ಗದಗಕ್ಕೂ ಬರಲಿ ಬಸವ ಎಕ್ಸಪ್ರೆಸ್: ಮೈಸೂರು-ಬಾಗಲಕೋಟೆ ರೈಲ್ವೆ ವಿಸ್ತರಣೆಗೆ ಹೆಚ್ಚಿದ ಒತ್ತಡ

ಗದಗ, ಫೆಬ್ರವರಿ.19: ಮೈಸೂರು - ಬಾಗಲಕೋಟೆ - ಮೈಸೂರು ನಡುವೆ ಪ್ರತಿದಿನದ ಸಂಚಾರ ನಡೆಸುವ ರೈಲು ಗದಗದ ವರೆಗೂ ಬರಲಿ ಎಂಬ ಆಗ್ರಹ ಕೇಳಿ ಬರುತ್ತಿದೆ. ಮೈಸೂರು - ಬಾಗಲಕೋಟೆ ರೈಲ್ವೆ ವಿಸ್ತರಣೆ ಮಾಡಬೇಕು ಅದನ್ನು ಗದಗದ ವರೆಗೂ ವಿಸ್ತರಿಸಬೇಕು ಎಂಬು ಒತ್ತಡ ಹೆಚ್ಚಾಗಿದೆ.

ನೈಋತ್ಯ ರೈಲ್ವೆಯು ಸೊಲ್ಲಾಪುರ - ಗದಗ ಎಕ್ಸಪ್ರೆಸ್ ಮತ್ತು ಮುಂಬಯಿ - ಗದಗ ರೈಲುಗಳನ್ನು ಹೊಸಪೇಟೆವರೆಗೂ ವಿಸ್ತರಿಸಿದ ಬೆನ್ನಲ್ಲೆ, ಮೈಸೂರು - ಬಾಗಲಕೋಟೆ - ಮೈಸೂರು ನಡುವೆ ಓಡಾಡುವ ಬಸವ ಎಕ್ಸಪ್ರೆಸ್ ರೈಲನ್ನು ಗದಗವರೆಗೂ ವಿಸ್ತರಿಸಬೇಕು ಎನ್ನುವ ಕೂಗು ಕೇಳಿಬರುತ್ತಿದೆ.

Basava Express: Demand for Mysore-Bagalkot Railway Extension to Gadag

ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಓಡಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿತ್ತು, ಬಾಗಲಕೋಟೆಯಿಂದ ಗದಗಕ್ಕೆ, ಅಕ್ಕ ಪಕ್ಕದ ಸ್ಥಳಗಳಿಗೆ ಹೋಗುವವರ ಕಾರಣದಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸವ ಎಕ್ಸ್‌ಪ್ರೆಸ್ ಅನ್ನು ಗದಗದವರೆಗೂ ವಿಸ್ತರಿಸಬೇಕು ಎಂದು ಪ್ರಯಾಣಿಕರು ಒತ್ತಡ ಹಾಕುತ್ತಿದ್ದಾರೆ.

ಬಾಗಲಕೋಟೆಯಿಂದ ಸೊಲ್ಲಾಪುರ, ಕಲಬುರಗಿ, ರಾಯಚೂರು, ಧರ್ಮಾವರಂ, ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪುವ ಬಸವ ಎಕ್ಸಪ್ರೆಸ್ ರೈಲನ್ನು ಗದಗವರೆಗೂ ವಿಸ್ತರಣೆ ಮಾಡಿದರೇ ಕಿತ್ತೂರು ಕರ್ನಾಟಕ ಭಾಗದಿಂದ ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕ ಮತ್ತಷ್ಟು ಗಟ್ಟಿಗೊಳ್ಳಲಿದೆ.

