ವಿಕೃತ ಕಾಮಿಯ ಕಣ್ಣಿಂದ ಪಾರಾದ ಬೆಂಗಳೂರಿನ ಅನಾಥ ಮಕ್ಕಳು!

Posted By:
Subscribe to Oneindia Kannada

ಬೆಂಗಳೂರು, ಜೂನ್ 04 : ಮೂವತ್ತು ವರ್ಷದ ಆತ ಹೆಚ್ಚು ಮಾತಾಡುತ್ತಿರಲಿಲ್ಲ, ಎದುರಿಗೆ ನಿಂತು ಮಾತಾಡುವವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೂ ಇರಲಿಲ್ಲ, ಆತನ ವ್ಯವಹಾರಗಳೆಲ್ಲ ನಡೆಯುತ್ತಿದ್ದುದು ಈಮೇಲ್ ಮೂಲಕವೇ. ಆದರೆ, ಆತನ ಕಣ್ಣಲ್ಲಿ ವಿಕೃತ ಹೊಂಚು ಮನೆಮಾಡಿರುತ್ತಿತ್ತು.

ನೋಡುವವರು ಮರುಳಾಗುವಂತೆ ಮೆತ್ತಗೆ ಮಾತನಾಡುವ, ನೋಡಲು ಅತ್ಯಂತ ಮುಗ್ಧ ಯುವಕನಂತೆ ಕಾಣುವ, ಮಕ್ಕಳ ಅಭ್ಯುದಯಕ್ಕಾಗಿಯೇ ನನ್ನ ಜೀವನ ಮುಡಿಪು ಎಂದು ಹೇಳುತ್ತಿದ್ದ 30 ವರ್ಷದ ಬ್ರಿಟನ್ ಸಂಜಾತ, ಇಂಗ್ಲಿಷ್ ಗ್ರಾಮರ್ ಟೀಚರ್ ಈಗ ಜೈಲು ಪಾಲಾಗಿದ್ದಾನೆ.

ಈತನ ಬಗ್ಗೆ ಈಗ ಬರೆಯಲು ಕಾರಣವಿದೆ. ಕೈಯಲ್ಲಿ ಸದಾ ಕ್ಯಾಮೆರಾ ಹಿಡಿದುಕೊಂಡು, ಅನಾಥ ಮುಗ್ಧ ಮಕ್ಕಳ ಫೋಟೋ ತೆಗೆಯುತ್ತ, ವಿಡಿಯೋ ಮಾಡುತ್ತ ಇಡೀ ಜಗತ್ತು ಸುತ್ತುತ್ತಿದ್ದ ರಿಚರ್ಡ್ ಹಕ್ಕಲ್ ಎಂಬಾತ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿರುವ ನ್ಯೂ ಹೋಪ್ ಆರ್ಫನೇಜ್(ಮಕ್ಕಳ ಅನಾಥಾಶ್ರಮ)ಗೂ ಭೇಟಿ ನೀಡಿದ್ದ. ಅಲ್ಲದೆ, ಎರಡು ದಿನವೂ ತಂಗಿದ್ದ! [ಪೋಷಕರ ಕೂಗಿಗೆ, ಹಾರ್ಲೆ ಗುಡುಗಿಗೆ ಏಳುವುದೇ ಸರ್ಕಾರ?]


ಇದರಲ್ಲೇನಿದೆ ವಿಶೇಷ ಅಂತ ನೀವು ಕೇಳಬಹುದು. ವಿಷಯ ಇರುವುದು ಇಲ್ಲಿಯೇ. ವಯಸ್ಸಿಗೆ ಬಂದ ಬಾಲಕ, ಬಾಲಕಿಯರಿರಲಿ, ಏನನ್ನೂ ಅರಿಯದ, ಇನ್ನೂ ಚಡ್ಡಿ ಕೂಡ ಹಾಕಿಕೊಳ್ಳಲು ಬಾರದ ಎರಡು ವರ್ಷದ ಮಗುವನ್ನೂ ಆತ ಬಿಡುತ್ತಿರಲಿಲ್ಲ. ಹೆಣ್ಣನ್ನು ಮಾತ್ರವಲ್ಲ ಗಂಡು ಮಕ್ಕಳನ್ನೂ ಆತ ಬಿಡುತ್ತಿರಲಿಲ್ಲ. ಆತನಲ್ಲಿ ತುಂಬಿದ್ದು ಮಕ್ಕಳ ಬಗೆಗಿನ ಕರುಣೆಯಲ್ಲ, ಕಾಮ ವಾಂಛೆ!

