ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ ಈಶ್ವರಪ್ಪಾ ಹೆಲಿಕಾಪ್ಟರಿನಲ್ಲಿ ಅಕ್ರಮ ಹಣ ಸಿಕ್ತು

By Srinath
|
Google Oneindia Kannada News

eshwarappa-helicopter-yields-rs-61000-election-misfund
ಯಾದಗಿರಿ, ಏ.30: ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲು ಇನ್ನು 3 ದಿನ ಬಾಕಿಯಿದೆ. ಈ ಮಧ್ಯೆ ಪಕ್ಷಭೇದ ಮರೆತು ಅಭ್ಯರ್ಥಿಗಳ ಹಾರಾಟ ಗಗನ ತಲುಪಿದೆ. ಸಾಧ್ಯವಾದಷ್ಟೂ ಹೆಚ್ಚು ಹೆಚ್ಚು ಮತದಾರರನ್ನು ತಮ್ಮತ್ತ ಸೆಳೆಯಲು ಹಾತೊರೆಯುತ್ತಿರುವ ಪ್ರಭಾವಿ ಅಭ್ಯರ್ಥಿಗಳು ಸಮಯದ ಅಭಾವವೆಂದು ಹೆಲಿಕಾಪ್ಟರುಗಳಲ್ಲಿ ಹಾರುತ್ತಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಇಂದು ಬೆಳಗ್ಗೆ ರಾಜ್ಯದ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ಯಾದಗಿರಿ ಜಿಲ್ಲೆಯ ಗುರಮಠ್ಕಲ್ ಕ್ಷೇತ್ರದತ್ತ ಹೆಲಿಕಾಪ್ಟರಿನಲ್ಲಿ ಹಾರಿಹೋಗುತ್ತಿದ್ದಾರೆಂದು ಮಾಹಿತಿ ಪಡೆದ ಚುನಾವಣಾ ಅಧಿಕಾರಿಗಳು ತಕ್ಷಣ ಆ ಹೆಲಿಕಾಪ್ಟರ್ ಭೂಮಿಯ ಮೇಲೆ ಇಳಿಯುವುದನ್ನೇ ಕಾಯುತ್ತಿದ್ದು ತಪಾಸಣೆ ನಡೆಸಿದ್ದಾರೆ.

ಜಿಲ್ಲೆಯ ಗುರುಮಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಿರೀಶ್ ಮಟ್ಟಣ್ಣವರ್ ಪರ ಪ್ರಚಾರ ಮಾಡಲು ಈಶ್ವರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಈ ವೇಳೆ ಹೆಲಿಕಾಪ್ಟರಿನಲ್ಲಿ ಭಾರಿ ಪ್ರಮಾಣದ ಮೊತ್ತ ಪತ್ತೆಯಾಗಿದೆ. ಆದರೆ ಅಷ್ಟು ಮೊತ್ತಕ್ಕೆ ಯಾವುದೇ ಸಮರ್ಪಕ ದಾಖಲೆಗಳು ಇಲ್ಲವಾದ ಕಾರಣ ಅದು ಅಕ್ರಮ ಹಣವೆಂದು ಪರಿಗಣಿಸಿದ ಅಧಿಕಾರಿಗಳು ಅಷ್ಟೂ ಮೊತ್ತವನ್ನು ಜಪ್ತಿ ಮಾಡಿ, ವಶಪಡಿಸಿಕೊಂಡಿದ್ದಾರೆ.

ಅಂದಹಾಗೆ, ಹಾಗೆ ಅಕ್ರಮವಾಗಿ ಈಶ್ವರಪ್ಪ ಅವರು ಸಾಗಿಸುತ್ತಿದ್ದ ಒಟ್ಟು ಮೊತ್ತ 61,400 ರೂಪಾಯಿ. ಈಶ್ವರಪ್ಪ ವಿರುದ್ಧ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಪಾಸಣೆ ನಂತರ, ಈಶ್ವರಪ್ಪ ಅವರು ರಾಯಚೂರಿನತ್ತ ಪ್ರಯಾಣ ಬೆಳೆಸಿದರು.

ಗಂಗಾವತಿಯಲ್ಲೂ: ಇಲ್ಲಿನ ಎಪಿಎಂಸಿ ಸದಸ್ಯರೊಬ್ಬರೊಬ್ಬರು ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.6 ಲಕ್ಷ ರೂ ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮದ್ಯದ ಹೊಳೆ: 2 ಲಾರಿಗಳಲ್ಲಿ ನಗರದತ್ತ ಸಾಗಿಸುತ್ತಿದ್ದ ಸುಮಾರು 20 ಲಕ್ಷ ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿಗಳನ್ನೂ ವಶಪಡಿಸಿಕೊಂಡಿದ್ದಾರೆ.

English summary
Karnataka Assembly Election - Rs 61000 illegal money was found during election campaign in BJP minister KS Eshwarappa Helicopter at Yadgir Dist on April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X