One Day Trip: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿಗಳ ಭಕ್ತರಿಗಾಗಿ ಇಲ್ಲಿದೆ ಟ್ರೈನ್‌ಗಳ ಬಗ್ಗೆ ಮಾಹಿತಿ
ಒಂದೇ ದಿನದಲ್ಲಿ ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗಿ ಗುರುರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಮಾಡಿ ವಾಪಸ್ಸು ಬರಬೇಕಾ? ಅದು ಕೂಡ ಟ್ರೈನ್ ಜರ್ನಿಯಲ್ಲಿ ಮಂತ್ರಾಲಯ ಹೋಗಬೇಕು ಅಂದುಕೊಂಡಿದ್ದೀರಾ? ಹಾಗಾದರೆ ಗುರುರಾಘವೇಂದ್ರ ಸ್ವಾಮಿಗಳ ಭಕ್ತರಿಗಾಗಿ ಇಲ್ಲಿದೆ ಟ್ರೈನ್‌ಗಳ ಬಗ್ಗೆ ಮಾಹಿತಿ.
ಗುರುರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬಹಳ ಹತ್ತಿರದ ರೈಲ್ವೇ ಸ್ಟೇಷನ್ ಅಂದರೆ ಅದು ಮಂತ್ರಾಲಯ ರೋಡ್ ರೈಲ್ವೇ ಸ್ಟೇಷನ್. ಇದು ಮಠದಿಂದ 15 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಬೆಂಗಳೂರಿನಿಂದ ಹಲವಾರು ಟ್ರೈನ್‌ಗಳಿವೆ. ಆದರೆ ನಿಮ್ಮ ಒನ್ ಡೇ ಪ್ಲ್ಯಾನ್‌ಗೆ ಸೂಟ್ ಆಗುವಂತಹ ಟ್ರೈನ್ ಗಳು ಯಾವವು ಅನ್ನೋದನ್ನು ಈಗ ತಿಳಿಯೋಣ.

ಬೆಂಗಳೂರಿನಿಂದ ಮಂತ್ರಾಲಯಕ್ಕೆ ನೇರ ರೈಲು ಸಂಪರ್ಕ:
ಬೆಂಗಳೂರಿನಿಂದ ಬಸವ ಎಕ್ಸ್‌ಪ್ರೆಸ್, ನಾಂದೇಡ್ ಎಕ್ಸ್‌ಪ್ರೆಸ್, ಲಾತೂರ್ ಎಕ್ಸ್‌ಪ್ರೆಸ್ ಹಾಗೂ ಕರ್ನಾಟಕ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಂತ್ರಾಲಯಕ್ಕೆ ಹೋಗಬಹುದು.
*ಬಸವ ಎಕ್ಸ್‌ಪ್ರೆಸ್ ರೈಲು ಬೆಂಗಳೂರು ಕೆಂಪೇಗೌಡ ರೈಲು ನಿಲ್ದಾಣದಿಂದ ಸಂಜೆ 4.49ಕ್ಕೆ ಹೊರಟು ಬೆಳಗ್ಗೆ 12.9ಕ್ಕೆ ಮಂತ್ರಾಲಯಕ್ಕೆ ತಲುಪಲಿದೆ.
*ನಾಂದೇಡ್ ಎಕ್ಸ್‌ಪ್ರೆಸ್ ರೈಲು ರಾತ್ರಿ11.30ಕ್ಕೆ ಹೊರಟು ಬೆಳಿಗ್ಗೆ 7.09ಕ್ಕೆ ಮಂತ್ರಾಲಯ ತಲುಪಲಿದೆ.
*ಇನ್ನೂ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಕೆಂಪೇಗೌಡ ರೈಲು ನಿಲ್ದಾಣದಿಂದ ಸಂಜೆ 7.20ಕ್ಕೆ ಹೊರಟು ಬೆಳಿಗ್ಗೆ 2.24ಕ್ಕೆ ಮಂತ್ರಾಲಯ ತಲುಪಲಿದೆ.
*ಲಾತೂರ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ ರೈಲು ನಿಲ್ದಾಣದಿಂದ ಸಂಜೆ 7.15ಕ್ಕೆ ಹೊರಟು ಬೆಳಗ್ಗೆ 1.20ಕ್ಕೆ ಮಂತ್ರಾಲಯ ರೋಡ್ ರೈಲ್ವೇ ಸ್ಟೇಷನ್ ತಲುಪಲಿದೆ.

