Tirupati: ಬೇಸಿಗೆ ರಜಾ ದಿನಗಳಿಗಾಗಿ ತಿರುಪತಿ ದರ್ಶನ ಟಿಕೆಟ್ ಹೆಚ್ಚಳ- ವಿಐಪಿ ದರ್ಶನ ಟಿಕೆಟ್ ಲಕ್ಕಿ ಡಿಪ್‌ ಮೂಲಕ ಹಂಚಿಕೆ

ಬೇಸಿಗೆ ರಜೆ ದಿನಗಳಿಗಾಗಿ ತಿರುಪತಿ ದರ್ಶನ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜೊತೆಗೆ ತಿರುಮಲ ಶ್ರೀವಾರಿ ಭಕ್ತರ ಸಲಹೆಯಂತೆ ವಿಐಪಿ ದರ್ಶನ ಟಿಕೆಟ್‌ಗಳನ್ನು ಲಕ್ಕಿ ಡಿಪ್‌ನಲ್ಲಿ ಹಂಚಿಕೆ ಮಾಡುವ ಕುರಿತು ಚಿಂತನೆ ಮಾಡಲಾಗುತ್ತಿದೆ.

ಬೇಸಿಗೆಯಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಿ ಸರ್ವದರ್ಶನ ಟೋಕನ್ ಅನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ಅವರು ಹೇಳಿದರು. ಲೋಕಸಭಾ ಚುನಾವಣೆ ಬೆನ್ನಲ್ಲೆ ವಿಐಪಿ ದರ್ಶನ ಶಿಫಾರಸು ಪತ್ರಗಳು ರದ್ದಾಗಿರುವುದರಿಂದ ಸಾಮಾನ್ಯ ದರ್ಶನಕ್ಕೆ ಟಿಕೆಟ್‌ಗಳನ್ನು ಹೆಚ್ಚಿಸಲಾಗಿದೆ. ಜೊತೆಗೆ ಭಕ್ತರಿಗೆ ದರ್ಶನ ಸಮಯವನ್ನು ಎರಡು ಗಂಟೆ ಹೆಚ್ಚುವರಿ ನೀಡಲಾಗಿದೆ.

Tirupati Darshan Ticket Increase for Summer holidays

ವಿಐಪಿ ದರ್ಶನದ ಟಿಕೆಟ್‌ಗಳನ್ನು ದಿನಕ್ಕೆ 200-250 ನೀಡಲಾಗುತ್ತಿತ್ತು. ಆದರೀಗ ಶ್ರೀವಾರಿ ಟ್ರಸ್ಟ್ ಅಡಿಯಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 1500 ರಿಂದ 1600 ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ಭಕ್ತರು ಕೊಠಡಿಗಳ ಹಂಚಿಕೆಯ ಬಗ್ಗೆ ತಕ್ಷಣವೇ ಎಸ್‌ಎಂಎಸ್‌ ಸ್ವೀಕರಿಸುತ್ತಾರೆ.

ತಿರುಮಲ ಶ್ರೀವಾರಿ ಭಕ್ತರ ಸಲಹೆಯಂತೆ ವಿಐಪಿ ದರ್ಶನ ಟಿಕೆಟ್‌ಗಳನ್ನು ಡಿಪ್‌ನಲ್ಲಿ ಹಂಚಿಕೆ ಮಾಡುವ ಕುರಿತು ಚಿಂತನೆ ನಡೆಸುತ್ತೇವೆ ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ತಿಳಿಸಿದ್ದಾರೆ.

ಧರ್ಮಾ ರೆಡ್ಡಿ ಅವರು ಡಯಲ್ ಯುವರ್ ಈವೋ ಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಆಫ್ ಲೈನ್ ಲಕ್ಕಿ ಡಿಪ್ ಸಂದೇಶಗಳು ಬರುತ್ತಿಲ್ಲ. ಸಂದೇಶಗಳು ಬರುವಂತೆ ಕ್ರಮ ಕೈಗೊಳ್ಳುವಂತೆ ಕೆಲವರು ಕೋರಿದರು. ಆಫ್‌ಲೈನ್ ಲಕ್ಕಿ ಡಿಪ್ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊಬೈಲ್ ಸಿಗ್ನಲ್‌ಗಳು ಕಳಪೆಯಾಗಿದ್ದರಿಂದ ಕೆಲವು ಭಕ್ತರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆ ತಪ್ಪಿಸಲು ಸಿಗ್ನಲ್ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಎಲ್ಲ ಮೊಬೈಲ್ ಕಂಪನಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಾಗಿದೆ ಎಂದು ಧರ್ಮಾ ರೆಡ್ಡಿ ಹೇಳಿದರು.

Tirupati Darshan Ticket Increase for Summer holidays

ಇದೇ ವೇಳೆ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ವಿತರಣೆಯನ್ನು ಪುನರಾರಂಭಿಸಲು ವಿನಂತಿಸಲಾಯಿತು. ದಾನಿಗಳ ನೆರವಿನಿಂದ ತಿರುಮಲದಲ್ಲಿ 120 ಆರ್‌ಒ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕಡೆ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದರು. ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನ ಕಂಪಾರ್ಟ್‌ಮೆಂಟ್‌ಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಧರ್ಮಾ ರೆಡ್ಡಿ ಹೇಳಿದರು.

ಬೇಸಿಗೆ ರಜೆಯಲ್ಲಿ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಸಮಯವನ್ನು ಮೀಸಲಿಡುವುದು ತಮ್ಮ ಆದ್ಯತೆಯಾಗಿದೆ. ಆಫ್‌ಲೈನ್ ಲಕ್ಕಿ ಡಿಪ್ ಮೂಲಕ ವಿಐಪಿ ದರ್ಶನವನ್ನು ಪರಿಚಯಿಸುವ ಸಾಧ್ಯತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಆಂಧ್ರಪ್ರದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ತಿರುಮಲದಲ್ಲಿ ವಿಐಪಿ ದರ್ಶನದ ಮೇಲಿನ ನಿರ್ಬಂಧಗಳು ಜಾರಿಗೆ ಬಂದಿವೆ. ತಿರುಮಲ ಶ್ರೀವಾರಿ ಟ್ರಸ್ಟ್ ಚುನಾವಣಾ ನೀತಿ ಸಂಹಿತೆಯಿಂದಾಗಿ ಮಾರ್ಚ್ 16 ರಿಂದ ವಿಐಪಿ ಶಿಫಾರಸು ಪತ್ರಗಳನ್ನು ರದ್ದುಗೊಳಿಸಿದೆ.

ಹೀಗಾಗಿ ಶ್ರೀವಾರಿ ಟ್ರಸ್ಟ್ ಗೆ 10 ಸಾವಿರ ರೂ. ದೇಣಿಗೆ ನೀಡಿ 500 ರೂ. ದರ್ಶನ ಟಿಕೆಟ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ತಿರುಮಲದಲ್ಲಿ ಆಫ್‌ಲೈನ್ ಕೋಟಾವನ್ನೂ ಹೆಚ್ಚಿಸಲಾಗಿದ್ದು, ಕೌಂಟರ್‌ಗಳನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಲಾಗಿದೆ. ಪರಿಣಾಮವಾಗಿ 15 ದಿನಗಳಲ್ಲಿ 22,752 ಶ್ರೀವಾರಿ ಟಿಕೆಟ್‌ಗಳನ್ನು ಖರೀದಿಸಲಾಗಿದೆ. ಇದರಿಂದ ಟ್ರಸ್ಟ್‌ಗೆ 22.75 ಕೋಟಿ ರೂ. ಆದಾಯ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+