Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
ಬೇಸಿಗೆ ರಜೆ ಆರಂಭವಾಗಿದೆ. ಈ ರಜೆಯಲ್ಲಿ ನೀವೇನಾದರೂ ಆಂಧ್ರಪ್ರದೇಶದ ತಿರುಪತಿಗೆ ಹೋಗಬೇಕು ಅಂದುಕೊಂಡಿದ್ದರೆ ಸುಲಭವಾಗಿ ವಿಶೇಷ ಪೂಜಾ ದರ್ಶನದ ಟಿಕೆಟ್ ಅನ್ನು ಪಡೆಯಬಹುದು. ಇದಕ್ಕಾಗಿ ಟಿಟಿಡಿ ಟಿಕೆಟ್ ಬಿಡುಗಡೆಯ ದಿನಾಂಕ ಕೂಡ ಘೋಷಿಸಿದೆ.
ತಿರುಪತಿಗೆ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಪ್ರತಿದಿನ ತಿರುಪತಿಯಲ್ಲಿ ವಿಶೇಷ ಪೂಜಾ ಸೇವೆಗಳು ನಡೆಯುತ್ತವೆ. ಈ ಸಮಯದಲ್ಲಿ ಹತ್ತಿರದಿಂದ ತಿಮ್ಮಪ್ಪನ ದರ್ಶನ ಪಡೆಯಲು ಬಯಸುವವರು ಹಾಗೂ ವಿವಿಧ ಪೂಜಾ ಸೇವೆಗಳನ್ನು ಕಣ್ತುಂಬಿಕೊಳ್ಳಲು ಬಯಸುವ ಭಕ್ತರು ಇಂದೇ ತಿರುಪತಿ ವಿಶೇಷ ದರ್ಶನದ ಟಿಕೆಟ್ ಪಡೆಯಬಹುದು.

ಇದಕ್ಕಾಗಿ ಇಂದೇ ಭಕ್ತರು ದೇವಸ್ಥಾನದ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಸೇವೆಗಳನ್ನು ಬುಕ್ ಮಾಡಬಹುದು. ಈ ಸೇವೆಗಳ ಟಿಕೆಟ್ ಮೂಲಕ ಭಕ್ತರು ಏಪ್ರಿಲ್ 22ರಂದು ತಿರುಕಲ್ಯಾಣಂ, ಉಯ್ಯಾಲೆ ಸೇವೆ, ಅರ್ಗಿತ ಬ್ರಹ್ಮೋತ್ಸವ, ಸಹಸ್ರ ದೀಪ ಅಕಾರ ಸೇವೆಯಲ್ಲಿ ಭಾಗವಹಿಸಬಹುದು. ಜೊತೆಗೆ ಏಪ್ರಿಲ್ 23ರಂದು ಅಂಗಪ್ರದತ್ಸನಂ, ಶ್ರೀವಾಣಿ ಫೌಂಡೇಶನ್ ಟಿಕೆಟ್‌ಗಳನ್ನು ಖರೀದಿಸಿದ ಭಕ್ತರು ಈ ಪೂಜೆ ವೇಳೆ ಭಾಗವಹಿಸಬಹುದು.
ಹೀಗೆ ಬುಕ್ ಮಾಡಿದ ಟಿಕೆಟ್‌ಗಳನ್ನು ಪಡೆದ ಭಕ್ತರು ಟಿಟಿಡಿ ಘೋಷಿದ ದಿನಾಂಕದಂದು ತಿರುಪತಿಗೆ ನಾಲ್ಕು ಗಂಟೆ ಮುಂಚಿತವಾಗಿ ತೆರಳಬೇಕು. ನಿಯಮಗಳನ್ನು ಪಾಲಿಸಬೇಕು. ಈ ವೀಶೆಷ ಟಿಕೆಟ್‌ಗಳು ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿದೆ.
ಇನ್ನೂ ಹಿರಿಯ ನಾಗರಿಕರು ಮತ್ತು ವಿಕಲಚೇತನ ಭಕ್ತರು ಕೂಡ ಈ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಇದೇ ಏಪ್ರಿಲ್ 23 ರಂದು ಮಧ್ಯಾಹ್ನ 3 ಗಂಟೆಗೆ ಅವರು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಜೊತೆಗೆ ಇವರು ಏಪ್ರಿಲ್ 24 ರಂದು ಬೆಳಗ್ಗೆ 10 ಗಂಟೆಗೆ ಭಕ್ತರು 300 ರೂ.ಗೆ ವಿಶೇಷ ದರ್ಶನ ಪಡೆಯಬಹುದಾಗಿದೆ.
ತಿರುಪತಿ ಎನ್ನುವ ಹೆಸರು ಕೇಳುತ್ತಿದ್ದಂತೆ 7 ಬೆಟ್ಟಗಳ ಒಡೆಯ ತಿಮ್ಮಪ್ಪನೇ ಕಣ್ಣ ಮುಂದೆ ಬರುತ್ತಾನೆ. ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುವ ಏಕೈಕ ದೇವಾಲಯ ಇದಾಗಿದೆ. ಅದ್ಭುತ ದೈವಿಕ ಶಕ್ತಿಯನ್ನು ಹೊಂದಿರುವ ಈ ತಿಮ್ಮಪ್ಪನ ನೆಲೆಯಲ್ಲಿ ಸದ್ಯ ಭಕ್ತ ಸಾಗರವೇ ಕಂಡು ಬರುತ್ತಿದೆ.
ತಿರುಪತಿ ದೇವಸ್ಥಾನದಲ್ಲಿ ಹಗಲಿನಲ್ಲಿ ಭಗವಾನ್ ವೆಂಕಟೇಶ್ವರನನ್ನು ಮೂರು ವಿಭಿನ್ನ ರೂಪದಲ್ಲಿ ದರ್ಶನ ಮಾಡಬಹುದು. ಮೊದಲನೆಯದನ್ನು ವಿಶ್ವರೂಪ ಎಂದು ಕರೆಯಲಾಗುತ್ತದೆ, ಅದರಲ್ಲಿ ಬೆಳಿಗ್ಗೆ ದರ್ಶನವನ್ನು ಮಾಡಲಾಗುತ್ತದೆ. ಮಧ್ಯಾಹ್ನ ಎರಡನೇ ರೂಪದ ದರ್ಶನ ಹಾಗೂ ರಾತ್ರಿ ಮೂರನೇ ರೂಪದ ದರ್ಶನ. ಇಲ್ಲಿ ದೇವರ ಇತರ ಹಲವು ರೂಪಗಳಲ್ಲಿ ದರ್ಶನವನ್ನು ಮಾಡಲಾಗುತ್ತದೆ, ಇದಕ್ಕಾಗಿ ನೀವು ವಿವಿಧ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಶುಕ್ರವಾರ ಬೆಳಿಗ್ಗೆ ಅಭಿಷೇಕ ಸಮಯದಲ್ಲಿ ದೇವರ ಪೂರ್ಣ ರೂಪದ ದರ್ಶನವನ್ನು ಮಾಡಲಾಗುತ್ತದೆ. ಹೆಚ್ಚಾಗಿ ಜನರು ತಿರುಮಲನ ಪೂರ್ಣ ರೂಪದ ದರ್ಶನವನ್ನು ಪಡೆಯಲು ಬಯಸುತ್ತಾರೆ.












Click it and Unblock the Notifications