ಇನ್ನು ಪೆಟ್ರೋಲ್ ಬಂಕ್ ಗಳಲ್ಲಿ ಔಷಧ, ದಿನಸಿ ಮಾರಾಟ ವ್ಯವಸ್ಥೆ!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 17: ಶೀಘ್ರದಲ್ಲೇ ದೇಶದ ಪೆಟ್ರೋಲ್ ಬಂಕ್ ಗಳು ಹೊಸ ಸ್ವರೂಪ ಪಡೆದುಕೊಳ್ಳಲಿದ್ದು, ಅಲ್ಲ ಪೆಟ್ರೋಲ್ ಮಾತ್ರವಲ್ಲ, ಔಷಧಿ, ದಿನಸಿಯೂ ಸಿಗಲಿದೆ!

ಹೌದು, ಅಚ್ಚರಿಯೆನಿಸಿದರೂ ಇದು ಸತ್ಯ. ಇದನ್ನು ಖುದ್ದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೇ ತಿಳಿಸಿದ್ದಾರೆ.

Soon, you can buy medicines, groceries from petrol pumps

ಬುಧವಾರ (ಆಗಸ್ಟ್ 17), ನವದೆಹಲಿಯಲ್ಲಿ ಇಂಧನ ದಕ್ಷತಾ ಸೇವೆಗಳ ನಿಯಮಿತ (ಇಇಸಿಎಲ್) ಸಂಸ್ಥೆ ಹಾಗೂ ಸರ್ಕಾರಿ ಸ್ವಾಮ್ಯದ ಮೂರು ಇಂಧನ ಸರಬರಾಜು ಸಂಸ್ಥೆಗಳೊಂದಿಗೆ ಉಜಾಲಾ ಯೋಜನೆಯ ಕುರಿತಂತೆ ಒಪ್ಪಂದವೊಂದಕ್ಕೆ ಸಹಿ ಹಾಕುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಾಜರಿದ್ದ ಧರ್ಮೇಂದ್ರ ಪ್ರಧಾನ್ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ತಿಳಿಸಿದರು.

ಪೆಟ್ರೋಲ್ ಬಂಕ್ ಗಳನ್ನು ಬಹುಪಯೋಗಿ ಕೇಂದ್ರಗಳನ್ನಾಗಿ ಪರಿವರ್ತಿಸುವ ಇರಾದೆ ಕೇಂದ್ರ ಸರ್ಕಾರಕ್ಕಿದ್ದು, ಈ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಮಾತುಕತೆ ಸಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಕೇಂದ್ರಗಳಲ್ಲಿ ಔಷಧಿ ಹಾಗೂ ದಿನಸಿ ಸಿಗುವಂಥ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನಗಳು ಸಾಗಿವೆ. ಆನಂತರ, ಪೆಟ್ರೋಲ್ ಬಂಕ್ ಗಳಲ್ಲಿ ಇಂಟರ್ನೆಂಟ್ ಬ್ರೌಸಿಂಗ್ ಕೇಂದ್ರಗಳನ್ನೂ ಸ್ಥಾಪಿಸುವ ಆಲೋಚನೆ ಸರ್ಕಾರದ ಮುಂದಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government is considering enhancing the revenue base of state-owned oil companies' petrol pumps by allowing them to offer pharmaceuticals, groceries and other such products for sale.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