"ನಾನು ನಿಮ್ಮ ಅನಾಥಾಶ್ರಮವನ್ನು ಭೇಟಿ ಮಾಡಬಹುದೆ? ಅಲ್ಲಿರುವ ಅನಾಥ ಮಕ್ಕಳ ಫೋಟೋ ತೆಗೆದು, ವಿಡಿಯೋ ಮಾಡಬಹುದೆ? ಈ ಮಕ್ಕಳಿಗೆ ವಿಶ್ವದಾದ್ಯಂತ ಪ್ರಚಾರ ಕೊಟ್ಟರೆ ನಿಮ್ಮ ಅನಾಥಾಶ್ರಮಕ್ಕೂ ಸಾಕಷ್ಟು ಹಣ ಹರಿದು ಬರುತ್ತದೆ" ಎಂದು ಹೇಳುತ್ತಿದ್ದ ಹಕ್ಕಲ್, ತನ್ನ ನಯವಾದ ವರ್ತನೆಯಿಂದಲೇ ಅನಾಥಾಶ್ರಮಗಳಿಗೆ ಪ್ರವೇಶ ಪಡೆಯುತ್ತಿದ್ದ. ['ಅತ್ಯಾಚಾರ ಪ್ರೇರೇಪಿಸುವ ಚಿತ್ರ ಕಿತ್ತು ಬಿಸಾಕಿ']

Bengaluru oraphanage children escape from paedo

ಇಂಥದೇ ಮೇಲನ್ನು ಬೆಂಗಳೂರಿನ ನ್ಯೂ ಹೋಪ್ ಎಂಬ ಮಕ್ಕಳ ಅನಾಥಾಶ್ರಮದ ಕ್ರೈಸ್ತ ಧರ್ಮಗುರು ಜಾರ್ಜ್ ಫರ್ನಾಂಡಿಸ್ ಅವರಿಗೆ ಬರೆದಿದ್ದ. "ನನ್ನ ಹೆಸರು ರಿಚರ್ಡ್ ಹಕ್ಕಲ್. ನಾನು ಯುಕೆಯವನಾಗಿದ್ದು, ಮಲೇಶಿಯಾದಲ್ಲಿ ಐಟಿ ಡಿಗ್ರಿ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿರುವ ಅನಾಥಾಶ್ರಮಕ್ಕೆ ಬರಲು ಉತ್ಸುಕನಾಗಿದ್ದೇನೆ" ಎಂದು ಬರೆದಿದ್ದ.

ಅವರಿಗೆ ಆತನ ಪತ್ರದಲ್ಲಿ, ಆತನ ನಡವಳಿಕೆಯಲ್ಲಿ ಯಾವುದೇ ಸಂಚು ಕಂಡಿರಲಿಲ್ಲ. ಆತನ ಅಪರಾಧಿ ಹಿನ್ನೆಲೆಯ ಬಗ್ಗೆ ಅವರಿಗೆ ಸುಳಿವು ಕೂಡ ಇರಲಿಲ್ಲ. ಒಂದು ದಿನ ಆತ ಬಂದೇಬಿಟ್ಟ. 'ಯಾರದಾದರೂ ಮನೆಯಲ್ಲಿ ಉಳಿಯಲು ಅವಕಾಶ ಸಿಗುವುದೆ' ಎಂದು ವಿನಮ್ರತೆಯಿಂದ ಕೇಳಿದ್ದ. 'ಅಲ್ಲಿಲ್ಲೆ ಯಾಕಿರ್ತೀರಿ, ಇಲ್ಲೇ ಇರಿ' ಎಂದು ಫರ್ನಾಂಡಿಸ್ ತಮ್ಮ ಅನಾಥಾಶ್ರಮದಲ್ಲಿಯೇ ತಂಗಲು ಅವಕಾಶ ನೀಡಿದ್ದರು.

