Viral Video: ಮದ್ವೆಯಾಗದೇ ಮಗುವಿನಾ ತಾಯಿಯಾದ್ರಾ ಕೇರಳ ಫೈಲ್ಸ್ ನಟಿ ಅಧಾ ಶರ್ಮಾ, ಪ್ರೆಗ್ನೆನ್ಸಿ ಪೋಸ್ಟಿನ ಸತ್ಯಾಸತ್ಯತೆ ಏನು
Viral Video: ದಿ ಕೇರಳ ಫೈಲ್ಸ್ ಸಿನಿಮಾದ ಮೂಲಕ ಖ್ಯಾತಿ ಗಳಿಸಿರುವ ಅದಾ ಶರ್ಮಾ ಅವರು ಗರ್ಭಿಣಿಯಾಗಿದ್ದಾರೆಯೇ ಎನ್ನುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಬಾಲಿವುಡ್ ನಟಿ ಅದಾ ಶರ್ಮಾ ತಮ್ಮ ವಿಶಿಷ್ಟ ಶೈಲಿಯಿಂದ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ತಮಾಷೆಯ ಮತ್ತು ವಿಶಿಷ್ಟ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅದಾ ಶರ್ಮಾ ಅವರು ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು. ಆದರೆ ಇದೀಗ ಅವರು ಗರ್ಭಿಣಿ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಹಂಚಿಕೊಂಡಿದ್ದ ವಿಡಿಯೋ ಪೋಸ್ಟ್‌ವೊಂದು ವೈರಲ್ ಆಗಿದೆ. ಸ್ವಲ್ಪ ಸಮಯದವರೆಗೆ ಅದಾ ಅವರ ಅಭಿಮಾನಿಗಳನ್ನು ಸಂಪೂರ್ಣವಾಗಿ ಗೊಂದಲಗೊಂಡಿದ್ದರು. ವಿಡಿಯೋದಲ್ಲಿ ನಟಿ ಸ್ವತಃ ತಾವು ತಾಯಿಯಾಗಲಿದ್ದೇನೆ ಎಂದು ಹೇಳಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೂ ಕಾರಣವಾಗಿತ್ತು.
ಅದಾ ಶರ್ಮಾ ಅವರ ವೀಡಿಯೊ ಸಂಚಲನವನ್ನು ಸೃಷ್ಟಿಸಿತು. ವಿಡಿಯೋ ವೈರಲ್ ಆಗಿವುದಕ್ಕೆ ಪ್ರಾರಂಭವಾಗುತ್ತಿದ್ದಂತೆಯೇ ಅನೇಕ ಜನರು ಇದನ್ನು ಅದಾ ಶರ್ಮಾ ಅವರ ವೈಯಕ್ತಿಕ ಜೀವನದೊಂದಿಗೆ ಹೋಲಿಕೆ ಮಾಡುವುದಕ್ಕೆ ಪ್ರಾರಂಭಿಸಿದರು. ಆದಾಗ್ಯೂ, ಕೆಲವು ಸೆಕೆಂಡುಗಳ ನಂತರ, ಪೂರ್ಣ ವಿಷಯ ಬಹಿರಂಗಪಡಿಸಲಾಯಿತು, ಜನರು ಇದನ್ನು ಕೇಳಿ ನಕ್ಕಿದ್ದಾರೆ. ಅಂದಹಾಗೆ ಅದಾ ಶರ್ಮಾ ಅವರಿಗೆ ಇನ್ನೂ ಮದುವೆ ಆಗಿಲ್ಲ.

