Power Cut in Bengaluru: ಜೂನ್ 23ರಂದು ಅನೇಕ ಸ್ಥಳಗಳಲ್ಲಿ 11ಗಂಟೆಗಳ ಕಾಲ ವಿದ್ಯುತ್ ಕಡಿತ, ಎಲ್ಲೆಲ್ಲಿ?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ನಾಳೆ ಜೂನ್ 23ರಂದು ಮಂಗಳವಾರ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಅಧಿಕೃತ ಮಾಹಿತಿ ನೀಡಿದೆ. ಇಂದು ಕೂಡ ಅನೇಕ ಸ್ಥಳಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ನಾಳೆ ಸಹ (ಜೂನ್ 23) ಸುಮಾರು 11 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಸ್ಕಾಂ ವತಿಯಿಂದ ವಿದ್ಯುತ್ ಪೂರೈಕೆ ಉಪ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಆಧುನೀಕರಣ ಮತ್ತು ತುರ್ತು ನಿರ್ವಹಣಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ನಗರದಾದ್ಯಂತ ವಿದ್ಯುತ್ ಲೈನ್‌ಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಅಗತ್ಯ ಇದೆ. ಸರಣಿ ತಾಂತ್ರಿಕ ದೋಷಗಳನ್ನು ಸಂಪೂರ್ಣ ನಿಯಂತ್ರಿಸಲು ದುರಸ್ತಿ ಕಾಮಗಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Power Cut

ಜೂನ್ 23ರಂದು ವಿದ್ಯುತ್ ಕಡಿತದ ಪ್ರದೇಶಗಳ ಪಟ್ಟಿ

ಬೆಳಗ್ಗೆಯಿಂದಲೇ ಈ ಕೆಳಗಿನ ಭಾಗಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಈ ಸುದೀರ್ಘ ಕಡಿತಕ್ಕೆ ಒಳಪಡಲಿರುವ ಪ್ರಮುಖ ವಲಯಗಳೆಂದರೆ ಲೊಟ್ಟೆಗೊಲ್ಲಹಳ್ಳಿ, ಮುನಿಶಾಮಪ್ಪ ಬಡಾವಣೆ, ಆರ್.ಕೆ. ಗಾರ್ಡನ್, ಸಂಜೀವಪ್ಪ ಬಡಾವಣೆ, ಎಂಎಲ್‌ಎ ಬಡಾವಣೆ, ನೇತಾಜಿ ನಗರ, ಪೈಪ್‌ಲೈನ್ ರಸ್ತೆ, ಮೋಹನ್ ಕುಮಾರ್ ನಗರ ಮತ್ತು ಪ್ರಸಿದ್ಧ ಜೆ.ಪಿ. ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

Namma Metro Pink Line: ಪೂರ್ಣ ಗುಲಾಬಿ ಮಾರ್ಗ ಲೋಕಾರ್ಪಣೆ ವಿಳಂಬ, ಜುಲೈಗೆ 3ನೇ ಹಂತದ ಯೋಜನೆಗೆ ಒಪ್ಪಿಗೆ?
Namma Metro Pink Line: ಪೂರ್ಣ ಗುಲಾಬಿ ಮಾರ್ಗ ಲೋಕಾರ್ಪಣೆ ವಿಳಂಬ, ಜುಲೈಗೆ 3ನೇ ಹಂತದ ಯೋಜನೆಗೆ ಒಪ್ಪಿಗೆ?

ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿ.ಬಿ. ಕ್ರಾಸ್, ಹೆಸರಘಟ್ಟ, ಬೆಲವಡಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ ಮತ್ತು ಬ್ರದರ್ಸ್ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಕೃಷ್ಣ ಕಾಲೇಜು ರಸ್ತೆ, ರಾಘವೇಂದ್ರ ಬಡಾವಣೆ, ಸಾಸಲುಹಟ್ಟಿ, ಬೋನಿಫೇಸ್ ಬಡಾವಣೆ, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟದ ಬಸವಣ್ಣ ದೇವಸ್ಥಾನದ ರಸ್ತೆ, ಹೊಸಹಳ್ಳಿ ಪಾಳ್ಯ, ಸಿಡಿಐಟಿ, ಡೇನಿಶ್ ಫಾರ್ಮ್, ಕೆಎಂಎಫ್ ಹಾಲಿನ ಡೈರಿ ಆವರಣ, ಗುಣ ಅಗ್ರಹಾರ, ಗಣೇಶ ಗೊಲ್ಲಹಳ್ಳಿ ಮತ್ತು ಕೆ.ಟಿ. ಪುರ ಸೇರಿವೆ.

ಬಡಾವಣೆಗಳ ನಿವಾಸಿಗಳು ಪರ್ಯಾಯ ಜನರೇಟರ್ ಅಥವಾ ಪವರ್ ಬ್ಯಾಕಪ್‌ಗಳ ಸೌಲಭ್ಯ ಮಾಡಿಕೊಳ್ಳಬೇಕು. ಇಲ್ಲವೇ ನೀರು ಸಂಗ್ರಹಣೆ, ವಿದ್ಯುತ್ ಸಂಬಂಧಿ ಕೆಲಸಗಳನ್ನು ವಿದ್ಯುತ್ ಕಡಿತವಾಗುವ ಮೊದಲೇ ಬೇಗ ಮುಗಿಸಿಕೊಂಡರೆ ಉತ್ತಮ. ಹೆಚ್ಚಿನ ಮಾಹಿತಿ, ದೂರು ನೀಡಲು ನೀವು 1012ಗೆ ಕರೆ ಮಾಡುವಂತೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+