Tirupati IRCTC Tour Package: ತಿರುಪತಿಗೆ ಹೋಗುವ ಯೋಜನೆ ಇದೆಯೇ? ಕಡಿಮೆ ಖರ್ಚಿನಲ್ಲಿ ಈ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ..

ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ತಿರುಪತಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಊಆರ್‌ಸಿತಿಸಿ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ವಿಶೇಷ ಪ್ಯಾಕೇಜ್‌ ಅನ್ನು ನೀಡುತ್ತಿದೆ. ಈ ಪ್ಯಾಕೇಜ್ ಮೂಲಕ ಭಕ್ತರು 5 ದೇವಾಲಯಗಳಿಗೆ ಭೇಟಿ ನೀಡಬಹುದು. ಈ ಪ್ರವಾಸ ಪ್ಯಾಕೇಜ್ ಪ್ರಯಾಣಿಕ ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹಾಗಾದರೆ ಆ ಪ್ಯಾಕೇಜ್ ಯಾವುದು? ಪ್ರಯಾಣ ದರವೆಷ್ಟು ಎನ್ನುವುದರ ಬಗ್ಗೆ ತಿಳಿಯೋಣ.

IRCTC ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ 5 ದೇವಾಲಯಗಳು (5 Temples) ಎಂಬ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ. ಈ ಪ್ರವಾಸದ ಪ್ಯಾಕೇಜ್ ತಿರುಪತಿಯಿಂದ ಪ್ರತಿದಿನ ಲಭ್ಯವಿರುತ್ತದೆ. ಈ ಪ್ರವಾಸದ ಪ್ಯಾಕೇಜ್ ಮೂಲಕ ಭಕ್ತರು ಐದು ದೇವಾಲಯಗಳಿಗೆ ಭೇಟಿ ನೀಡಬಹುದು. ಆ ದೇವಾಲಯಗಳು ಯಾವವು? ಎಲ್ಲಿಂದ ಎಲ್ಲಿಗೆ ಪ್ರವಾಸ ಮಾಡಲಾಗುತ್ತದೆ? ಯಾವ ದೇವಸ್ಥಾನಕ್ಕೆ ಮೊದಲು ಭೇಟಿ ನೀಡಲಾಗುತ್ತದೆ? ಪ್ಯಾಕೇಜ್ ದರ ಎಷ್ಟು? ಊಟ ವಸತಿ ಎಲ್ಲದರ ಬಗ್ಗೆ ತಿಳಿಯೋಣ.

Tirupati irctc tour package tirumala local temple tour in low budget

ಎಲ್ಲಿಂದು ಎಲ್ಲಿಗೆ?

ಈ ಪ್ರಯಾಣ ತಿರುಪತಿಯಿಂದ ಪ್ರಾರಂಭವಾಗುತ್ತದೆ. ತಿರುಪತಿಗೆ ಭೇಟಿ ನೀಡಿದ ನಂತರವೇ ಈ ಪ್ರವಾಸದ ಪ್ಯಾಕೇಜ್ ಪ್ರಾರಂಭವಾಗುತ್ತದೆ ಎಂಬುದನ್ನು ಪ್ರವಾಸಿಗರು ನೆನಪಿನಲ್ಲಿಡಬೇಕು. ವಿವಿಧ ಸ್ಥಳಗಳಿಂದ ತಿರುಪತಿಗೆ ಭೇಟಿ ನೀಡುವವರಿಗೆ ಇದು ಅನುಕೂಲಕರವಾಗಿದೆ. ತಿರುಮಲದಲ್ಲಿರುವ ಇತರ ದೇವಾಲಯಗಳಿಗೆ ಭೇಟಿ ನೀಡಲು ಬಯಸುವವರಿಗೆ ಅಥವಾ ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಲು ಬಯಸುವವರಿಗೆ ಈ ಪ್ಯಾಕೇಜ್ ಉಪಯುಕ್ತವಾಗಿದೆ.

ತಿರುಪತಿಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದು ಹತ್ತರದ ಸ್ಥಳ ಹಾಗೂ ದೇವಸ್ತಾನಗಳ ಬಗ್ಗೆ ಮಾಹಿತಿ ಇಲ್ಲದೇ ಇರುವವರು ಈ ಪ್ಯಾಕೇಜ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಹಾಗಾದರೆ ಈ ಪ್ಯಾಕೇಜ್ ಮೂಲಕ ಯಾವೆಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಬಹುದು ತೊಳಿಯೋಣ.

