• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಅಬಕಾರಿ ಕಚೇರಿಯಲ್ಲಿದ್ದ ಮದ್ಯ ಕದ್ದ ಕಳ್ಳರು

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಎಪ್ರಿಲ್ 01: ಕೊರೊನಾ ವೈರಸ್ ತಡೆಯುವಿಕೆಗಾಗಿ ಕಳೆದ ಒಂದು ವಾರದಿಂದ ಭಾರತ್ ಸಂಪೂರ್ಣ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಎಲ್ಲೂ ಮದ್ಯ ಸಿಗುತ್ತಿಲ್ಲ.

ಆದರೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರಿಂದ ವಶಪಡಿಕೊಂಡು ಅಬಕಾರಿ ಇಲಾಖೆಯ ಕಚೇರಿ ಇಟ್ಟಿರುವ ಸಾರಾಯಿಯನ್ನೇ ಮದ್ಯ ವ್ಯಸನಿಗಳು ಕದ್ದು ಪರಾರಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದಲ್ಲಿ ನಡೆದಿದೆ.

ಅಕ್ರಮ ಮಾರಾಟ ಮಾಡುತ್ತಿದ್ದ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು, ಕಚೇರಿಯಲ್ಲಿ ತಂದಿಟ್ಟಿದ್ದರು. ಇದನ್ನು ನೋಡಿದ್ದ ಕಳ್ಳರು ಮದ್ಯದ ಬಾಟಲ್ ಗಳ ಬಾಕ್ಸ್ ಗಳನ್ನು ದೋಚಿದ್ದಾರೆ.

ಹಿಂದಿನ ಬಾಗಿಲಿನಿಂದ ಬಂದು ಛಾವಣಿಗೆ ಅಳವಡಿಸಿದ್ದ ಹೆಂಚುಗಳನ್ನು ತೆಗೆದು ಒಳನುಸುಳಿ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಜಿಲ್ಲೆಯ ಅಬಕಾರಿ ಹಿರಿಯ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

English summary
Liquor had been stolen from the office of the Excise Department, This incident happened in Siruguppa city, Ballary district,.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X