ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಶೀಕರಣ ಮಾಡಿ ಚಿನ್ನ ದೋಚಿದ ಭಿಕ್ಷುಕ?

By Manjunatha
|
Google Oneindia Kannada News

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಮರಳುಬಾಗಿಲುವಿನಲ್ಲಿ ಭಿಕ್ಷೆ ಬೇಡುವ ನೆಪದಲ್ಲಿ ವ್ಯಕ್ತಿಯೊಬ್ಬ ಬಂದು ಚಿನ್ನ ದೋಚಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮೈಸೂರು: ಅಮಾವಾಸ್ಯೆ ದಿನವೇ ಆಸ್ಪತ್ರೆಯಲ್ಲಿ ವಾಮಾಚಾರಮೈಸೂರು: ಅಮಾವಾಸ್ಯೆ ದಿನವೇ ಆಸ್ಪತ್ರೆಯಲ್ಲಿ ವಾಮಾಚಾರ

ಮಹಿಳೆ ರತ್ನಮ್ಮ ಮನೆಯಲ್ಲಿ ಒಬ್ಬರೆ ಇದ್ದಾಗ ಖಾವಿಧಾರಿಯೊಬ್ಬ ಭಿಕ್ಷೆ ಬೇಡುವ ನೆಪದಲ್ಲಿ ಬಂದು, ಮನೆಯಲ್ಲಿ ದೋಷ ಇದ್ದು, ಅದನ್ನು ಪರಿಹಾರ ಮಾಡಿಕೊಡುತ್ತೇನೆ ಎಂದು ಹೇಳಿ, ಅಕ್ಕಿ ತರಿಸಿಕೊಂಡು ಅದನ್ನು ರತ್ನಮ್ಮನ ಮೇಲೆ ಸುರಿದು, ವಶೀಕರಣಕ್ಕೊಳಪಡಿಸಿ ಮನೆಯಲ್ಲಿದ್ದ ಚಿನ್ನವನ್ನು ಆಕೆಯ ಕೈಯಲ್ಲೇ ತರಿಸಿಕೊಂಡಿದ್ದಾನೆ ಎಂದು ರತ್ನಮ್ಮ ಹೇಳುತ್ತಿದ್ದಾರೆ.

Devanahalli : Women says begger rob gold by doing blackmagic

ರತ್ನಮ್ಮ ಅವರ ಮನೆಯ ಪಕ್ಕದ ಮನೆಯವರು ಮನೆ ರಿಪೇರಿ ಮಾಡಿಸುತ್ತಿದ್ದು, ಅವರ ಚಿನ್ನವನ್ನು ಇಟ್ಟುಕೊಳ್ಳಲು ರತ್ನಮ್ಮನ ಬಳಿ ಕೊಟ್ಟಿದ್ದರಂತೆ, ಈಗ ರತ್ನಮ್ಮ ಹೇಳುವ ಪ್ರಕಾರ ಆ ಭಿಕ್ಷುಕ ವಶೀಕರಣ ಮಾಡಿ ಮನೆಯಲ್ಲಿದ್ದ ಅಷ್ಟೂ ಚಿನ್ನವನ್ನು ದೋಚಿದ್ದಾನೆ. ಅದರಲ್ಲಿ ಪಕ್ಕದ ಮನೆಯವರ ಚಿನ್ನವೂ ಸೇರಿದೆ.

Devanahalli : Women says begger rob gold by doing blackmagic

'ಭಿಕ್ಷುಕ ಮಂತ್ರಿಸಿದ ಅಕ್ಕಿಯನ್ನು ತಲೆಯ ಮೇಲೆ ಹಾಕಿ, ಕೈಗೆ ದಾರವೊಂದನ್ನು ಕಟ್ಟಿದ, ನನಗೆ ತಲೆ ಸುತ್ತುವಂತಾಯಿತು, ಆಮೆಲೆ ಆತ ಹೇಳಿದಂತೆ ನಾನು ಬೀರುವಿನಲ್ಲಿದ್ದ ಚಿನ್ನವನ್ನು ಅವನ ಕೈಗಿತ್ತೆ' ಎಂಬ ಕತೆಯನ್ನು ರತ್ಮನ್ನ ಮಾಧ್ಯಮದ ಮುಂದೆ ಹೇಳಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮಹಿಳೆ ಸುಳ್ಳು ಹೇಳುತ್ತಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರವಷ್ಟೆ ನಿಜವಾದ ಕಳ್ಳ ಹೊರಬರಲಿದ್ದಾನೆ.

English summary
Rathnamma from Devanahalli siad a begger come to her house and did some black magic and rob 150 grm gold. police doubting womens statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X