Tirupati July Ticket: ತಿರುಮಲ ಶ್ರೀವಾರಿ ಭಕ್ತರಿಗೆ ಗುಡ್ ನ್ಯೂಸ್.. ಜುಲೈ ದರ್ಶನ ಟಿಕೆಟ್ ಬಿಡುಗಡೆ!
ತಿರುಪತಿಗೆ ಹೋಗಲು ಬಯಸುವ ಭಕ್ತರಿಗಾಗಿ ಟಿಟಿಡಿ ಜುಲೈ ತಿಂಗಳ ದರ್ಶನ ಟಿಕೆಟ್‌ಗಳ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಭಕ್ತರ ಅನುಕೂಲಕ್ಕಾಗಿ ಜುಲೈ ತಿಂಗಳ ದರ್ಶನ, ಆರ್ಜಿತಸೇವಾ ಟಿಕೆಟ್‌ಗಳು, ಶ್ರೀವಾರಿ ಸೇವಾ ಕೋಟಾವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಟಿಕೆಟ್ ಬಿಡುಗಡೆಯ ದಿನಾಂಕವನ್ನು ಟಿಟಿಡಿ ಪ್ರಕಟಿಸಿದೆ.
ಹೌದು... ನೀವು ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಲಕ್ಕಿಡಿಪ್‌ಗಾಗಿ ಏಪ್ರಿಲ್ 18ರಂದು ಬೆಳಿಗ್ಗೆ 10 ರಿಂದ 20ರ ಬೆಳಿಗ್ಗೆ 10ರವರೆಗೆ ನೋಂದಾಯಿಸಿಕೊಳ್ಳಬಹುದು. ಏಪ್ರಿಲ್ 22 ರಂದು ಮಧ್ಯಾಹ್ನ 12 ಗಂಟೆಯ ಮೊದಲು ಹಣವನ್ನು ಪಾವತಿಸಿ ಟಿಕೆಟ್‌ಗಳನ್ನು ಅಂತಿಮಗೊಳಿಸಬೇಕು.

ಏಪ್ರಿಲ್ 22 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀವಾರಿ ಆರ್ಜಿತಸೇವೆಯ ಕಲ್ಯಾಣೋತ್ಸವ, ಊಂಜಾಲಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳ ಕೋಟಾವನ್ನು ಬಿಡುಗಡೆ ಮಾಡಲಾಗುವುದು. ಶ್ರೀವಾರಿ ವರ್ಚುವಲ್ ಸೇವೆಗಳಾದ ಕಲ್ಯಾಣೋತ್ಸವ, ಊಂಜಲಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳು ಮತ್ತು ದರ್ಶನ ಟಿಕೆಟ್‌ಗಳನ್ನು ಏಪ್ರಿಲ್ 22 ರಂದು ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಬಿಡುಗಡೆ ಮಾಡಲಿದೆ.
ಅಂಗಪ್ರದಕ್ಷಿಣಂ ಟೋಕನ್‌ಗಳು ಏಪ್ರಿಲ್ 23 ರಂದು ಬೆಳಿಗ್ಗೆ 10 ಗಂಟೆಗೆ ಲಭ್ಯವಿರುತ್ತವೆ ಎಂದು ಟಿಟಿಡಿ ತಿಳಿಸಿದೆ. ಏಪ್ರಿಲ್ 23 ರಂದು ಬೆಳಗ್ಗೆ 11 ಗಂಟೆಗೆ ಕೊಠಡಿಗಳ ಕೋಟಾ ಬಿಡುಗಡೆ ಮಾಡಲಾಗುತ್ತದೆ. ನಂತರ ಏಪ್ರಿಲ್ 23 ರಂದು ಮಧ್ಯಾಹ್ನ 3 ಗಂಟೆಗೆ ವೃದ್ಧರು ಮತ್ತು ಅಂಗವಿಕಲರ ದರ್ಶನ ಟಿಕೆಟ್‌ಗಳ ಕೋಟಾವನ್ನು ಬಿಡುಗಡೆ ಮಾಡಲಾಗುತ್ತದೆ.
ಹಾಗೆಯೇ ಏಪ್ರಿಲ್ 24 ರಂದು ಬೆಳಿಗ್ಗೆ 10 ಗಂಟೆಗೆ ಭಕ್ತಾದಿಗಳಿಗೆ ರೂ.300/- ವಿಶೇಷ ಪ್ರವೇಶ ಟಿಕೆಟ್ ಲಭ್ಯವಿರುತ್ತದೆ. ತಿರುಮಲ ಮತ್ತು ತಿರುಪತಿಯಲ್ಲಿನ ಕೊಠಡಿಗಳ ಕೋಟಾವನ್ನು ಏಪ್ರಿಲ್ 24 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ.

