• search
  • Live TV
ಅಮರಾವತಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗನ ಪ್ರಮಾಣವಚನದ ಸುದಿನದಂದು ವೈರಲ್ ಆದ ದಿವಂಗತ ತಂದೆಯ ವಿಡಿಯೋ

|

ಅಮರಾವತಿ, ಮೇ 30: ಆಂಧ್ರಪ್ರದೇಶದ ರಾಜಕೀಯದ ಮಟ್ಟಿಗೆ ಈ ದಿನ ಎಂದೂ ಮರೆಯಲಾಗದ ದಿನ. ರಾಜ್ಯ ಇಬ್ಭಾಗವಾದ ನಂತರ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ದನಿಯಲ್ಲಿ ಸಂತಸ, ಸಾರ್ಥಕತೆ, ತಂದೆಯ ನೆನಪು... ಮರೆಯಲ್ಲಿ ಒಂದಷ್ಟು ಪ್ರತೀಕಾರ ತೀರಿಸಿಕೊಂಡ ನಿರಾಳತೆಯ ಭಾವ!

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಜಗನ್ ರೆಡ್ಡಿ ಪ್ರಮಾಣವಚನ ಸ್ವೀಕಾರ

ಜಗನ್ ಬದುಕಿನ ಈ ಅದ್ಭುತ ದಿನದಂದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದು ಮಗನನ್ನು ರಾಜಕೀಯಕ್ಕೆ ಪರಿಚಯಿಸುತ್ತಿರುವ ದಿ.ವೈ ಎಸ್ ರಾಜಶೇಖರ ರೆಡ್ಡಿ ಅವರ ವಿಡಿಯೋ.

ಜಗನ್ ರೆಡ್ಡಿ ಪಟ್ಟುಗಳಿಗೆ ಹಳೇ ಜಟ್ಟಿ ಚಂದ್ರಬಾಬು ಚಿತ್; ಇದು ಆಂಧ್ರ ಪಾಲಿಟಿಕ್ಸ್

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ ಎಸ್ ರಾಜಶೇಖರ್ ರೆಡ್ಡಿ ಅವರು 2009 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ದುರ್ಮರಣಕ್ಕೀದಾದರು. ಅದಾದ ನಂತರ ರೆಡ್ಡಿ ಕುಟುಂಬಕ್ಕೇ ಆಂಧ್ರಪ್ರದೇಶದ ಚುಕ್ಕಾಣಿಯನ್ನು ನೀಡದೆ ರೋಸಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ರೆಡ್ಡು ಅವರ ಮರಣದ ನಂತರ ಜಗನ್ ಅವರ ಕುಟುಂಬಸ್ಥರನ್ನೂ ಕಾಂಗ್ರೆಸ್ ಅವಮಾನಕರವಾಗಿ ನಡೆಸಿಕೊಂದಿತ್ತು ಎಂಬ ಸುದ್ದಿ ಇಂದಿಗೂ ಛಾಲ್ತಿಯಲ್ಲಿದೆ.

ಅದನ್ನೇ ಪ್ರತೀಕಾರ ಎಂಬಂತೆ ತೆಗೆದುಕೊಂಡು ವೈಎಸ್ ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಜಗನ್ ರೆಡ್ಡಿ ಇದೀಗ ಆಂಧ್ರ ಪ್ರದೇಶದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಅವರನ್ನು ರಾಜಕೀಯಕ್ಕೆ ಉತ್ಸಾಹದಿಂದ ಪರಿಚಯಿಸಿದ್ದ ಅವರ ತಂದೆ ರಾಜಶೇಖರ್ ರೆಡ್ಡಿ ಅವರು ಇವನ್ನೆಲ್ಲ ನೋಡುವುದಕ್ಕೆ ಬದುಕಿಲ್ಲ!

ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಕ್ಷೇತ್ರಗಳಲ್ಲಿ 151 ವೈಎಸ್ ಆರ್ ಕಾಂಗ್ರೆಸ್, 22 ಟಿಡಿಪಿ ಮತ್ತು 1 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ 22 ವೈಎಸ್ ಆರ್ ಕಾಂಗ್ರೆಸ್ ಮತ್ತು ಕೇವಲ 2 ಕ್ಷೇತ್ರಗಳಲ್ಲಿ ಟಿಡಿಪಿ ಜಯಗಳಿಸಿತ್ತು. ಇಲ್ಲಿ ಏಪ್ರಿಲ್ 11 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 23 ರಂದು ಫಲಿತಾಂಶ ಹೊರಬಿದ್ದಿತ್ತು.

English summary
On his oath taking day, Jagan Mohan Reddy's old video makes sound in social media. In that video his father Y S Rajasekhara Reddy introducing his son to politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more