ಮಂತ್ರಾಯಲದಲ್ಲಿ ಭೇಟಿ ನೀಡುವ ಸ್ಥಳಗಳು:
ರೈಲ್ವೇ ಸ್ಟೇಷನ್‌ನಿಂದ ಆಟೋ ಅಥವಾ ಕ್ಯಾಬ್ ಮಾಡಿಕೊಂಡು ಮಂತ್ರಾಲಯವನ್ನು ತಲುಪಬಹುದು. ಮಠದ ಸಮೀಪ ರೂಮ್ ಬುಕ್ ಮಾಡಿದ್ದರೆ ಅನುಕೂಲವಾಗುತ್ತದೆ. ಬೆಳಿಗ್ಗೆ ರೂಮ್‌ಗೆ ಹೋಗಿ ಸ್ವಲ್ಪ ಹೊತ್ತು ರೆಸ್ಟ್ ಮಾಡಿ. ಬೆಳಿಗ್ಗೆ ಎದ್ದು ಫ್ರೆಸ್ ಅಪ್ ಆಗಿ. ಬೆಳಿಗ್ಗೆನೇ ಗುರುರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಹೋದರೆ ಬೆಳಿಗ್ಗೆ 10 ರಿಂದ 11 ಗಂಟೆಯ ಒಳಗೆ ರಾಯರ ದರ್ಶನ ಮುಗಿಯುತ್ತದೆ.
ಬಳಿಕ ಆಟೋ ಅಥವಾ ಕ್ಯಾಬ್ ಅನ್ನು ಮಾಡಿಕೊಂಡು ಗುರುರಾಘವೇಂದ್ರ ಸ್ವಾಮಿಗಳ ನೆಚ್ಚಿನ ಶಿಷ್ಯ ಅಪ್ಪಣ್ಣಾಚಾರ್ಯರ ಮನೆಗೆ ಹೋಗಬಹುದು. ಇಲ್ಲಿ ಗುರುರಾಘವೇಂದ್ರ ಸ್ವಾಮಿಗಳು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳ ನೋಡ್ಕೊಂಡು ಏಕಶಿಲ ಬೃಂದಾವನದ ದರ್ಶನ ಮಾಡಬಹುದು.
ಅಲ್ಲಿಂದ ಪಂಚಮುಖಿ ಆಂಜನೇಯ ಸ್ವಾಮಿ ದರ್ಶನ ಮಾಡಿ. ನಂತರ ಅಭಯಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯನ ಆಶೀರ್ವಾದ ಪಡೆದುಕೊಂಡು ವಾಪಸ್ ಬಂದು ಮಂತ್ರಾಯಲಕ್ಕೆ ಬಂದು ನಿಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಟ್ರೈನ್ ಹತ್ತಬಹುದು.

ಮಂತ್ರಾಲಯದಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ:
ವಾಪಸ್ ಬರಲು ಬೆಸ್ಟ್ ಆಫ್ಷನ್ ಆಗಿರುವ ಟ್ರೈನ್ ಅಂದರೆ ಒಂದು ನಾಂದೇಡಿ ಎಕ್ಸಪ್ರೆಸ್ ಹಾಗೂ ಉದ್ಯಾನ್ ಎಕ್ಸ್‌ಪ್ರೆಸ್ ಸಂಜೆ ಹತ್ತಬಹುದು. ನಾಂದೇಡಿ ಎಕ್ಸಪ್ರೆಸ್ ರೈಲು ರಾತ್ರಿ 8.45ಕ್ಕೆ ಮಂತ್ರಾಲಯದಿಂದ ಹೊರಟು ಬೆಳಿಗ್ಗೆ 4ಕ್ಕೆ ಕೆಂಪೇಗೌಡ ರೈಲು ನಿಲ್ದಾಣ ಬಂದು ತಲುಪುತ್ತದೆ. ಉದ್ಯಾನ್ ಎಕ್ಸ್‌ಪ್ರೆಸ್ ರಾತ್ರಿ 8.45ಕ್ಕೆ ಮಂತ್ರಾಲಯದಿಂದ ಹೊರಟು ಬೆಳಿಗ್ಗೆ 6ಕ್ಕೆ ಕೆಂಪೇಗೌಡ ರೈಲು ನಿಲ್ದಾಣ ಬಂದು ತಲುಪುತ್ತದೆ.
ನೀವು ಮಂತ್ರಾಲಯಕ್ಕೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ, ಈ ರೈಲುಗಳ ಮೂಲಕ ಪ್ರಯಾಣ ಮಾಡಬಹುದು. ಒಂದೇ ದಿನದಲ್ಲಿ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದುಕೊಂಡು ಬೆಂಗಳೂರಿಗೆ ವಾಪಸ್ ಬಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಮೈಂಡ್ ಫ್ರೀ ಮಾಡಿಕೊಂಡು ನಿರತರಾಗಬಹುದು.












Click it and Unblock the Notifications