ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ಯಾಕ್ಸಿ ಚಾಲಕರಿಗೆ ಪೊಲೀಸ್ ಇಲಾಖೆ ಸೂಚನೆಗಳೇನು?

|
Google Oneindia Kannada News

ಬೆಂಗಳೂರು. ಡಿ. 10 : ದೆಹಲಿ ಟ್ಯಾಕ್ಸಿ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಟ್ಯಾಕ್ಸಿ ಚಾಲಕ ಮತ್ತು ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

ಪೊಲೀಸ್ ಆಯುಕ್ತ ಎಂ.ನ್.ರೆಡ್ಡಿ ಮತ್ತು ಸಾರಿಗೆ ಇಲಾಖೆ ಆಯುಕ್ತ ಡಾ.ರಾಮೇಗೌಡ ನಗರದ ಟ್ಯಾಕ್ಸಿ ಮಾಲೀಕರು ಮತ್ತು ಚಾಲಕರೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ಪಾಲಿಸಲು ತಿಳಿಸಿದ್ದಾರೆ.[ದೆಹಲಿ: ಅತ್ಯಾಚಾರಿ ಟ್ಯಾಕ್ಸಿ ಚಾಲಕ ಬಂಧನ]

mn reddi

ಟ್ಯಾಕ್ಸಿ ಚಾಲಕರು 250 ರೂ. ಶುಲ್ಕ ಪಾವತಿಸಿ, ಅರ್ಜಿಯೊಂದಿಗೆ ಡಿಎಲ್ ಮತ್ತು ವಿಳಾಸದ ವಿವರವನ್ನು ಪೊಲೀಸ್ ಆಯುಕ್ತರ ಕಚೇರಿಗೆ ನೇರವಾಗಿ ಇಲ್ಲವೇ ಆನ್‌ಲೈನ್ ಮೂಲಕ ಡಿ.31ರೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

25 ಮಾರ್ಗಸೂಚಿಗಳನ್ನು ನೀಡಲಾಗಿದ್ದು ನಿಯಮಗಳನ್ನು ಉಲ್ಲಂಘಿಸುವವರ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಚಾಲಕರನ್ನು ನೇಮಿಸಿಕೊಳ್ಳುವಾಗ ಆತನ ಪೂರ್ವಾಪರ ತಿಳಿದುಕೊಂಡರೆ ಉತ್ತಮ. ಅವಘಡವಾದ ನಂತರ ಪಶ್ಚಾತಾಪ ಪಡಬೇಕಾದ್ದು ತಪ್ಪುತ್ತದೆ ಎಂದು ರಾಮೇಗೌಡ ಸಲಹೆ ನೀಡಿದ್ದಾರೆ.[ಬೆಂಗಳೂರು ಮಹಿಳೆಯರು ಸುರಕ್ಷಿತವೇ?]

ಪ್ರಮುಖ ಸೂಚನೆಗಳು

  • ಸ್ಥಳೀಯ ಸಾರಿಗೆ ಇಲಾಖೆಗೆ ಮಾಹಿತಿ ನೀಡದೇ ಕ್ಯಾಬ್ ನ ಪ್ರಧಾನ ಕಚೇರಿ ಸ್ಥಳಾಂತರಿಸುವಂತಿಲ್ಲ.
  • ವಾಹನದಲ್ಲಿ ಅಸಲಿ ಪರವಾನಗಿ ಪತ್ರ ಇಟ್ಟುಕೊಳ್ಳುವುದು ಕಡ್ಡಾಯ
  • 24 ಗಂಟೆಯೂ ಪ್ರಯಾಣಕರಿಗೆ ಸೇವೆ ನೀಡಬೇಕು.
  • ಪ್ರತಿ ಕ್ಯಾಬ್ ಟೆಲಿಫೋನ್ ಅಥವಾ ರೆಡಿಯೋ ಕಂಪನಿಯ ನಿಯಂತ್ರಣಾ ಕೊಠಡಿಯ ಅಧೀನದಲ್ಲಿರಬೇಕು.
  • ಚಾಲಕ ಸೇರಿ 5 ಕ್ಕಿಂತ ಹೆಚ್ಚು ಜನ ಸಂಚರಿಸುವಂತಿಲ್ಲ
  • ವಾಹನ ಹಳದಿ ಬಣ್ಣದಲ್ಲಿರಬೇಕು
  • ಇಲಾಖೆಯ ಪರವಾನಗಿಹೊಂದಿರುವ ಎಲೆಕ್ಟ್ರಾನಿಕ್ ಡಿಜಿಟಲ್ ಮೀಟರ್ ಅಳವಡಿಸಿರಬೇಕು.
  • ಟಿಂಟೆಡ್ ಗಾಜು ಬಳಸಲು ಅವಕಾಶವಿಲ್ಲ.
  • ಚಾಲಕನಿಗೆ ಸಮವಸ್ತ್ರ ಕಡ್ಡಾಯ
  • ವಾಹನದ ಮುಂದೆ ಮತ್ತು ಹಿಂದೆ ಸಿಟಿ ಟ್ಯಾಕ್ಸಿ ಎಂಬ ಬೋರ್ಡ್ ಹಾಕಿರಬೇಕು.
  • ಚಾಲಕನಿಗೆ ಲಘು ವಾಹನ ಚಾಲನೆಯಲ್ಲಿ ಕನಿಷ್ಠ 2 ವರ್ಷ ಅನುಭವವಿರಬೇಕು.
  • ಚಾಲಕ 10ನೇ ತರಗತಿ ತೇರ್ಗಡೆಯಾಗಿರಬೇಕು
  • ಲಗೇಜ್ ಇಡಲು ವಾಹನದಲ್ಲಿ ಸೂಕ್ತ ಸ್ಥಳಾವಕಾಶವಿರಬೇಕು
English summary
In the wake of the alleged rape of a 27-year-old woman executive in Delhi by a taxi driver, City Police on Tuesday issued instructions that all drivers must get their background verification done before December 31. "All the drivers who are running taxis shall get their background verification done by end of the month of December," City Police Commissioner M N Reddi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X