ತಿರುಮಲ ಮತ್ತು ತಿರುಪತಿಯಲ್ಲಿ ಶ್ರೀವಾರಿ ಸೇವಾ ಕೋಟಾ ಏಪ್ರಿಲ್ 27 ರಂದು ಬೆಳಿಗ್ಗೆ 11 ಗಂಟೆಗೆ, ನವನೀತ ಸೇವಾ ಕೋಟಾ ಮಧ್ಯಾಹ್ನ 12 ಗಂಟೆಗೆ ಮತ್ತು ಪರಕಾಮಣಿ ಸೇವಾ ಕೋಟಾ ಅದೇ ದಿನ ಮಧ್ಯಾಹ್ನ 1 ಗಂಟೆಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಇದಲ್ಲದೆ, ತಿರುಮಲ ಶ್ರೀವಾರಿ ಭಕ್ತರು https://ttdevasthanams.ap.gov.in ವೆಬ್‌ಸೈಟ್ ಮೂಲಕ ಶ್ರೀವಾರಿ ಆರ್ಜಿತಸೇವೆ ಮತ್ತು ದರ್ಶನ ಟಿಕೆಟ್‌ಗಳನ್ನು ಕಾಯ್ದಿರಿಸಬೇಕೆಂದು ಟಿಟಿಡಿ ಸೂಚಿಸಿದೆ.
ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನ
ಏಪ್ರಿಲ್ 12 ರಂದು ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನ ನಡೆಯಲಿದೆ. ಬ್ರಹ್ಮೋತ್ಸವದಂದು ಏಪ್ರಿಲ್ 17 ರಿಂದ 25 ರವರೆಗೆ ದೇವಸ್ಥಾನದಲ್ಲಿ ಕೋಯಿಲ್ ಆಳ್ವಾರ್ ತಿರುಮಂಜನವನ್ನು ನಡೆಸುವುದು ವಾಡಿಕೆ.
ಈ ಸಂದರ್ಭದಲ್ಲಿ ಎಪ್ರಿಲ್ 12ರಂದು ಮುಂಜಾನೆ ಸ್ವಾಮಿಯನ್ನು ಎಬ್ಬಿಸುವ ಪೂಜೆ ನಡೆಸಲಾಗುತ್ತದೆ. ಬಳಿಕ ದೇವಸ್ಥಾನದಲ್ಲಿ ಬೆಳಗ್ಗೆ 8ರಿಂದ 11.30ರವರೆಗೆ ಕೊಯಿಲ್ ಆಳ್ವಾರ್ ತಿರುಮಂಜನ ನಡೆಯಲಿದೆ.
ಇದರಲ್ಲಿ ದೇವಾಲಯದ ಆವರಣ, ಗೋಡೆ, ಚಾವಣಿ, ಪೂಜಾ ಸಾಮಾಗ್ರಿ ಇತ್ಯಾದಿಗಳನ್ನು ನೀರಿನಿಂದ ಸ್ವಚ್ಛಗೊಳಿಸಿದ ನಂತರ ದೇವಾಲಯದ ಉದ್ದಕ್ಕೂ ನಾಮಕೋಪು, ಶ್ರೀಚೂರ್ಣಂ, ಕಸ್ತೂರಿ ಅರಿಶಿನ, ಕರ್ಪೂರ, ಶ್ರೀಗಂಧದ ಪುಡಿ, ಕುಂಕುಮಗಳ ಪವಿತ್ರ ಮಿಶ್ರಣವನ್ನು ಹರಡಲಾಗುತ್ತದೆ. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.












Click it and Unblock the Notifications