ಈ ಬಂಕ್ ನಲ್ಲಿ ಪೆಟ್ರೋಲ್-ಡೀಸೆಲ್ ಹಾಕಿಸಿದರೆ ತಿಂಡಿ- ಊಟ ಫ್ರೀ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 5: ಇನ್ನೂರೈವತ್ತು ರುಪಾಯಿ ಮೇಲ್ಪಟ್ಟು ಪೆಟ್ರೋಲ್ ಅಥವಾ ಡೀಸೆಲ್ ಭರ್ತಿ ಮಾಡಿಸಿದರೆ, ಇಷ್ಟು ಮೊತ್ತಕ್ಕೆ ಇಂಥ ಆಹಾರ ಪದಾರ್ಥ ಗ್ರಾಹಕರಿಗೆ ಉಚಿತವಾಗಿ ನೀಡುವ ಯೋಜನೆಯೊಂದನ್ನು ಇಲ್ಲಿನ ಹಳೇ ಮದ್ರಾಸ್ ರಸ್ತೆಯಲ್ಲಿರುವ ವೆಂಕಟೇಶ್ವರ ಸರ್ವೀಸ್ ಸ್ಟೇಷನ್ ಪೆಟ್ರೋಲ್ ಬಂಕ್ ನಲ್ಲಿ ಸೆಪ್ಟೆಂಬರ್ ಆರರಿಂದ ಪರಿಚಯಿಸಲಾಗುತ್ತಿದೆ.

ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ

ಇಂಡಿಯನ್ ಆಯಿಲ್ ಕಂಪೆನಿಯ ಡೀಲರ್ ಆದ ಬಂಕ್ ನ ಮಾಲೀಕ ಪ್ರಕಾಶ್ ರಾವ್ ಸಾಠೆ ಅವರಿಗೆ ಈ ಆಲೋಚನೆ ಬಂದಿದೆ. ಹೆಚ್ಚಿನ ಪ್ರಮಾಣದ ತೈಲ ಮಾರುವ ಈ ಬಂಕ್ ಗೆ ಅದಕ್ಕಾಗಿ ಗೌರವ ಸಹ ಸಿಕ್ಕಿದೆ. ತಮ್ಮ ಸಂತೋಷಕ್ಕಾಗಿ ಗ್ರಾಹಕರಿಗೆ ಏನಾದರೂ ಕೊಡುಗೆ ನೀಡಲು ತಿಂಡಿ ಅಥವಾ ಊಟ ನೀಡುವುದಕ್ಕೆ ಸಾಠೆ ನಿರ್ಧರಿಸಿದ್ದಾರೆ.

Food items are free for customer in this petrol pump

ಪ್ರತಿ ದಿನವೂ ಇಲ್ಲಿ ಮೆನು ಬದಲಾಗುತ್ತದೆ. ಅನುಭವಿ ಅಡುಗೆಯವರು ಇಲ್ಲಿ ಊಟ-ತಿಂಡಿ ತಯಾರು ಮಾಡುತ್ತಾರೆ. ಅಂದಹಾಗೆ ಇಡೀ ದೇಶಕ್ಕೆ ಇಂಥದ್ದೊಂದು ಪ್ರಯತ್ನ ಇದೇ ಮೊದಲು ಎನ್ನಲಾಗುತ್ತಿದೆ. ಸೆಪ್ಟೆಂಬರ್ ಆರರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈ ಯೋಜನೆಗೆ ಚಾಲನೆ ಕೊಡುತ್ತಾರೆ ಎಂದು ಮಾಲೀಕ ಪ್ರಕಾಶ್ ಹೇಳಿದ್ದಾರೆ.

ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಔಷಧ, ದಿನಸಿ ಮಾರಾಟ ವ್ಯವಸ್ಥೆ!