Bengaluru oraphanage children escape from paedo

ಎರಡು ದಿನ ಆತ ಅಲ್ಲಿಯೇ ತಂಗಿದ್ದ. ಅಲ್ಲಿನ ವ್ಯವಸ್ಥಾಪಕರೊಡನೆ, ಮಕ್ಕಳೊಡನೆ ಮಾತನಾಡಿದ್ದ, ಸಾಕಷ್ಟು ಫೋಟೋ ತೆಗೆದುಕೊಂಡಿದ್ದ, ವಿಡಿಯೋ ಕೂಡ ಮಾಡಿಕೊಂಡಿದ್ದ. ಆದರೆ, ಅದೃಷ್ಟವಶಾತ್ ಬೆಂಗಳೂರಿನ ಅನಾಥ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಆತನಿಗೆ ಸಾಧ್ಯವಾಗಿರಲಿಲ್ಲ. ಏಕೆಂದರೆ, ತಿಳಿದೋ ತಿಳಿಯದೆಯೋ ಮಕ್ಕಳೊಡನೆ ಏಕಾಂಗಿಯಾಗಿರಲು ಅವಕಾಶ ನೀಡಿರಲಿಲ್ಲ.

ಇಷ್ಟೆಲ್ಲಾ ನಡೆದ ಮೇಲೆ ಧರ್ಮಗುರು ಜಾರ್ಜ್ ಫರ್ನಾಂಡಿಸ್ ಅವರಿಗೆ ತಿಳಿದುಬಂದಿದ್ದು ರಿಚರ್ಡ್ ಹಕ್ಕಲ್‌ನ ಕಾಮಕಾಂಡ. ಬೆಂಗಳೂರಿನಲ್ಲಿರುವ ನ್ಯೂ ಹೋಪ್ ಅನಾಥಾಶ್ರಮದ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡಿಲ್ಲವೆಂಬುದೆ ಸಮಾಧಾನದ ವಿಷಯ ಎಂದು ಫರ್ನಾಂಡಿಸ್ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ. [ರೇಪ್ ಕೇಸ್ ನಡೆಸುವಾಗ ಜಡ್ಜ್ ನಿದ್ದೆ ಹೊಡೆಯುತ್ತಿದ್ದ!]

Bengaluru oraphanage children escape from paedo

ಆತನ ವಿರುದ್ಧ 90 ಪ್ರಕರಣಗಳಲ್ಲಿ ಅಪರಾಧ ಎಸಗಿಸುವ ಕೇಸನ್ನು ಜಡಿಯಲಾಗಿದೆ. ಆತ ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದುದು ಮಾತ್ರವಲ್ಲ ಅವರ ಚಿತ್ರಗಳನ್ನೂ ತೆಗೆಯುತ್ತಿದ್ದ. ಆತನ ಲ್ಯಾಪ್ಟಾಪಿನಲ್ಲಿ 20 ಸಾವಿರಕ್ಕೂ ಇಂಥವೇ ಅಸಹ್ಯಕರ ಚಿತ್ರಗಳು ಮತ್ತು ವಿಡಿಯೋಗಳು ತುಂಬಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Britain's worst paedophile Richard Huckle has been arrested and jailed for child abuse. He faces 22 life sentences after pleading guilty in 71 cases. He had visited children orphanage in Bengaluru and stayed here for 2 days. Fortunately he did not abuse them.
Please Wait while comments are loading...