ಬಳ್ಳಾರಿ ಲೋಕಸಭಾ ಕ್ಷೇತ್ರ; ಮತದಾರರು, ವಿಧಾನಸಭಾ ಕ್ಷೇತ್ರಗಳು

ಬಳ್ಳಾರಿ, ಮಾರ್ಚ್ 21: ಬಳ್ಳಾರಿ ಜಿಲ್ಲಾಡಳಿತ ಲೋಕಸಭೆ ಚುನಾವಣೆ 2024ಕ್ಕೆ ಸಿದ್ಧತೆ ಪೂರ್ಣಗೊಳಿಸಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದೆ. ಬಳ್ಳಾರಿ (ಪರಿಶಿಷ್ಟ ಪಂಗಡ) ಲೋಕಸಭೆ ಕ್ಷೇತ್ರದ ಚುನಾವಣೆಯು ಎರಡನೇಯ ಹಂತದಲ್ಲಿ ಮೇ 7ರಂದು ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಚುನಾವಣೆ ಕುರಿತು ಮಾಹಿತಿ ನೀಡಿದ್ದಾರೆ. ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

Lok Sabha Election 2024 Ballari Seat Voters And Assembly Seat

ಚುನಾವಣಾ ವೇಳಾಪಟ್ಟಿಯಂತೆ ಏಪ್ರಿಲ್ 12ರ ಶುಕ್ರವಾರ ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆ ದಿನ. ಏಪ್ರಿಲ್ 20ರ ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೇ 7ರ ಮಂಗಳವಾರ ಮತದಾನ ನಡೆಯಲಿದೆ.

8 ವಿಧಾನಸಭಾ ಕ್ಷೇತ್ರಗಳು: ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ಮತಕ್ಷೇತ್ರಗಳಿವೆ. ಇವುಗಳಲ್ಲಿ ಪರಿಶಿಷ್ಟ ಪಂಗಡ ಮೀಸಲು ಕಂಪ್ಲಿ, ಬಳ್ಳಾರಿ, ಸಂಡೂರು ಹಾಗೂ ಕೂಡ್ಲಿಗಿ ಕ್ಷೇತ್ರಗಳಿವೆ. ಪರಿಶಿಷ್ಟ ಜಾತಿ ಮೀಸಲು ಹಡಗಲಿ, ಹಗರಿಬೊಮ್ಮನಹಳ್ಳಿ ಕ್ಷೇತ್ರಗಳು. ಸಾಮಾನ್ಯ ಮೀಸಲು ಮತಕ್ಷೇತ್ರಗಳು ವಿಜಯನಗರ ಹಾಗೂ ಬಳ್ಳಾರಿ ನಗರ ಕ್ಷೇತ್ರ. ಬಳ್ಳಾರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 18,65,341 ಮತದಾರರು ಇದ್ದಾರೆ. ಇವರಲ್ಲಿ 920022 ಪುರುಷ ಮತದಾರರು, 945053 ಮಹಿಳೆ ಮತದಾರರು ಹಾಗೂ 266 ಇತರೆ ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ.

ಹಡಗಲಿ 98232 ಪುರುಷ ಮತದಾರರು, 96714 ಮಹಿಳೆ ಮತದಾರರು, 13 ಇತರೆ, ಒಟ್ಟು 194959. ಹಗರಿಬೊಮ್ಮನಹಳ್ಳಿ 116933 ಪುರುಷ ಮತದಾರರು, 118592 ಮಹಿಳೆ ಮತದಾರರು, 22 ಇತರೆ, ಒಟ್ಟು 235547. ವಿಜಯನಗರ 124655 ಪುರುಷ, 132416 ಮಹಿಳೆ, 77 ಇತರೆ, ಒಟ್ಟು 257148 ಮತದಾರರು. ಕಂಪ್ಲಿ 109490 ಪುರುಷ, 112295 ಮಹಿಳೆ, 35 ಇತರೆ, ಒಟ್ಟು 221820 ಮತದಾರರು. ಬಳ್ಳಾರಿ 120046 ಪುರುಷ, 127417 ಮಹಿಳೆ, 50 ಇತರೆ, ಒಟ್ಟು 247513 ಮತದಾರರು. ಬಳ್ಳಾರಿ ನಗರ 130315 ಪುರುಷ, 139045 ಮಹಿಳೆ, 33 ಇತರೆ, ಒಟ್ಟು 269393 ಮತದಾರರು. ಸಂಡೂರು 114928 ಪುರುಷ, 115309 ಮಹಿಳೆ, 25 ಇತರೆ, ಒಟ್ಟು 230262 ಮತದಾರರು. ಕೂಡ್ಲಿಗಿ 105423 ಪುರುಷ, 103265 ಮಹಿಳೆ, 11 ಇತರೆ, ಒಟ್ಟು 208699 ಮತದಾರರು.

ಲೋಕಸಭಾ ಕ್ಷೇತ್ರದ 8 ಕ್ಷೇತ್ರದಲ್ಲಿ 53,169 ಯುವ ಮತದಾರರು, 24,841 ವಿಶೇಷಚೇತನ ಮತದಾರರು ಮತ್ತು 13,285 ಜನ 85 ವರ್ಷ ಮೇಲ್ಪಟ್ಟ ವಯಸ್ಕ ಮತದಾರರರಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. 167 ಸೆಕ್ಟರ್ ಅಧಿಕಾರಿಗಳು, 26 ಎಫ್‍ಎಸ್‍ಟಿ ತಂಡಗಳು, 30 ಎಸ್‍ಎಸ್‍ಟಿ ತಂಡಗಳು, 08 ವಿವಿಟಿ ತಂಡಗಳು, 18 ವಿಎಸ್‍ಟಿ ತಂಡಗಳು, 10 ಚುನಾವಣೆ ವೆಚ್ಚ ವೀಕ್ಷಕರು, 8 ಅಕೌಂಟಿಂಗ್ ತಂಡಗಳನ್ನು ರಚಿಸಲಾಗಿದೆ.

ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 35 (ಬಳ್ಳಾರಿ ಜಿಲ್ಲೆ 24 ಮತ್ತು ವಿಜಯನಗರ ಜಿಲ್ಲೆ 11) ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯೊಳಗೆ 7, ಅಂತರ್‌ ಜಿಲ್ಲಾ 4, ಅಂತರ್‌ ರಾಜ್ಯ ಗಡಿಭಾಗದಲ್ಲಿ 13 ಚೆಕ್‍ಪೋಸ್ಟ್. ಪ್ರತಿ ಚೆಕ್‍ಪೋಸ್ಟ್‌ಗಳಲ್ಲಿ 3 ಎಸ್‍ಎಸ್‍ಟಿ ತಂಡದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಎಫ್‍ಎಸ್‍ಟಿ ತಂಡಗಳು ಇರಲಿವೆ. ಈಗಾಗಲೇ ತಂಡಗಳು ಕಾರ್ಯನಿರ್ವಹಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+