೆ ಕಡಿವಾಣ ಬೀಳಲಿದೆ.

ಎಕ್ಸಪ್ರೆಸ್‌ ವೇಯು ದೊಡ್ಡ-ಚಿಕ್ಕ ಸೇರಿ 72 ಸೇತುವೆ, 41 ರಸ್ತೆ ಅಂಡರ್‌ಪಾಸ್‌ ಹಾಗೂ 13 ಪಾದಚಾರಿ ಅಂಡರ್‌ಪಾಸ್‌ ಒಳಗೊಂಡಿದೆ. ಜತೆಗೆ ನಾಲ್ಕು ರೈಲ್ವೇ ಮೇಲ್ಸೇತುವೆಗಳನ್ನು ಈ ದಾರಿಯಲ್ಲಿ ಕಾಣಬಹುದು ಎಂದು ಕಾಮಗಾರಿಯ ವರದಿ ತಿಳಿಸಿದೆ.

Recommended Video

ಫಾಝಿಲ್ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಚೇಸ್ ಮಾಡಿ ಅರೆಸ್ಟ್ ಮಾಡಿದ್ದು ಹೇಗೆ? | *Crime |Oneindia Kannada

English summary
Fist stage (Nidagatta to Mysuru) of Bengaluru-Mysuru Expressway use in October, National highway authority union minister Nitin Gadkari said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X