ಕರ್ನಾಟಕ : ಕರಡು ಮತದಾರರ ಪಟ್ಟಿ ಬಿಡುಗಡೆ, ಮುಖ್ಯಾಂಶಗಳು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ಕಳೆದ ಬಾರಿಗಿಂತ 72 ಲಕ್ಷಕ್ಕೂ ಹೆಚ್ಚು ಮಂದಿ 2018ರ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರ ಪಡೆದುಕೊಂಡಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು 72 ಲಕ್ಷಕ್ಕೂ ಅಧಿಕ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಅವಕಾಶ

2013 ರಲ್ಲಿ ರಾಜ್ಯದಲ್ಲಿ 4,18,38,541 ಇತ್ತು, ಅದು ಈಗ 4,90,06,901 ಕ್ಕೆ ಹೆಚ್ಚಿದೆ. ಅಲ್ಲದೆ, ಮತಗಟ್ಟೆಗಳ ಸಂಖ್ಯೆಯೂ 2,433 ಹೆಚ್ಚಳವಾಗಲಿದೆ, ಬೆಂಗಳೂರಿನಲ್ಲಿ 574 ಮತಗಟ್ಟೆಗಳು ಹೆಚ್ಚಲಿವೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

72 lakh new people added to Karnataka voters list

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಿಚ್ಚಿಸುವವರು ಇದೇ ಡಿಸೆಂಬರ್ 29 ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ತೆಗೆದು ಹಾಕಲು ಮತ್ತು ತಿದ್ದುಪಡಿ ಮಾಡಬಹುದು. ಫೆಬ್ರುವರಿ 15 ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಮೇ ಮೊದಲ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ?

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಮತದಾರರನ್ನು 5,58,670 ಹೊಂದಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ 1,60,199 ಮತದಾರರನ್ನು ಹೊಂದಿದೆ. ಉಳಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಮತದಾರರ ಸಂಖ್ಯೆ 2.18 ಲಕ್ಷ ಇದೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶ ಹೇಳುತ್ತಿದೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣೆವರೆಗೂ ಅವಕಾಶ ಇದೆ. ಇದರಿಂದ ಹೊಸ ಮತದಾರರ ಸಂಖ್ಯೆ 10 ರಿಂದ 15 ಲಕ್ಷ ಹೆಚ್ಚುವ ನಿರೀಕ್ಷೆ ಇದೆ ಎಂದು ಸಂಜೀವ್ ಕುಮಾರ್‌ ಅವರ ಅಭಿಪ್ರಾಯ.

ಕರಡು ಮತದಾರರ ಪಟ್ಟಿ ಈಗಾಗಲೇ ಚುನಾವಣಾ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಕರಡು ಪಟ್ಟಿಯನ್ನು ರಾಜಕೀಯ ಮುಖಂಡರುಗಳಿಗೆ ತಲುಪಿಸಿದ್ದಾರೆ ಎಂದು ಅವರು ಹೇಳಿದರು.

ಚುನಾವಣೆಗೆ ವಿದ್ಯುನ್ಮಾನ ಮತಯಂತ್ರವನ್ನೇ ಬಳಸುವುದಾಗಿ ಹೇಳಿದ ಅವರು, ಮೇ 28 ಹಾಲಿ ವಿಧಾನಸಭೆಯ ಅವಧಿ ಮುಗಿಯುತ್ತದೆ ಚುನಾವಣೆ ಎಂದು ನಡೆಸಬೇಕು ಎಂಬುದನ್ನು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sanjeev Kumar, Chief Election Commissioner of Karnataka released draft voters list for Assembly election 2018. Highlights - 72 lakh new voters, 2,433 new polling booths. 29 December, last date for voters to add their names on to the list.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