Janhvi Kapoor Tirupati Wedding: ಇದೇ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ತಾರಂತೆ ಜಾನ್ವಿ ಕಪೂರ್..!

ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಸದ್ಯ ತನ್ನ ಬಾಲ್ಯದ ಗೆಳೆಯ ಶಿಖರ್ ಜೊತೆಗೆ ಡೇಟಿಂಗ್ ಗಾಸಿಪ್‌ನಲ್ಲಿದ್ದಾರೆ. ಈ ನಡುವೆ ಜಾನ್ವಿ ತಾವು ಮದುವೆಯಾದರೇ ಇದೇ ದೇವಸ್ಥಾನದಲ್ಲಿ ಎಂದು ಹೇಳಿದ್ದು ಭಾರೀ ಕುತೂಹಲ ಮೂಡಿಸಿದೆ.

ಹೌದು.. ಜಾನ್ವಿ ಇತ್ತೀಚೆಗೆ ಶಿಖು ಹೆಸರಿನ ಪೆಂಡೆಂಟ್ ಇರುವ ನೆಕ್ಲೇಸ್ ಧರಿಸುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಪಡಿಸಿದ್ದರು. ಜಾನ್ವಿ ಕಪೂರ್ ಮತ್ತು ಶಿಖರ್ ಇಬ್ಬರೂ ಬಾಲ್ಯದಿಂದಲೂ ಸ್ನೆಹಿತರು. ಆದರೆ ಬಾಲ್ಯದ ಗೆಳೆತನ ಪ್ರೀತಿಗೆ ತಿರುಗಿದೆ. ಈಗ ಇವರಿಬ್ಬರು ಮದುವೆಯಾಗಲಿದ್ದಾರೆನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ಜಾನ್ವಿ ತಮ್ಮ ಮದುವೆ ಹೇಗಿರಬೇಕು ಎನ್ನುವ ವಿಷಯಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

Bollywood janhvi kapoor wedding plans marry in tirupati shikhar in kannada

ಜಾನ್ವಿ ಕಪೂರ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ಸಾಕಷ್ಟು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ನಿಮ್ಮ ಮದುವೆ ಹೇಗಿರಬೇಕು ಎಂದು ನೀವು ಕನಸ್ಸು ಕಂಡಿದ್ದೀರಿ? ಎಂಬ ಪ್ರಶ್ನೆಗೆ ಜಾನ್ವಿ ಉತ್ತರಿಸಿದ್ದು ಹೀಗೆ... "ನಾನು ಮೊದಲಿನಿಂದಲೂ ಅದರ ಬಗ್ಗೆ ಸ್ಪಷ್ಟವಾದ ಚಿತ್ರವನ್ನು ಹೊಂದಿದ್ದೇನೆ! ನಾನು ತಿರುಪತಿಯಲ್ಲಿ ಮದುವೆಯಾಗಲು ಬಯಸುತ್ತೇನೆ. ಈ ದೇವಸ್ಥಾನಕ್ಕೂ ನನಗೂ ಆತ್ಮೀಯ ಸಂಬಂಧ ಇದೆ'' ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮದುವೆಯಲ್ಲಿ ನಿಮ್ಮ ಉಡುಗೆ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಜಾನ್ವಿ, ''ನಾನು ಏನು ಧರಿಸುತ್ತೇನೆ ಎಂದು ನಾನು ಈಗಾಗಲೇ ಯೋಚಿಸಿದ್ದೇನೆ. ಚಿನ್ನ, ಜರಿ ಕಾಂಚೀವರಂ ಸೀರೆ ಮತ್ತು ವಿಭಿನ್ನ ಕೇಶವಿನ್ಯಾಸ ಇರುತ್ತದೆ. ನನ್ನ ಪತಿ ಲುಂಗಿಯಲ್ಲಿ ಇರುತ್ತಾರೆ. ಮದುವೆಯ ನಂತರ ನಾವೆಲ್ಲರೂ ಬಾಳೆ ಎಲೆಯಲ್ಲಿ ಊಟ ಮಾಡುತ್ತೇವೆ" ಎಂದು ಹೇಳಿದ್ದಾರೆ.

