ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಹಂತ 1: ಉಪಯೋಗ ಪಡೆಯಲಿದ್ದಾರೆ 5 ಲಕ್ಷ ಜನ!

|
Google Oneindia Kannada News

ಬೆಂಗಳೂರು, ಜೂನ್ 9: ಅಂತೂ ಇಂತೂ ನಮ್ಮ ಮೆಟ್ರೊ ಮೊದಲ ಹಂತ ಸಂಪೂರ್ಣ ಮುಕ್ತಾಯಗೊಂಡು, ಇದೇ ಜೂನ್ 17 ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಜೂನ್ 17 ರಂದು ಸಂಜೆ 6 ಗಂಟೆಗೆ ವಿಧಾನ ಸೌಧದ ಆವರಣದಲ್ಲೇ ವಿಡಿಯೋ ಲಿಂಕ್ ಮೂಲಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಬಿಎಂಆರ್ ಸಿಎಲ್(ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿ.) ತಿಳಿಸಿದೆ.

ಉತ್ತರ- ದಕ್ಷಿಣ ಕಾರಿಡಾರ್ ನ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಸುದ್ದಿ ಬೆಂಗಳೂರಿನಗರಲ್ಲಿ ನಿರಾಳತೆಯನ್ನುಂಟು ಮಾಡಿರುವುದು ಸುಳ್ಳಲ್ಲ. ಮೆಟ್ರೋ ಸಂಚಾರದಿಂದಾಗಿ ಈ ಭಾಗದ ಟ್ರಾಫಿಕ್ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

[ಕೊನೆಗೂ ಸಿಕ್ತು ಮುಹೂರ್ತ: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆ ಜೂ.17ಕ್ಕೆ]

ನಾಗಸಂದ್ರದಿಂದ ಯಲಚೆನಹಳ್ಳಿ ವರೆಗಿನ 24.2 ಕಿ.ಮೀ. ಗ್ರೀನ್ ಲೈನ್ ಮೆಟ್ರೋ ಉಪಯೋಗ ಪಡೆಯುವ ಜನರು ಸರಿ ಸುಮಾರು 2.5 ಲಕ್ಷ ಜನ! ಅಂದರೆ ಪರ್ಪಲ್ ಮತ್ತು ಗ್ರೀನ್ ಲೈನ್ ಉಪಯೋಗ ಪಡೆಯುವ ಒಟ್ಟು ಪ್ರಯಾಣಿಕರು ಸುಮಾರು 5 ಲಕ್ಷ!

ಮೇ 29 ರಿಂದ ಜೂನ್ 1 ರವರೆಗೆ ನೂತನ ಮಾರ್ಗ ಪರಿಶೀಲಿಸಿದ್ದ ರೈಲ್ವೇ ಸುರಕ್ಷತಾ ಆಯುಕ್ತ ಕೆ.ಎ.ಮನೋಹರ್ ಜೂನ್ 8 ರಂದು ಸುರಕ್ಷತಾ ಪ್ರಮಾಣ ಪತ್ರ ನೀಡಿದರು. ವರದಿಯಲ್ಲಿ ಸಣ್ಣ ಪುಟ್ಟ ಬದಲಾವಣೆಯ ಕುರಿತು ಸಲಹೆಗಳಿದ್ದು, ಅದನ್ನು ಉದ್ಘಾತನೆಗೂ ಮುನ್ನ ಸರಿಪಡಿಸುವಂತೆ ಬಿಎಂಆರ್ ಸಿಎಲ್ ಗೆ ತಿಳಿಸಲಾಗಿದೆ.

ಮಾರ್ಗಗಳ ವಿವರ

ಮಾರ್ಗಗಳ ವಿವರ

ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ (12 ಕಿ.ಮೀ.), ಸಂಪಿಗೆ ರಸ್ತೆ ನ್ಯಾಶನಲ್ ಕಾಲೇಜು ಸುರಂಗ ಮಾರ್ಗ (3.27 ಕಿ.ಮೀ.), ನ್ಯಾಶನಲ್ ಕಾಲೇಜು-ಯಲಚೇನಹಳ್ಳಿಯ ಎತ್ತರದ ಮಾರ್ಗ(8.68 ಕಿ.ಮೀ.)ಗಳು ಲೋಕಾರ್ಪಣೆಗೊಳ್ಳಲಿವೆ.

ಒಟ್ಟು ಮೆಟ್ರೋ ರೈಲುಗಳು

ಒಟ್ಟು ಮೆಟ್ರೋ ರೈಲುಗಳು

ಈ ಭಾಗದಲ್ಲಿ ನಿಗದಿಯಾದ ಒಟ್ಟು ಮೆಟ್ರೋ ರೈಲುಗಳು 29. ಪ್ರತಿ ಆರು ನಿಮಿಷಕ್ಕೊಂದರಂತೆ ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚು ಹೊತ್ತು ಕಾಯುವ ಅಗತ್ಯವೂ ಬರುವುದಿಲ್ಲ.