ಅಭಿಮಾನಿಗಳೊಂದಿಗೆ ಅದಾ ಶರ್ಮಾ ತುಂಟಾಟ
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಅದಾ ಶರ್ಮಾ ಅವರು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂದು ತುಂಬಾ ಗಂಭೀರವಾದ ಸ್ವರದಲ್ಲಿ ಹೇಳಿದ್ದರು. ಇದನ್ನು ಕೇಳಿದ ನಂತರ, ನಟಿ ಕೆಲವು ದೊಡ್ಡ ಸುದ್ದಿಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದಾಗ್ಯೂ ಮುಂದಿನ ಕ್ಷಣ, ಅದಾ ತಾನು ಮಲತಾಯಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಂತರ ಕ್ಯಾಮೆರಾ ಪಕ್ಷಿ ಮತ್ತು ಅದರ ಸಂಗಾತಿಯತ್ತ ತಿರುಗುತ್ತದೆ. ಆ ಎರಡು ಪಕ್ಷಿಗಳು ಸೇರಿ ಮುದ್ದಾದ ಮರಿಗೆ ಜನ್ಮ ನೀಡಿವೆ. ಈಗ ಅದನ್ನು ಸಾಕಿ ಬೆಳೆಸುವಲ್ಲಿ ಅದಾ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವಿಡಿಯೋದ ಕೊನೆಯಲ್ಲಿ, ಈ ಕಥೆಯ ಮುಂದಿನ ಅಪ್ಡೇಟ್ ಅನ್ನು ಒಂದು ವಾರದ ಬಳಿಕ ಹಂಚಿಕೊಳ್ಳುವುದಾಗಿ ನಟಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ
ಇನ್ನು ಅದಾ ಶರ್ಮಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ನಟಿಯ ಸೃಜನಶೀಲತೆಯ ಬಗ್ಗೆ ಹೊಗಳಿದ್ದಾರೆ. ಆದರೆ ಇತರರು ಅವರ ಹಾಸ್ಯಮಯ ಶೈಲಿಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹೆಸರಿನ ಮೊದಲ ಅಕ್ಷರವನ್ನು ನಿರ್ಧರಿಸಲು ಮಗುವಿನ ಜನನ ಸಮಯವನ್ನು ಹಂಚಿಕೊಳ್ಳುವುದು ಮುಖ್ಯ ಎಂದು ಒಬ್ಬ ಬಳಕೆದಾರರು ತಮಾಷೆಯಾಗಿ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಸಹ ಇದೇ ಮಾದರಿಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿಡಿಯೋ ಪ್ರಾರಂಭವಾದ ನಂತರ ಕೆಲವು ಅಭಿಮಾನಿಗಳು ಅವರನ್ನು ಅಭಿನಂದಿಸಲು ಪ್ರಾರಂಭಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ಅದಾ ಶರ್ಮಾ ಆಕ್ಟೀವ್
ಇನ್ನು ಅದಾ ಶರ್ಮಾ ತಮ್ಮ ವಿಶಿಷ್ಟ ಶೈಲಿಯ ವಿಡಿಯೋಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಅಭಿಮಾನಿಗಳನ್ನು ನಗಿಸುವ ಮತ್ತು ಯೋಚಿಸುವಂತೆ ಮಾಡುವ ವಿಡಿಯೋಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ಅದಕ್ಕಾಗಿಯೇ ಅವರ ಪ್ರತಿಯೊಂದು ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗುತ್ತವೆ. ಇತ್ತೀಚಿನ ವರ್ಷಗಳಲ್ಲಿ, ನಟಿ ತಮ್ಮ ಚಲನಚಿತ್ರಗಳ ಮೂಲಕ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ವಿಶೇಷವಾಗಿ "ದಿ ಕೇರಳ ಸ್ಟೋರಿ" ಚಿತ್ರದ ಯಶಸ್ಸಿನ ನಂತರ, ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗಿದೆ.
ಆದಾ ಶರ್ಮಾ 2008 ರಲ್ಲಿ ಬಿಡುಗಡೆಯಾದ "1920" ಎಂಬ ಹಾರರ್ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಮೊದಲ ಚಿತ್ರದಲ್ಲಿನ ಅವರ ಅಭಿನಯವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಮುಂದೆ ಅವರು ಹಿಂದಿ ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದ ಸಿನಿಮಾಗಳಲ್ಲೂ ನಟಿಸಿದ್ದಾರೆ.














Click it and Unblock the Notifications