ಇದೇ ವೇಳೆ ಜಾನ್ವಿ ತಮಗೆ ಆಡಂಬರದ ಮದುವೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ತಿರುಪತಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ. ಮದುವೆ ನನ್ನ ಜೀವನದಲ್ಲಿ ಅತ್ಯಂತ ದೊಡ್ಡ ಹೆಜ್ಜೆ. ಆ ಹೆಜ್ಜೆಯನ್ನು ಇಡುವಾಗ ನಾನು ಪ್ರೀತಿಸುವ ವ್ಯಕ್ತಿಯೊಂದಿಗೆ ತಿರುಪತಿಯಲ್ಲಿ ಮದುವೆಯಾಗಲು ಬಯಸುತ್ತೇನೆ. ಅಲ್ಲದೆ ಈ ಹಿಂದೆ ನಾನು ಒಂದು ಕುಟುಂಬದ ಮದುವೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ಮದುವೆಯನ್ನು ನಿಜವಾಗಿಯೂ ಆನಂದಿಸಿದೆ. ನನಗೆ ದೊಡ್ಡ ಮದುವೆಗಳು ಇಷ್ಟವಿಲ್ಲ. ಮದುವೆಯಲ್ಲಿ ಭಾಗವಹಿಸಲು ನನಗೆ ಖುಷಿಯಾಗಬೇಕು. ಆದರೆ ದೊಡ್ಡ ಸಮಾರಂಭದಲ್ಲಿ ಗಮನ ಕೇಂದ್ರವಾಗುವುದರಿಂದ ನನಗೆ ತುಂಬಾ ಆತಂಕವನ್ನು ನೀಡುತ್ತದೆ!" ಎಂದು ಜಾನ್ವಿ ಹೇಳಿಕೊಂಡಿದ್ದಾರೆ.

Bollywood janhvi kapoor wedding plans marry in tirupati shikhar in kannada

ಈ ವರ್ಷದ ಆರಂಭದಲ್ಲಿ, ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಜಾನ್ವಿ ತನ್ನ ಸ್ಪೀಡ್-ಡಯಲ್ ಲಿಸ್ಟ್‌ನಲ್ಲಿರುವ ಮೂರು ಜನರಲ್ಲಿ ಗೆಳೆಯ ಶಿಖರ್ ಹೆಸರನ್ನು ಥಟ್ ಅಂತ ಹೇಳಿದ್ದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ಕರಣ್ ಜೋಹರ್ ಜಾನ್ವಿ ಅವರನ್ನು 'ನಿಮ್ಮ ಸ್ಪೀಡ್-ಡಯಲ್ ಲಿಸ್ಟ್‌ನಲ್ಲಿ ಮೂರು ಜನರನ್ನು ಹೆಸರಿಸಲು ಕೇಳಿದಾಗ, ಅವರು "ಪಾಪಾ (ತಂದೆ ಬೋನಿ ಕಪೂರ್), ಖುಷು (ಸಹೋದರಿ ಖುಷಿ ಕಪೂರ್) ಮತ್ತು ಶಿಕು" ಎಂದು ಉತ್ತರಿಸಿದ್ದರು. ಈ ಕಾರ್ಯಕ್ರಮದ ಮೂಲಕ ಅವರೊಂದಿಗೆ ಶಿಖರ್ ನಡುವಿನ ಸಂಬಂಧ ಬಹಿರಂಗವಾಗಿತ್ತು.

ಜೊತೆಗೆ ಅವರು ಅಂಬಾನಿ ಮನೆ ಕಾರ್ಯಕ್ರಮದಲ್ಲಿಯೂ ಕೂಡ ಶಿಖರ್‌ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದು ಅವರಿಬ್ಬರ ನಡುವಿನ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಈಗ ಆ ವಿಚಾರವನ್ನು ಜಾನ್ವಿ ಬಾಯಿ ಬಿಟ್ಟು ಹೇಳದೇ ಇದ್ದರು ಜಾನ್ವಿ ಧರಿಸಿರುವ ನೆಕ್ಲೇಸ್‌ನಿಂದ ಜಾನ್ವಿ ಪ್ರೀತಿಸುವ ಹುಡುಗ ಬಾಲ್ಯದ ಶಿಖರ್ ಎಂಬ ಸತ್ಯ ಹೊರಬಿದ್ದಿದೆ. ಒಂದು ವೇಳೆ ಇದೇ ನಿಜವಾದಲ್ಲಿ ಜಾನ್ವಿ ಹಾಗೂ ಬಾಲ್ಯದ ಗೆಳೆಯ ಶಿಖರ್ ಮದುವೆ ತಿರುಪತಿಯಲ್ಲಿ ಕಾಣಬಹುದು. ಆದರೆ ಈ ಬಗ್ಗೆ ಜಾನ್ವಿ ಎಲ್ಲೂ ಕೂಡ ಬಾಯಿಬಿಟ್ಟಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+