Get Updates
Get notified of breaking news, exclusive insights, and must-see stories!

Bagalkot lok sabha election: ಬಾಗಲಕೋಟೆ ಆಕಾಂಕ್ಷಿಗಳು, ಕ್ಷೇತ್ರದ ರಾಜಕೀಯ ಕಿರು ಪರಿಚಯ

ಬೆಂಗಳೂರು, ಮಾರ್ಚ್ 13: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಯಾರೊಬ್ಬರ ಹೆಸರು ಅಂತಿಮಗೊಳ್ಳದಿರುವುದು ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ. ಚಾಲುಕ್ಯರು ಆಡಳಿತ ಈ ಬಾಗಲಕೋಟೆಯು ಅನೇಕ ನಾಯಕರಿಗೆ ರಾಜಕೀಯ ಮರುಜನ್ಮ ನೀಡಿದ ಲೋಕಸಭಾ ಕ್ಷೇತ್ರವಾಗಿದೆ.

ವಿಶಿಷ್ಟವಾದ ಐತಿಹಾಸಿಕತೆ ಹೊಂದಿರುವ ಬಾಗಲಕೋಟೆಯು 18ನೇ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿದೆ. ಬಿಜೆಪಿಯ ಭದ್ರಕೋಟೆಯಲ್ಲಿ ಈ ಬಾರಿ ಚುನಾವಣೆ ಕಾವು ಹೆಚ್ಚಳ ಎನ್ನವುದಕ್ಕಿಂತ , ಆಕಾಂಕ್ಷಿಗಳ ನಿರೀಕ್ಷೆ ಹೆಚ್ಚಾಗಿದೆ ಎನ್ನಬಹುದು.

bagalkot-lok-sabha-elections-2024-analysis

ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಕೆಲವು ಕ್ಷೇತ್ರಗಳ ಹೆಸರು ಘೋಷಿಸಿತ್ತು. ಆದರೆ ಇದರಲ್ಲಿ ಬಾಗಲಕೋಟೆಗೆ ಮಾತ್ರ ಯಾರ ಹೆಸರನ್ನು ಅಂತಿಮಗೊಳಿಸಲಿಲ್ಲ. ಈ ಕ್ಷೇತ್ರದಲ್ಲಿ ಕಳೆದ ಐದು ವರ್ಷ ಬಿಜೆಪಿಯ ಹಾಲಿ ಸಂಸದ ಪಿಸಿ ಗದ್ದಿಗೌಡರ್ ಅವರು ಅಧಿಕಾರ ಅನುಭವಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಸತತ ಸೋಲು ಕಂಡ ವಿಪಕ್ಷವಾಗಿದೆ. ಬಿಜೆಪಿ ವಿರುದ್ಧ ಸ್ಪರ್ಧಿಸಿ 2019ರಲ್ಲಿ ವೀಣಾ ಕಾಶಪ್ಪನವರ್ ಸೋತಿದ್ದರು.

ಬಿಜೆಪಿಯ ಭದ್ರಕೋಟೆ: ಆಕಾಂಕ್ಷಿಗಳು

ಬಿಜೆಪಿಯಿಂದ ಪಿಸಿ ಗದ್ದಿಗೌಡರ್ ಅವರು ಸತತ ನಾಲ್ಕು ಬಾರಿ (2004-2024) ಹ್ಯಾಟ್ರಿಕ್ ಬಾರಿಸಿದ್ದಾರೆ. ಐದನೇ ಬಾರಿಯು ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರೊಂದಿಗೆ ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿಯವರು ಸಹ ದೆಹಲಿ ಮಟ್ಟದಲ್ಲಿ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ನಿವೃತ್ತ ಐಎಎಸ್ ಅಧಿಕಾರ ಪ್ರಕಾಶ ಪರಪ್ಪ ಅವರು ಸಹ ಬಾಗಲಕೋಟೆಯಲ್ಲಿ ನೆಲೆಸಿದ್ದು, ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ. ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಕಾಂಗ್ರೆಸ್ ಆಕಾಂಕ್ಷಿಗಳು

