ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: ನಡುರಸ್ತೆಯಲ್ಲಿ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿ

|
Google Oneindia Kannada News

ಬಾಗಲಕೋಟೆ, ಮೇ 15: ಬಾಗಲಕೋಟೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳಾ ನ್ಯಾಯವಾದಿಯನ್ನು ಹಾಡುಹಗಲೇ ವ್ಯಕ್ತಿಯೊಬ್ಬ ಮನಬಂದಂತೆ ಥಳಿಸಿದ ವಿಡಿಯೋ ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ವಿಡಿಯೋವನ್ನು ಶಶಿಕಲಾ ಡಿ.ವಿ ಎಂಬುವವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡ ಮಹಿಳೆ ನ್ಯಾಯವಾದಿಯಾಗಿದ್ದು ಅವರ ಹೆಸರು ಸಂಗೀತಾ ಶಿಕ್ಕೇರಿ ಎಂದು ಬರೆದಿದ್ದಾರೆ. ಜೊತೆಗೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಮಾಂತೇಶ್ ಚೊಳಚಗುಡ್ಡ ಎಂದು ಹೇಳಿದ್ದಾರೆ.

'ಮಧ್ಯೆ ರಾತ್ರಿಯಲ್ಲಿ ಒಂಟಿ ಮಹಿಳೆ ಸುರಕ್ಷಿತವಾಗಿ ಓಡಾಡಿದರೆ ಆಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ' ಎಂದು ಮಹತ್ಮಾ ಗಾಂಧಿಜಿ ಅವರು ಹೇಳಿದ್ದಾರೆ. ಆದರೆ ಇಲ್ಲಿ ಬೆಳಗ್ಗೆ ನಡು ರಸ್ತೆಯಲ್ಲಿ ಅಷ್ಟು ಜನಗಳ ಮದ್ಯೆ ಒಂದು ಹೆಣ್ಣನ್ನು ಒಬ್ಬ ಕ್ರೂರಿ ಈ ರೀತಿ ಕಾಲಿನಲ್ಲಿ ಒದ್ದರೂ ಅಷ್ಟು ಜನ ಸುಮ್ಮನೆ ನೋಡುತ್ತಾ ತಮಾಷೆ ನೋಡ್ತಾಯಿದ್ದಾರೆ. ಆ ಹೆಣ್ಣಿನ ರಕ್ಷಣೆಗೆ ಯಾರೂ ಮುಂದಾಗಿಲ್ಲ ಇದೇನಾ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಸಿಗುವ ಮರ್ಯಾದೆ.. ಗೌರವ.. ರಕ್ಷಣೆ... 'ಎಂದು ಪ್ರಶ್ನೆ ಮಾಡಿದ್ದಾರೆ.

Breaking; ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರಾಳಿ ಘೋಷಿಸಿದ ಎಚ್‌ಡಿಕೆ Breaking; ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರಾಳಿ ಘೋಷಿಸಿದ ಎಚ್‌ಡಿಕೆ

ಇದರಲ್ಲಿ ಹೆಣ್ಣಿನ ತಪ್ಪು ಇದ್ದರೆ ಕಾನೂನು ಕೈಗೆ ನೀಡಲಿ. ಅದನ್ನು ಬಿಟ್ಟು ನಡುರಸ್ತೆಯಲ್ಲಿ ಹಲ್ಲೆ ಮಾಡಲು ಅಧಿಕಾರ ಇಲ್ಲ. ಇಂತಹ ನೀಚ ಸಂಸ್ಕೃತಿಯನ್ನು ಹೊಂದಿರುವವರಿಗೆ ಯಾವುದೇ ಜಾತಿ ಆದರೂ ಪರವಾಗಿಲ್ಲ ಶಿಕ್ಷೆ ಆಗಲೇಬೇಕು ಎಂದಿದ್ದಾರೆ. ಯಾವುದೇ ಸಮುದಾಯದ ಹೆಣ್ಣಿನ ಮೇಲೆ ಇಂತಹ ಕೃತ್ಯಗಳು ನಡೆದರೆ ಪ್ರತಿಯೊಂದು ವರ್ಗದ ಮಹಿಳೆಯರು ಹೋರಾಟ ಮಾಡಬೇಕು ಎಂದಿದ್ದಾರೆ.

Bagalkot: Woman Lawyer Assaulted by a Man, Video Goes Viral

ಇದು ನಿಜ. ಯಾವುದೇ ಹೆಣ್ಣಿನ ಮೇಲೆ ಯಾರಿಗೇ ಆಗಲಿ ಕೈ ಮಾಡುವ ಅಧಿಕಾರ ಇಲ್ಲ. ಇದು ಗಂಡಸರ ವಿಚಾರಕ್ಕೂ ಅನ್ವಯವಾಗುತ್ತದೆ. ಯಾರೇ ತಪ್ಪು ಮಾಡಿರಲಿ ಅದಕ್ಕೆ ಶಿಕ್ಷೆ ನೀಡುವ ಅಧಿಕಾರ ಕಾನೂನಿಗೆ ಮಾತ್ರ ಇದೆ. ಅದನ್ನ ಯಾರೇ ಮೀರಿದರೂ ಪ್ರಶ್ನೆ ಮಾಡುವಂತ ಹಕ್ಕು ಎಲ್ಲರಿಗೂ ಇದೆ. ಕಾನೂನಿನ ಪ್ರಕಾರವಾಗದೇ ಇದ್ದರೂ ಒಬ್ಬ ಮನುಷ್ಯರಾಗಿ ನಾವು ಅದನ್ನು ತಡೆಯಲೇಬೇಕು. ಇಲ್ಲವಾದರೇ ಇಂದು ಬೀದಿಯಲ್ಲಿ ಹೊಡೆಯುವ ಜನ, ಕೊಲೆ ಮಾಡಲೂ ಹಿಂಜರಿಯೋದಿಲ್ಲ. ಇದೊಂದು ಮನುಕುಲವೇ ತಲೆ ತಗ್ಗಿಸುವಂತಹ ಅಮಾನವೀಯ ಕೃತ್ಯ.

Recommended Video

ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada

English summary
A woman lawyer Sangeetha shikkari reportedly assaulted by Mantesh Chulagudga in Bagalkot, video goes viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X