ಬಳ್ಳಾರಿ-ಸೊಲ್ಲಾಪುರ ನಾನ್ ಎಸಿ ಸ್ಲೀಪರ್ ಬಸ್; ವೇಳಾಪಟ್ಟಿ
ಬಳ್ಳಾರಿ, ಮಾರ್ಚ್ 17: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಳ್ಳಾರಿ ವಿಭಾಗದ ಒಂದನೇ ಘಟಕ ಬಳ್ಳಾರಿ-ಸೊಲ್ಲಾಪುರ (ಮಹಾರಾಷ್ಟ್ರ) ನಡುವೆ ನೂತನ ನಾನ್ ಎಸಿ ಸ್ಲೀಪರ್ ಅಂತರರಾಜ್ಯ ಬಸ್ ಸೇವೆ ಪ್ರಾರಂಭಿಸಿದೆ.
ಈ ಬಸ್ ಸೇವೆ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಮಾಹಿತಿ ನೀಡಿದ್ದಾರೆ. ಮಾರ್ಚ್ 15ರಿಂದಲೇ ಬಸ್ ಸಂಚಾರ ಆರಂಭಿಸಿದೆ.

ವೇಳಾಪಟ್ಟಿ: ಬಳ್ಳಾರಿ-ಸೊಲ್ಲಾಪುರ ಬಸ್ ಹೊಸಪೇಟೆ, ವಿಜಯಪುರ ಮಾರ್ಗದ ಮೂಲಕ ಸಂಚರಿಸಲಿದೆ. ಬಳ್ಳಾರಿಯಿಂದ ರಾತ್ರಿ 9.30ಕ್ಕೆ ಹೊರಡಲಿರುವ ಬಸ್ ಹೊಸಪೇಟೆಗೆ ರಾತ್ರಿ 11ಕ್ಕೆ ಮತ್ತು ಸೊಲ್ಲಾಪುರಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ.
ಸೊಲ್ಲಾಪುರದಿಂದ ರಾತ್ರಿ 8.45ಕ್ಕೆ ಹೊರಡುವ ಬಸ್, ಹೊಸಪೇಟೆಗೆ ಬೆಳಗ್ಗೆ 3.30ಕ್ಕೆ ಮತ್ತು ಬಳ್ಳಾರಿಗೆ ಬೆಳಗ್ಗೆ 4.45ಕ್ಕೆ ಆಗಮಿಸಲಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ-ಹೈದರಾಬಾದ್ ನಡುವೆ ಬಸ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿಯ ಸಂಡೂರು ಘಟಕ ಈಗಾಗಲೇ ಸಂಡೂರು-ಹೈದರಾಬಾದ್ (ವಯಾ ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗದಲ್ಲಿ) ಎಸಿ ಸ್ಲೀಪರ್ ಬಸ್ ಓಡಿಸುತ್ತಿದೆ.
ಈ ಬಸ್ ಸಂಡೂರಿನಿಂದ ರಾತ್ರಿ 7ಕ್ಕೆ ಹೊರಟು, ಬಳ್ಳಾರಿಗೆ ರಾತ್ರಿ 10ಕ್ಕೆ ಆಗಮಿಸಿ (ವಯಾ ಆಲೂರು, ಕರ್ನೂಲ್ ಮಾರ್ಗವಾಗಿ) ಹೈದ್ರಾಬಾದ್‌ಗೆ ಬೆಳಗ್ಗೆ 6.10ಕ್ಕೆ ತಲುಪಲಿದೆ. ಪ್ರಯಾಣ ದರ ಸಂಡೂರಿನಿಂದ ರೂ.1,290 ಹಾಗೂ ಬಳ್ಳಾರಿಯಿಂದ ರೂ.1,120 ಎಂದು ನಿಗದಿ ಮಾಡಲಾಗಿದೆ.
ಹೈದರಾಬಾದ್‌ನಿಂದ ಬಸ್ ರಾತ್ರಿ 9.46ಕ್ಕೆ ಹೊರಟು, ಬಳ್ಳಾರಿಗೆ 6.15ಕ್ಕೆ ತಲುಪುತ್ತದೆ (ಪ್ರಯಾಣ ದರ ರೂ.1,120) ಹಾಗೂ ಸಂಡೂರಿಗೆ ಬೆಳಗ್ಗೆ 8ಕ್ಕೆ ತಲುಪಲಿದೆ (ಪ್ರಯಾಣ ದರ ರೂ.1,290). ಈ ಬಸ್‌ನಲ್ಲಿ ಮುಂಗಡ ಆಸನಗಳನ್ನು ಕಾಯ್ದಿರಿಸಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಕೊಪ್ಪಳದಿಂದಲೂ ನಾನ್ ಎಸಿ ಬಸ್: ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಪ್ರಯಾಣಿಕರ ಬೇಡಿಕೆಯಂತೆ ನಿಗಮದಿಂದ ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದಲ್ಲಿ ನೂತನ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಪ್ರಾರಂಭಿಸಿದೆ.
ನಾನ್ ಎಸಿ ಸ್ಲೀಪರ್ ಬಸ್ ಕೊಪ್ಪಳದಿಂದ 20.30 ಗಂಟೆಗೆ ಹಾಗೂ ಗಂಗಾವತಿಯಿಂದ 4.15 ಮತ್ತು 21.45ಕ್ಕೆ ಹೊರಡಲಿದ್ದು, ಕಲಬುರಗಿಗೆ 3.45ಕ್ಕೆ & 21.30ಕ್ಕೆ, ಬೀದರ್‌ಗೆ 6.45ಕ್ಕೆ ತಲುಪಲಿದೆ. ಕಲಬುರಗಿಯಿಂದ 22 ಮತ್ತು 4 ಗಂಟೆಗೆ ಹಾಗೂ ಬೀದರ್‌ದಿಂದ 18.30ಕ್ಕೆ ಹೊರಡಲಿರುವ ವಾಹನಗಳು ಗಂಗಾವತಿಗೆ 4 ಮತ್ತು 21.30ಕ್ಕೆ, ಕೊಪ್ಪಳಕ್ಕೆ 5.15ಕ್ಕೆ ತಲುಪಲಿದೆ.
ಪ್ರಯಾಣಿಕರು ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದ ಸಾರಿಗೆಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಲು www.ksrtc.in ವೆಬ್‌ಸೈಟ್ ಅಥವ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ವಿಚಾರಿಸಿ.












Click it and Unblock the Notifications