ಆ ದೇವಾಲಯಗಳ ಬಗ್ಗೆ ನೋಡುವುದಾದರೆ:

1. ಶ್ರೀನಿವಾಸ ಮಂಗಪುರಂ (Kalyana Venkateswara Temple, Srinivasamangapuram)

2. ಸ್ವಯಂಭೂ ವರಸಿಧಿ ವಿನಾಯಕ ಸ್ವಾಮಿ ದೇವಸ್ಥಾನಂ, ಕಾಣಿಪಾಕಂ (Swayambhu Varasidhi Vinayaka Swamy Devastanam, Kanipakam)

3. ಶ್ರೀಕಾಳಹಸ್ತಿ (Srikalahasti Temple)

4. ತಿರುಚಾನೂರ್ ದೇವಾಲಯಗಳು (Temples of Tiruchanur)

5. ತಿರುಮಲದಲ್ಲಿ ಶ್ರೀವಾರಿಯ ವಿಶೇಷ ಪ್ರವೇಶ ದರ್ಶನವನ್ನು ಒಳಗೊಂಡಿದೆ.

ತಿರುಪತಿಗೆ ಆಗಮಿಸುವ ಭಕ್ತರು ನೋಡುವ ದೇವಸ್ಥಾನ ಯಾವುದು? ಅಲ್ಲಿಂದ ಎಲ್ಲಿಗೆ ಹೋಗಲಾಗುತ್ತದೆ? ನಂತರ ವಾಸ್ತವ್ಯ ಎಲ್ಲಿರುತ್ತದೆ ಎನ್ನುವ ಮಾಹಿತಿ ಈಗ ನೋಡೋನ.

ಯಾವ ದೇವಸ್ಥಾನಕ್ಕೆ ಯಾವಾಗ ಭೇಟಿ?

ಬೆಳಿಗ್ಗೆ 7 ರಿಂದ 8 ರವರೆಗೆ IRCTC ಸಿಬ್ಬಂದಿಯಿಂದ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಆರಂಭದಲ್ಲಿ ಭಕ್ತರು ಶ್ರೀನಿವಾಸ ಮಂಗಾಪುರಂ ಮತ್ತು ಕಾಣಿಪಾಕಂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ನಂತರ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ತೆರಳಿ ತಿರುಪತಿಯಲ್ಲಿ ರಾತ್ರಿ ತಂಗಲಾಗುತ್ತದೆ.

ಎರಡನೇ ದಿನ ತಿರುಮಲದಲ್ಲಿ ಬೆಳಗ್ಗೆ 9 ಗಂಟೆಗೆ ಏಳು ಪರ್ವತಗಳ ಒಡೆಯ ತಿಮ್ಮಪ್ಪನ ದರ್ಶನಕ್ಕೆ ವಿಶೇಷ ಪ್ರವೇಶ ದರ್ಶನವಾಗಲಿದೆ. ನಂತರ ತಿರುಚಾನೂರಿನ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಅಲ್ಲಿಂದ ಸಂಜೆ, ತಿರುಪತಿ ರೈಲು ನಿಲ್ದಾಣದ ಬಳಿ ಪ್ರವಾಸಿಗರನ್ನು ಬಿಡುವುದರೊಂದಿಗೆ ಪ್ರವಾಸವು ಮುಕ್ತಾಯವಾಗುತ್ತದೆ.

ಪ್ರವಾಸ ಪ್ಯಾಕೇಜ್ ದರ:

ಈ ಪ್ರವಾಸ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್‌ನಿಂದ ಪಡೆಯಬಹುದು. ಮೂರು ಜನರಿಗೆ 6,590 ರೂಪಾಯಿ ದರವಿದೆ. ಇಬ್ಬರಿಗೆ 6,800 ರೂಪಾಯಿ ಇದೆ. ಒಬ್ಬರಿಗೆ 8,280 ರೂಪಾಯಿ ಇದೆ. ಪ್ರವಾಸದ ಪ್ಯಾಕೇಜ್‌ನಲ್ಲಿ ಎಸಿ ವಸತಿ, ಎಸಿ ವಾಹನದಲ್ಲಿ ದೃಶ್ಯವೀಕ್ಷಣೆ, ತಿರುಮಲಕ್ಕೆ ವಿಶೇಷ ಪ್ರವೇಶ ಭೇಟಿ, ಉಪಹಾರ, ಪ್ರಯಾಣ ವಿಮೆ ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+