[ನಮ್ಮ ಮೆಟ್ರೋ : ಶೀಘ್ರದಲ್ಲೇ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ]

ಬೆಳಿಗ್ಗೆ ಆರರಿಂದಲೇ ಶುರು

ಬೆಳಿಗ್ಗೆ ಆರರಿಂದಲೇ ಶುರು

ಈ ಮಾರ್ಗದಲ್ಲಿ ಬೆಳಗ್ಗೆ 6 ರಿಂದಲೇ ರೈಲು ಸಂಚಾರ ಆರಂಭವಾಗಲಿದ್ದು, ರಾತ್ರಿ 11 ಗಂಟೆಯವರೆಗೂ ಮೆಟ್ರೋ ಸಂಚಾರವಿರಲಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

[ಬೆಂಗಳೂರು ಉತ್ತರ-ದಕ್ಷಿಣ: ನಮ್ಮ ಮೆಟ್ರೋ 45 ನಿಮಿಷದ ಪ್ರಯಾಣ]

2006 ರಲ್ಲೇ ಸಿಕ್ಕಿತ್ತು ಒಪ್ಪಿಗೆ

2006 ರಲ್ಲೇ ಸಿಕ್ಕಿತ್ತು ಒಪ್ಪಿಗೆ

2006 ರಲ್ಲೇ ಕೇಂದ್ರ ಸರ್ಕಾರ, 33 ಕಿ.ಮೀ.ಉದ್ದದ ಮೊದಲನೇ ಹಂತದ ನಮ್ಮ ಮೆಟ್ರೊ ಯೋಜನೆಗೆ ಒಪ್ಪಿಗೆ ನೀಡಿತ್ತು. ಈ 33 ಕಿ.ಮೀ.ಮಾರ್ಗದೊಂದಿಗೆ 2010 ರಲ್ಲಿ 9.3 ಕಿ.ಮೀ.ಮಾರ್ಗವನ್ನೂ ಹೆಚ್ಚುವರಿಯಾಗಿ ಸೇರಿಸಿ, ಒಟ್ಟು 43.3 (ಗ್ರೀನ್ ಮತ್ತು ಪರ್ಪಲ್ ಲೈನ್ ಸೇರಿ) ಕಿ.ಮೀ. ಮಾರ್ಗವನ್ನು 2013 ರಲ್ಲೇ ಸಂಪೂರ್ಣ ಮುಗಿಸುವ ಯೋಚನೆಯಿತ್ತು. ಆದರೆ ಕಾಮಗಾರಿ ವಿಳಂಬವಾಗಿ ಇದೀಗ ಅಂದರೆ ಡೇಡ್ ಲೈನ್ ಮುಗಿದ ಬರೋಬ್ಬರಿ ನಾಲ್ಕು ವರ್ಷದ ನಂತರ ಮೆಟ್ರೋ ಲೋಕಾರ್ಪಣೆಗೊಳ್ಳುತ್ತಿದೆ.

ಒಟ್ಟು ವೆಚ್ಚ ಎಷ್ಟು?

ಒಟ್ಟು ವೆಚ್ಚ ಎಷ್ಟು?

ಮೆಟ್ರೋ ಮೊದಲ ಹಂತಕ್ಕೆ ಖರ್ಚು ಮಾಡಲು ಉದ್ದೇಶಿಸಿದ್ದ ಅಂದಾಜು ಮೊತ್ತ, 8,158 ಕೋಟಿ ರೂ. ಆದರೆ ಕಾಮಗಾರಿ ವಿಳಂಬವಾಗಿ, ಮೊದಲ ಹಂತ ಸಂಪೂರ್ಣ ಮುಗಿಯುವ ಹೊತ್ತಿಗೆ ವೆಚ್ಚವಾದ ಒಟ್ಟು ಮೊತ್ತ ಬರೋಬ್ಬರಿ 13, 742 ಕೋಟಿ ರೂ.!

[ಗಮನಿಸಿ ಈ ಮಾರ್ಗದಲ್ಲಿ ಮೇ 29ರಿಂದ 31ರವರೆಗೆ ಮೆಟ್ರೊ ರೈಲು ಸಂಚಾರ ಇಲ್ಲ]

English summary
The most awaited Bengaluru Namma metro greenline, Sampige road to Yalachenahalli project will be inaugurating by president of India, Pranab Mukherjee on June 17th. More than 5 lakh people will be taking benifit of both purple and greenline metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X