ಇತ್ತ ಕಾಂಗ್ರೆಸ್‌ ನಿಂದ ಸ್ಪರ್ಧಿಸಲು ಕಾಂಗ್ರೆಸ್ ಮಹಿಳಾ ಘಟಕದ ಉಪಾಧ್ಯಕ್ಷ ವೀಣಾ ಕಾಶಪ್ಪನವರ, ಮಾಜಿ ಸಚಿವ ಅಜಯಕುಮಾರ ಸರನಾಯಕ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಉಳಿದಂತೆ ಕೈ ಮುಖಂಡರಾದ ಪ್ರಕಾಶ ತಪಶೆಟ್ಟಿ, ಬಸವಪ್ರಭು ಸರನಾಡಗೌಡ, ಶಿವಕುಮಾರ ಮಲಘಾಣ, ವಿವೇಕ್ ಯಾವಗಲ್, ಶ್ರೀಶೈಲ ದಳವಾಯಿ ಅವರು ಸಹ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

bagalkot-lok-sabha-elections-2024-analysis

2019ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಪಿಸಿ ಗದ್ದಿಗೌಡರ್ ಅವರು 664,638 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ್ (4,96,451) ಅವರನ್ನು ಸೋಲಿಸಿದ್ದರು.

2019ರಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿಸಿ ಗದ್ದಿಗೌಡರ್ ಅವರು 5,71,548 ಮತ ಗಳಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ್ ಸರನಾಯಕ್ (4,54,988) ಅವರನ್ನು ಸೋಲಿಸಿದ್ದರು.

ಬಾಗಲಕೋಟೆ: 08 ವಿಧಾನಸಭಾ ಕ್ಷೇತ್ರಗಳು

ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 08 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ, 03ರಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಯಾರು ಯಾವ ಕ್ಷೇತ್ರದಲ್ಲಿ ಎಷ್ಟು ಮತಗಳಿಂದ ಗೆದ್ದರು ಎಂಬ ಮಾಹಿತಿ ಇಲ್ಲಿದೆ.

ಮುಧೋಳ ಕ್ಷೇತ್ರ (ಎಸ್‌ಸಿ) -ಆರ್‌ಬಿ ತಿಮ್ಮಾಪುರ (ಕಾಂಗ್ರೆಸ್‌- 77,298 ಮತಗಳು), ತೆರದಾಳ ಕ್ಷೇತ್ರ-ಸಿದ್ದು ಸವದಿ (ಬಿಜೆಪಿ- 76,628 ಮತ), ಜಮಖಂಡಿ- ಜಗದೀಶ್ ಗುಡಗುಂಟಿ (ಬಿಜೆಪಿ- 81,937 ಮತ), ಬಿಳಗಿ- ಜಿಟಿ ಪಾಟೀಲ್ (ಕಾಂಗ್ರೆಸ್‌- 95,652 ಮತಗಳು), ಬಾದಾಮಿ- ಭೀಮಸೇನ್ ಚಿಮ್ಮನಕಟ್ಟಿ (ಕಾಂಗ್ರೆಸ್‌- 65,845 ಮತಗಳು), ಬಾಗಲಕೋಟೆ- ಎಚ್‌ವೈ ಮೇಟಿ (ಕಾಂಗ್ರೆಸ್‌- 79,336 ಮತಗಳು), ಹುನಗುಂದ- ವಿಜಯಾನಂದ ಕಾಶಪ್ಪನವರ್ (ಕಾಂಗ್ರೆಸ್‌- 78,434 ಮತಗಳು) ಮತ್ತು ನಗರಗುಂದ- ಸಿಸಿ ಪಾಟೀಲ್ (ಬಿಜೆಪಿ- 72,835 ಮತ) ಅವರು ಗೆಲುವ ಸಾಧಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+