Get Updates
Get notified of breaking news, exclusive insights, and must-see stories!

ಕೊನೆಗೂ ಸಿಕ್ತು ಮುಹೂರ್ತ: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆ ಜೂ.17ಕ್ಕೆ

ಬೆಂಗಳೂರು, ಜೂನ್ 8: ಬೆಂಗಳೂರಿಗರ ಬಹುನಿರೀಕ್ಷಿತ ನಮ್ಮ ಮೆಟ್ರೊ ಮೊದಲ ಹಂತದ ಅಂತಿಮ ಘಟ್ಟವಾದ ಯಲಚೇನಹಳ್ಳಿ-ಸಂಪಿಗೆ ರಸ್ತೆ ನಡುವಿನ ಗ್ರೀನ್ ಲೈನ್ ಉದ್ಘಾಟನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ.

ವಿಳಂಬದಿಂದಲೇ ಹೆಚ್ಚು ಸುದ್ದಿಯಾದಿದ್ದ ನಮ್ಮ ಮೆಟ್ರೋದ ಈ ಮಾರ್ಗ ಜೂನ್ 17 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಚೇರಿ ಮೂಲಗಳು ತಿಳಿಸಿವೆ.

Bengaluru Namma Metro Green line will be opend to public on June 17th

ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಇದೇ ಜೂನ್ 17-18 ರಂದು ರಾಜ್ಯ ಪ್ರವಾಸ ಕೈಗೊಳ್ಳಲಿರುವುದರಿಂದ ಅವರಿಂದಲೇ ಇದನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ.

ಜೂನ್ 17 ರಂದು ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಳ್ಳಲಿರುವ ಬೆಂಗಳೂರು ಉತ್ತರ-ದಕ್ಷಿಣವನ್ನು ಬೆಸೆಯುವ ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮೆಟ್ರೋ ಉಪಯೋಗವನ್ನು, ಈಗಾಗಲೇ ಪರ್ಪಲ್ ಲೈನ್(ಮೈಸೂರು ರಸ್ತೆಯಿಂದ-ಬೈಯಪ್ಪನಹಳ್ಳಿವರೆಗೆ) ಮೆಟ್ರೊ ಉಪಯೋಗ ಪಡೆಯುತ್ತಿರುವ ಜನರಿಗಿಂತ ಮೂರು ಪಟ್ಟು ಹೆಚ್ಚು ಜನ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+