ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಹಂತಕರ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ: ರಾಮಲಿಂಗಾ ರೆಡ್ಡಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ಪತ್ರಕರ್ತೆ ಗೌರಿ ಲಂಕೇಶ್ ರನ್ನು ಹತ್ಯೆ ಮಾಡಿದ ಕೊಲೆಗಾರ(ನ)ರ ಕುರಿತು ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಕರ್ನಾಟಕ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಂದು(ಸೆ.8) ಘೋಷಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ನಂತರ, ಮತ್ತೋರ್ವ ಪತ್ರಕರ್ತೆಗೆ ಜೀವ ಬೆದರಿಕೆ ಕರೆಗೌರಿ ಲಂಕೇಶ್ ಹತ್ಯೆಯ ನಂತರ, ಮತ್ತೋರ್ವ ಪತ್ರಕರ್ತೆಗೆ ಜೀವ ಬೆದರಿಕೆ ಕರೆ

ವಿಕಾಸ ಸೌಧದಲ್ಲಿ ನಾಳೆ(ಸೆ.9) ರಂದು ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸರ್ಕಾರ ಗೌರಿ ಲಂಕೇಶ್ ಹಂತಕರ ಬಂಧನದ ಕುರಿತು ಚರ್ಚೆ ನಡೆಸಲಿದೆ. ಗೌರಿ ಹಂತಕರ ಕುರಿತು ಯಾವುದೇ ಮಾಹಿತಿ ದೊರಕಿದಲ್ಲಿ 09480800202 ಅಥವಾ [email protected] ಇಮೇಲ್ ಗೆ ಮಾಹಿತಿ ನೀಡುವಂತೆ ಬೆಂಗಳೂರು ಸಿಟಿ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ.

ಗೌರಿ ಹತ್ಯೆಯ ಮಾಹಿತಿಗಳಿದ್ದರೆ ಹಂಚಿಕೊಳ್ಳಿ, ಎಸ್ಐಟಿಯಿಂದ ಆಹ್ವಾನಗೌರಿ ಹತ್ಯೆಯ ಮಾಹಿತಿಗಳಿದ್ದರೆ ಹಂಚಿಕೊಳ್ಳಿ, ಎಸ್ಐಟಿಯಿಂದ ಆಹ್ವಾನ

10 lakh reward for the person who will give information about Gauri Lankesh's killers.

ಸೆ.5 ರಂದು ರಾತ್ರಿ 8 ಗಂಟೆಗೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ರಾಜರಾಜೇಶ್ವರಿ ನಗರದಲ್ಲಿರುವ ಅವರ ಮನೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಲಂಕೇಶ್ ಪತ್ರಿಕೆಯ ಸಂಪಾದಕಿಯಾಗಿದ್ದ ದಿಟ್ಟ ಪತ್ರಕರ್ತೆ ಗೌರಿ ಅವರ ಹತ್ಯೆಯನ್ನು ಇಡೀ ರಾಜ್ಯದ ಜನತೆಯೂ ಖಂಡಿಸಿತ್ತು.

English summary
Karnataka home minister Ramalinga Reddy announces 10 lakh reward for the person who will give information about Gauri Lankesh's killers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X