ಬಸವ ಎಕ್ಸಪ್ರೆಸ್ ರೈಲು ಬಾಗಲಕೋಟೆಯಿಂದ ಗದಗವರೆಗೆ ವಿಸ್ತರಣೆಯಾಗುವುದರಿಂದ ಸೊಲ್ಲಾಪುರ, ಅಕ್ಕಲಕೋಟೆ, ದುಧನಿ, ಗಾಣಗಾಪುರ ಹಾಗೂ ಕಲಬುರಗಿ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈಲ್ವೆ ವಿಸ್ತರಣೆಯಿಂದಾಗಿ ಗದಗ ಮತ್ತು ಕಲಬುರಗಿ ಜಿಲ್ಲೆಗಳ ನಡುವಿನ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಸ್ಥಳೀಯರು.

Basava Express: Demand for Mysore-Bagalkot Railway Extension to Gadag

ಮೈಸೂರಿನಿಂದ ಮಧ್ಯಾಹ್ನ 1.30ಕ್ಕೆ ಹೊರಡುವ ಬಸವ ಎಕ್ಸಪ್ರೆಸ್ (17307) ಮರುದಿನ ಬೆಳಗ್ಗೆ 11.10ಕ್ಕೆ ಬಾಗಲಕೋಟೆ ತಲುಪುತ್ತದೆ. ಅದೇ ದಿನ ಬಾಗಲಕೋಟೆ ರೈಲ್ವೆ ನಿಲ್ದಾಣದಿಂದ (17308) ಮಧ್ಯಾಹ್ನ 2.30ಕ್ಕೆ ಮತ್ತೆ ವಾಪಸ್ ಹೊರಡುತ್ತದೆ. ಈ ವೇಳೆ ಸುಮಾರು ಮೂರೂವರೆ ಗಂಟೆಗಳ ಕಾಲ ಈ ಬಸವ ಎಕ್ಸಪ್ರೆಸ್ ಬಾಗಲಕೋಟೆ ರೈಲ್ವೆ ನಿಲ್ದಾಣದಲ್ಲಿ ನಿಂತಿರುತ್ತದೆ.

ಹೀಗಾಗಿ ಈ ಮೂರುಗಂಟೆ ನಿಲ್ಧಾಣದಲ್ಲಿ ನಿಲ್ಲುವ ಬಸವ ಎಕ್ಸಪ್ರೆಸ್‌ ಅದರ ಬದಲು ಗದಗವರೆಗೂ ವಿಸ್ತರಣೆ ಮಾಡಿದಲ್ಲಿ ಗದಗ ಭಾಗದ ಪ್ರಯಾಣಿಕರಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ಸುಮ್ಮನೆ ನಿಲ್ದಾಣದಲ್ಲಿ ನಿಲ್ಲದೆ ಜನರ ಉಪಯೋಗಕ್ಕೂ ಬರುತ್ತದೆ ಎನ್ನುತ್ತಾರೆ ಸ್ಥಳೀಯ ಪ್ರಯಾಣಿಕರು.

ಇನ್ನು, ಗದಗ ಜಿಲ್ಲೆಗೆ ಓಡಾಡುವವರ ಸಂಕ್ಯೆ ಕೂಡ ಹೆಚ್ಚಾಗುತ್ತಿದೆ. ಗದಗ ರೈಲ್ವೆ ನಿಲ್ದಾಣದಿಂದ ವಿಜಯಪುರ ಕಡೆಗೆ ಅನೇಕ ರೈಲುಗಳಿವೆ. ಆದರೆ, ಬೆಳಗ್ಗೆ 7.45 ಮತ್ತು ಮಧ್ಯಾಹ್ನ 2.40ರ ನಡುವೆ ಒಂದೇ ಒಂದು ರೈಲು ಕೂಡ ಸಂಚರಿಸುವುದಿಲ್ಲ. ಹೀಗಾಗಿಯೇ ಬಸವ ಎಕ್ಸ್‌ಪ್ರೆಸ್‌ ವಿಸ್ತರಣೆಗೆ ಒತ್ತಡ ಹಾಕಲಾಗುತ್ತಿದೆ. ಈ ರೈಲು ಮಧ್ಯಾಹ್ನದ ಖಾಲಿ ಸಮಯದಲ್ಲಿ ಬಂದರೆ. ಈ ಭಾಗದ ಜನರಿಗೆ ಮತ್ತಷ್ಟು ಅನುಕೂವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+