ಗ್ರಾಹಕರು ಬಂಕ್ ನೊಳಗೆ ಬರುತ್ತಿದ್ದಂತೆಯೇ ಎಷ್ಟು ಮೊತ್ತಕ್ಕೆ ತೈಲ ಭರ್ತಿ ಮಾಡಿಸುತ್ತಾರೆ ಎಂಬುದನ್ನು ಒಬ್ಬರು ತಿಳಿದುಕೊಳ್ಳುತ್ತಾರೆ. ಆ ನಂತರ ವಾಹನಕ್ಕೆ ತೈಲ ತುಂಬಿಸುವಷ್ಟರಲ್ಲಿ ಆ ಮೊತ್ತಕ್ಕೆ ತಕ್ಕಂತೆ ಆಹಾರ ಪದಾರ್ಥ ನೀಡುತ್ತಾರೆ. ಅದು ಪಾರ್ಸೆಲ್ ತಂದುಕೊಡುತ್ತಾರೆ.

ಅಲ್ಲೇ ಆದರೂ ತಿನ್ನಬಹುದು ಅಥವಾ ತೆಗೆದುಕೊಂಡು ಹೋಗಬಹುದು. ಬಂಕ್ ನಲ್ಲಿ ಕುಡಿಯುವ ನೀರಿಗೂ ವ್ಯವಸ್ಥೆ ಇರುತ್ತದೆ. ಸದ್ಯಕ್ಕೆ ಇಲ್ಲಿ ನಿತ್ಯ ಐದು ಸಾವಿರದಷ್ಟು ಗ್ರಾಹಕರು ಬರುತ್ತಿದ್ದಾರೆ. ಈ ಯೋಜನೆ ಯಶಸ್ವಿ ಆದರೆ ಬೆಂಗಳೂರಿನ ನೂರು ಪೆಟ್ರೋಲ್ ಬಂಕ್ ಗಳಿಗೆ ವಿಸ್ತರಣೆ ಮಾಡುವ ಉದ್ದೇಶ ಇದೆ. ಈ ಸಂಬಂಧ ಕ್ವಿಕೀಸ್ ಮತ್ತು ಇಂಡಿಯನ್ ಆಯಿಲ್ ಕಂಪೆನಿ ಜೊತೆಗೆ ಒಪ್ಪಂದ ಕೂಡ ಆಗಿದೆಯಂತೆ.

ಇಂಧನ ದರ ಪರಿಷ್ಕರಣೆ ಚೆಕ್ ಮಾಡುವುದು ಹೇಗೆ? ಎಲ್ಲಿ?

250ರಿಂದ 600 ರುಪಾಯಿವರೆಗೆ ತೈಲ ಭರ್ತಿ ಮಾಡಿಸಿಕೊಂಡರೆ ಮಿನಿ ಸಮೋಸಾ, ಟೀ- ಕಾಫಿ

601ರಿಂದ 1,000ದವರೆಗೆ ದೊಡ್ಡ ಸಮೋಸಾ, ಸಸ್ಯಾಹಾರಿ ಅಥವಾ ಎಗ್ ಪಪ್ಸ್, ಕೀಮಾ ಬಾಲ್ಸ್

1,001ರಿಂದ ಮೇಲ್ಪಟ್ಟು 1,500ರವರೆಗೆ ಕೇಕ್, ಉಪ್ಪಿಟ್ಟು, ಕೇಸರಿಬಾತ್, ಪುಳಿಯೋಗರೆ, ದ್ರಾಕ್ಷಿ ರಸ, ಲಸ್ಸಿ

1,501ರಿಂದ 2,000 ರುಪಾಯಿವರೆಗೆ ಮೆಂತೆ ರೈಸ್‌, ಘೀ ರೈಸ್‌, ಚಿತ್ರಾನ್ನ, ಬಿಸಿಬೇಳೆಬಾತ್

2,001 ರುಪಾಯಿ ಮೇಲ್ಪಟ್ಟ ಖರೀದಿಗೆ ವೆಜ್ ಬಿರಿಯಾನಿ, ಚಿಕನ್‌ ಬಿರಿಯಾನಿ, ಚಿಕನ್‌ ಸ್ಯಾಂಡ್ ವಿಚ್, ಪನ್ನೀರ್ ಸ್ಯಾಂಡ್ ವಿಚ್, ಚಿಲ್ಲಿ ಚಿಕನ್, ಚಿಕನ್‌ ಮಸಾಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Venkateshwara service station- Indian oil petrol dealers at Old Madras road, Bengaluru offering free foodfor customers who fill petrol or diesel for above RS 250. This offer will come into effect from September 6th. KPCC president Dr.G.Parameshwara will inaugurate.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